ಬಿರುಗಾಳಿ, ಮಳೆಗೆ ನೆಲ್ಲಕ್ಕುರುಳಿದ ಮರ

ಬಿರುಗಾಳಿ, ಮಳೆಗೆ ನೆಲ್ಲಕ್ಕುರುಳಿದ ಮರ

ಬಿರುಗಾಳಿ, ಮಳೆಗೆ ನೆಲ್ಲಕ್ಕುರುಳಿದ ಮರ

ಕಮಲನಗರ: ತಾಲ್ಲೂಕಿನ ಡಿಗ್ಗಿ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಬೀಸಿದ ಬಿರುಗಾಳಿಗೆ ಮನೆಗಳ ಮೇಲಿನ ತಗಡಾ(ಪತ್ರಾ) ಹಾರಿಹೋಗಿದ್ದಲ್ಲದೇ ಮರಗಳು ಉರುಳಿ ಬಿದ್ದಿವೆ.

ರಾತ್ರಿ 11 ಗಂಟೆಗೆ ಆರಂಭವಾದ ಬಿರುಗಾಳಿಯಿಂದ ಕೂಡಿದ ಮಳೆ ಐದಾರು ನಿಮಿಷ ಬಂದಿತ್ತು. ಮನೆ ಮೇಲಿನ ಪತ್ರಾ(ತಗಡಾ) ಶೀಟ್ ಹಾರಿಹೋಗಿದ್ದಲ್ಲದೇ ಮನೆಯ ಮುಂಭಾಗದಲ್ಲಿದ್ದ ದೊಡ್ಡ ಮರಗಳು ಗಾಳಿಯ ರಭಸಕ್ಕೆ ಉರುಳಿ ಬಿದ್ದವು ಎಂದು ರವೀಂದ್ರ ಬೆಂಬುಳಗೆ ತಿಳಿಸಿದರು.

ಕಮಲನಗರದಲ್ಲಿ ರಾತ್ರಿ ಅಲ್ಲದೇ ಬೆಳ್ಳಗ್ಗಿನ 7 ಗಂಟೆಯವರೆಗೂ ತುಂತುರು ಮಳೆಯಾಯಿತು. 8.2 ಮಿಲಿ ಮೀಟರ್ ಮಳೆ ಸುರಿದಿದ್ದು ದಾಖಲಾಗಿದೆ. ಅಕಾಲಿಕ ಮಳೆ ಬಿರುಗಾಳಿಗೆ ತಾಲ್ಲೂಕಿನ ಖತಗಾಂವ್, ಡೋಣಗಾಂವ್, ಹೋಳಸಮುದ್ರ ರಸ್ತೆಯಲ್ಲಿಮ ಬಹಳಷ್ಟು ಹಳ್ಳಿಗಳಲ್ಲಿ ಕಟಾವಿಗೆ ಬಂದಿದ್ದ ತೋಟದ ಬೆಳೆಗಳಿಗೆ ಹಾನಿಯಾಗಿದೆ.

ಬೆಳೆ ಹಾನಿ ಮತ್ತು ಮನೆಹಾನಿಯಾಗಿರುವವರ ನೆರವಿಗೆ ಸರ್ಕಾರ ಬರಬೇಕು. ಬೆಳೆ ಹಾನಿಗೆ ಸುಕ್ತ ಪರಿಹಾರ ನೀಡಬೇಕು. ವಸತಿ ಯೋಜನೆಯಡಿ ಬಡವರಿಗೆ ಮನೆ ಮಂಜೂರು ಮಾಡಬೇಕು ಎಂದು ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಒತ್ತಾಯಿಸಿದ್ದಾರೆ.