“ಶರಣ ದರ್ಶನ” ವಚನೋತ್ಸವ ಉಪನ್ಯಾಸ ಮಾಲೆ ಕಾರ್ಯಕ್ರಮ ಕಾಯಕ ಮೂಲಕ ಅರಿವಿನ ದಾರಿ ತೋರಿಸಿದ ಶರಣರು - ಶರಣು ಪಪ್ಪಾ
- “ಶರಣ ದರ್ಶನ” ವಚನೋತ್ಸವ ಉಪನ್ಯಾಸ ಮಾಲೆ ಕಾರ್ಯಕ್ರಮ
- ಕಾಯಕ ಮೂಲಕ ಅರಿವಿನ ದಾರಿ ತೋರಿಸಿದ ಶರಣರು
- - ಶರಣು ಪಪ್ಪಾ
ಅನೇಕ ಶೋಷಿತ ವರ್ಗಗಳ ಜನರಿಗೆ ಕಾಯಕ ಮಾಡಲು ಉತ್ತೇಜಿಸಿ ಸಮಾಜದ ಎಲ್ಲಾ ವರ್ಗಗಳ ಶರಣ ಶರಣೇಯರಿಗೆ ಕಾಯಕದೊಡನೆ ಬರೆಯುವ ಆಸಕ್ತಿ ಮೂಡಿಸಿ ಅವರಿಗೆ ಕಾಯಕದ ಮೂಲಕ ಅರಿವಿನ ದಾರಿ ತೋರಿಸಿದವರೆ ವಿಶ್ವಗುರು ಬಸವಣ್ಣನವರು.
೧೨ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲಾ ಶರಣರನ್ನು ಒಗ್ಗೂಡಿಸಿ ಸಮಾನತೆಯ ತತ್ವ ಪಸರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎನ್ನುತ್ತಾ ಶರಣ ದರ್ಶನ ಎಂಬ ವಚನೋತ್ಸವ ಕಾರ್ಯಕ್ರಮದ ಮೂಲಕ ಮನೆ ಮನೆಗೆ ವಚನ ಸಾಹಿತ್ಯ ಬಿತ್ತರಿಸುವ ಕಾರ್ಯ ಶ್ಲಾಘನೀಯ ಎಂದು ಎಂ.ಜಿ. ರಸ್ತೆಯಲ್ಲಿರುವ ಬೈಯೋಪ್ಲಾಸ್ಮಿಡ್ ಹೆಲ್ತ್ಕೇರ್‌ನಲ್ಲಿ ನಡೆದ ಶರಣ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಚೇಂಬರ್ ಆಪ್ ಕಾಮರ್ಸ್ ಅಧ್ಯಕ್ಷರಾದ ಶರಣು ಪಪ್ಪಾರವರು ಮಾತನಾಡಿದರು.
ಮಾನವ ಜೀವನದ ಸಾರವನ್ನು ಅತ್ಯಂತ ಸರಳ ನುಡಿಗಳಲ್ಲಿ ಸಮಾಜಕ್ಕೆ ತಿಳಿಸಿದ ಮನುಕುಲ ಉದ್ಧಾರಕ ಬಸವಣ್ಣನವರು ನಾಡಿನ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿರುವುದು, ಅತ್ಯಂತ ಅರ್ಥಪೂರ್ಣ ಕಾರ್ಯ ಎಂದು ವೀರಣ್ಣ ದಂಡೆರವರು ಉಪನ್ಯಾಸ ಮಾಡಿದರು.
ಬಿ.ಕೆ. ಹಳ್ಳಿ, ರವೀಂದ್ರ ತೆಗನೂರ, ಜಗನ್ನಾಥ ರಾಚೋಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಗನ್ನಾಥ ರಾಚೋಟಿ ಸ್ವಾಗತಿಸಿದರು. ವಚನೋತ್ಸವ ಪ್ರತಿಷ್ಠಾನ ಕಾರ್ಯದರ್ಶಿ ಬಸವರಾಜ ಧೂಳಾಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ನಿರೂಪಿಸಿದರು. ಕಲ್ಯಾಣಪ್ಪ ಬಿರಾದಾರ, ವಿಶ್ವನಾಥ ಮಂಗಲಗಿ ಪ್ರಾರ್ಥನೆ ಮಾಡಿದರು. ಸಿದ್ರಾಮ ಹಂಚಿನಾಳ ನಾಳಿನ ಕಾರ್ಯಕ್ರಮ ಪ್ರಕಟಿಸಿದರು ಡಾ. ಮಲ್ಲಿಕಾರ್ಜುನ ವಡ್ಡನಕೇರಿ ವಂದಿಸಿದರು.

