ಹೆಣ್ಣು ಬಾರವಲ್ಲ ಭರವಸೆ ಮೂಡಿಸುವ ಶಕ್ತಿ - ಸವಿತಾ ಟೋಕಪುರ

ಹೆಣ್ಣು ಬಾರವಲ್ಲ ಭರವಸೆ ಮೂಡಿಸುವ ಶಕ್ತಿ - ಸವಿತಾ ಟೋಕಪುರ

ಹೆಣ್ಣು ಬಾರವಲ್ಲ ಭರವಸೆ ಮೂಡಿಸುವ ಶಕ್ತಿ - ಸವಿತಾ ಟೋಕಪುರ

ಶಹಪುರ : ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಸ್ವಾವಲಂಬಾಗಿ ಪ್ರತಿ ಕ್ಷೇತ್ರದಲ್ಲೂ ಬದುಕುತ್ತಿದ್ದಾಳೆ,ಹೆಣ್ಣೆಂದರೆ ಭಾರವಲ್ಲ ಭರವಸೆಯ ಮೂಡಿಸುವ ಶಕ್ತಿ ಎಂದು ಉಪನ್ಯಾಸಕಿ ಸವಿತಾ ಟೋಕಾಪೂರ ಹೇಳಿದರು.

ಶಹಪುರ ಪಟ್ಟಣದ ಇಂದಿರಾ ನಗರದ ಸಮುದಾಯ ಭವನದಲ್ಲಿ ಕಲಾನೀಕೇತನ ಟ್ರಸ್ಟ್ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕೀಯರಿಗೆ ಗೌರವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜ್ಞಾನ ವಿಕಾಸ ತರಬೇತಿ ಕೇಂದ್ರದ ಮುಖ್ಯಸ್ಥರಾದ ರೇಣುಕಾ ಮಾತನಾಡಿ ಇದು ಲಿಂಗ ಸಮಾನತೆಗಾಗಿ ಪ್ರತಿಪಾದಿಸುವುದರ ಜೊತೆಗೆ ಮಹಿಳೆಯರ ಸಾಮಾಜಿಕ,ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ವಿಶೇಷ ದಿನವಾಗಿದೆ ಎಂದು ನುಡಿದರು.

ಮಹಿಳೆಯರಿಗಾಗಿ ಸಮಾನ ಹಕ್ಕುಗಳು ಮತ್ತು ಸಮಾನ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಸಾವಲಂಬನೆ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಇನ್ನೊಬ್ಬರಿಗೆ ಮಾದರಿಯಾಗಿ ಉತ್ತಮ ಜೀವನ ನಡೆಸುತ್ತಿದ್ದ ಮಹಿಳಾ ಸಾಧಕೀಯರನ್ನು ಗುರುತಿಸಿ ಗೌರವಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ ನಾಡಿದರು,ಈ ಸಮಾರಂಭದ ವೇದಿಕೆಯ ಮೇಲೆ ಮಹಿಳಾ ಮುಖಂಡರಾದ ಸರಸ್ವತಿ,ದೇವೇಂದ್ರಪ್ಪ ವಿಶ್ವಕರ್ಮ ಕನ್ಯಾಕುಳ್ಳೂರ,ಕರ್ನಾಟಕ ರಾಜ್ಯ ನೌಕರ ಸಂಘ ಶಹಾಪುರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಸಜ್ಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.