ತಿರಂಗ ನಮ್ಮ ಹೃದಯಬಡಿತ: ಯಾರಿ

ತಿರಂಗ ನಮ್ಮ ಹೃದಯಬಡಿತ: ಯಾರಿ

ತಿರಂಗ ನಮ್ಮ ಹೃದಯಬಡಿತ: ಯಾರಿ

ವಾಡಿ: 'ತಿರಂಗ' ಕೇವಲ ಒಂದು ಧ್ವಜವಲ್ಲ ಇದು ನಮ್ಮೆಲ್ಲರ ಹೃದಯಬಡಿತವಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹರ ಗರ್ ತಿರಂಗಾ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮೆಲ್ಲರ ಸ್ವಾಭಿಮಾನದ ಹೆಮ್ಮೆ, ಏಕತೆ ಮತ್ತು ತಾಯ್ನಾಡಿನ ಮೇಲಿನ ಪ್ರೀತಿಯನ್ನು‌ ಈ ತಿರಂಗ ಅಭಿಯಾನ ಪ್ರತಿಬಿಂಬಿಸುತ್ತದೆ.

ಸ್ವಾತಂತ್ರ್ಯೋತ್ಸವದ ಮುನ್ನ  ನಾವೆಲ್ಲರೂ ನಮ್ಮಗಳ ನಿವಾಸದ ಮೇಲೆ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸಿ, ನಮ್ಮ ರಾಷ್ಟ್ರಧ್ವಜವನ್ನು ಗೌರವಿಸಲು ಮತ್ತು ದೇಶಭಕ್ತಿಯ ಭಾವನೆಯನ್ನು ಸಂಭ್ರಮಿಸುವುದರ ಜೊತೆಗೆ ನಮಗೆ ಸ್ವಾತಂತ್ರ ಭಾರತ ಕೊಟ್ಟ ಮಹನೀಯರ ಸ್ಮರಿಸಿಸುವುದೇ ನಮ್ಮೆಲ್ಲ ಭಾರತೀಯರ ಭಾಗ್ಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶಾ ಜಿರೋಳ್ಳಿ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಅರ್ಜುನ ಕಾಳೆಕರ, ಹರಿ ಗಲಾಂಡೆ, ಮಲ್ಲಿಕಾರ್ಜುನ ಸಾತಖೇಡ, ಕಿಶನ ಜಾಧವ, ಅಂಬದಾಸ ಜಾಧವ, ರಮೇಶ ಜಾಧವ, ಕಾಶಿನಾಥ ಶೆಟಗಾರ, ಗುಂಡುಗೌಡ ಚಾಮನೂರ, ವಿಶ್ವರಾಧ್ಯ ತಳವಾರ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಶರಣಮ್ಮ ಯಾದಗಿರಿ, ಪ್ರಕಾಶ ದಂಡೋತಿ, ಕಲ್ಲಪ್ಪ, ಲಿಂಗಪ್ಪ ತಳವಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.