ವಿಧಾನ ಪರಿಷತ್ ಕಲಾಪವನ್ನು ಯಶಸ್ವಿಯಾಗಿ ನಡೆಸಿದ ತಿಪ್ಪಣ್ಣಪ್ಪ ಕಮಕ್ನೂರ್
ವಿಧಾನ ಪರಿಷತ್ ಕಲಾಪವನ್ನು ಯಶಸ್ವಿಯಾಗಿ ನಡೆಸಿದ ತಿಪ್ಪಣ್ಣಪ್ಪ ಕಮಕ್ನೂರ್
ಕಲಬುರಗಿ: ಇಂದು ದಿನಾಂಕ 16-03-2026 ರಂದು ನಡೆದ ವಿಧಾನ ಪರಿಷತ್‌ನ 158ನೇ ಅಧಿವೇಶನದ 7ನೇ ದಿನದ ಕಲಾಪದಲ್ಲಿ ಕೋಳಿ ಸಮಾಜದ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣಪ್ಪ ಕಮಕ್ನೂರ್ ಅವರು ಸಭಾಪತಿ ಶ್ರೀ ಬಸವರಾಜ್ ಹೊರಟ್ಟಿ ಅವರ ಸ್ಥಾನದಲ್ಲಿ ಕುಳಿತು ಸದನವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಸಭಾಪತಿಗಳ ಗೈರುಹಾಜರಿಯಲ್ಲಿ ಸದನದ ಕಾರ್ಯವೈಖರಿಯನ್ನು ಸಮರ್ಥವಾಗಿ ನಿರ್ವಹಿಸಿದ ತಿಪ್ಪಣ್ಣಪ್ಪ ಕಮಕ್ನೂರ್ ಅವರು ಶಾಸಕ ಮಾತ್ರವಲ್ಲದೆ ಸಮರ್ಥ ಸಭಾಪತಿಗಳಾಗಿಯೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಕಲಾಪವನ್ನು ಸಮರ್ಪಕವಾಗಿ ನಡೆಸಿದ ಅವರ ಕಾರ್ಯವೈಖರಿಯನ್ನು ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆತ್ಮೀಯರಾದ ಆನಂದ್ ಕೆ. ಹೊನಗುಂಟಿ ಅವರು ಹರ್ಷ ವ್ಯಕ್ತಪಡಿಸಿ, ತಿಪ್ಪಣ್ಣಪ್ಪ ಕಮಕ್ನೂರ್ ಅವರು ಯುವ ರಾಜಕಾರಣಿಗಳಿಗೆ ಮಾದರಿಯಾದ ನಾಯಕರೆಂದು ಹೇಳಿದರು. ಅನೇಕ ಯುವಕರು ಹಾಗೂ ಹಿರಿಯ ಪಕ್ಷದ ಮುಖಂಡರು , ಸಂತೋಷ ವ್ಯಕ್ತಪಡಿಸಿ ಅಭಿನಂದಿಸಿದರು.
