ಪುರಾಣ ಕೇಳುವುದರಿಂದ ಧಾರ್ಮಿಕ ಚಿಂತನೆಗಳನ್ನು ಹೆಚ್ಚುತ್ತವೆ: ಅಪ್ಪಾರಾವ ದೇವಿ ಮುತ್ಯಾ
ಪುರಾಣ ಕೇಳುವುದರಿಂದ ಧಾರ್ಮಿಕ ಚಿಂತನೆಗಳನ್ನು ಹೆಚ್ಚುತ್ತವೆ: ಅಪ್ಪಾರಾವ ದೇವಿ ಮುತ್ಯಾ
ಕಲಬುರಗಿ:ಟಿವಿ ಧಾರಾವಾಹಿ ನೋಡುವುದನ್ನು ಬಿಟ್ಟು ಪುರಾಣ ಪ್ರವಚನಗಳು ಕೇಳುವುದರಿಂದ ಮನುಷ್ಯನ ಧಾರ್ಮಿಕ ಚಿಂತನೆಗಳು ಹೆಚ್ಚುತ್ತದೆ.ಅದಕ್ಕಾಗಿಯೇ ಮಹಾತ್ಮರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿ ಪೀಠದ ಪೂಜ್ಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ ಅವರು ತಿಳಿಸಿದರು.
ಶ್ರಾವಣ ಮಾಸ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶಿವ ಪುರಾಣ ಹಾಗೂ 12 ಜ್ಯೋತೀರ್ಲಿಂಗಗಳ ಮಹಿಮೆ ಪುರಾಣದ ಒಂದು ತಿಂಗಳು ಪುರಾಣ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಪುರಾಣ ಕೇಳುವುದರಿಂದ ಮನುಷ್ಯನಲ್ಲಿ ಭಕ್ತಿ ಭಾವನೆ ಮೂಡುವುದಷ್ಟೇ ಅಲ್ಲ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ ಎಂದ ಅವರು ಜಯನಗರ ಶಿವಮಂದಿರದಲ್ಲಿ ಪುರಾಣದ ಜೊತೆಗೆ ಒಂದು ತಿಂಗಳು ನಿರಂತರ ದಾಸೋಹ ಕೈಗೊಳ್ಳುವ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಇಂದು ಪುರಾಣ, ಪ್ರವಚನಗಳು ಗ್ರಂಥಾಲಯಗಳಾಗಿವೆ.ಅಲ್ಲಿ ಮಹಾತ್ಮರ ತ್ಯಾಗದ ಜೀವನ ಚರಿತ್ರೆ ತಿಳಿಯಬಹುದು.ಇಂಥ ಪುರಾಣಗಳು ಇನ್ನು ಹೆಚ್ಚು ಹೆಚ್ಚು ನಡೆಯಬೇಕು.ಜಯನಗರ ಶಿವ ಮಂದಿರದಲ್ಲಿ ನಡೆಯುವ ಶಿವ ಪುರಾಣ ದಿನ ನಿತ್ಯ ಬರುವ ಮೂಲಕ ಅತ್ಯಂತ ಭಕ್ತಿಯಿಂದ ಕೇಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ಪ್ರತಿ ವರ್ಷ ಪುರಾಣ ಕೇಳಲು ಭಕ್ತರ ದಂಡೇ ಬರುತ್ತಿದೆ.ಅವರ ಕೋರಿಕೆ ಮೇರೆಗೆ ಈ ಬಾರಿ ಶಿವ ಪುರಾಣ ಹಮ್ಮಿಕೊಳ್ಳಲಾಗಿದೆ.ಒಂದು ತಿಂಗಳು ಅನ್ನ ದಾಸೋಹ ನಡೆಯುತ್ತದೆ.ಸರ್ಕಾರದ ಯಾವುದೇ ಸಹಾಯವಿಲ್ಲದೆ ಶಿವಮಂದಿರದ ಜೀರ್ಣೋದ್ಧಾರ ಕೈಗೊಳ್ಳಲಾಗಿದೆ. ಅನುದಾನದ ಹಸ್ತ ನೀಡಿದರೆ ಇನ್ನೂ ಅಭಿವೃದ್ಧಿ ಪಡಿಸಲಾಗುವುದು.ಜಯನಗರ ಶಿವಮಂದಿದಲ್ಲಿ ಪ್ರತಿ ವರ್ಷ ಶ್ರಾವಣ ಮಾಸ ಅಷ್ಟೇ ಅಲ್ಲದೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ಸಾಹಿತಿ ಹಾಗೂ ಕಥಾ ವಾಚಕರಾದ ಡಾ.ಇಂದುಮತಿ ಪಂಡಿತ ಜವಳಿ ಅವರು ಪುರಾಣ ಪ್ರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.ಮಹಿಳಾ ಘಟಕದ ಉಪಾಧ್ಯಕ್ಷೆ ಅನಿತಾ ನವಣೆ ಪ್ರಾರ್ಥಿಸಿದರು.ಉಪಾಧ್ಯಕ್ಷ ವಿರೇಶ ದಂಡೋತಿ ವಂದಿಸಿದರು.ಸಾಹಿತಿ ಜಿ.ಜಿ.ವಣಿಕ್ಯಾಳ ನಿರೂಪಿಸಿದರು.ಎಂ.ಡಿ.ಮಠಪತಿ,ಭೀಮಾಶಂಕರ ಶೆಟ್ಟಿ ,ಬಸವರಾಜ ಅನ್ವರಕರ, ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಎಸ್.ಡಿ.ಸೇಡಂಕರ,ವಿರಪ್ಪ ಹುಡುಗಿ,ಮನೋಹರ ಬಡಶೇಷಿ,ಬಂಡಪ್ಪ ಕೇಸೂರ,ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ,ಮಲ್ಲಿಕಾರ್ಜುನ ಕಲ್ಲಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ಸಾಹಿತಿ ಸುರೇಶ ಜಾಧವ,ಮಲ್ಲಿನಾಥ ಸಂಗಶೆಟ್ಟಿ, ಹಿರಿಯರಾದ ರೇವಣಸಿದ್ದಪ್ಪ ಭೋಗಶೆಟ್ಟಿ,ವಿನೋದ ಪಾಟೀಲ ಮಹಿಳಾ ಕಾರ್ಯದರ್ಶಿ ಅನುರಾಧಾ ಕುಮಾರಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಪದಾಧಿಕಾರಿಗಳಾದ ಸುರೇಖಾ ಬಾಲಕೊಂದೆ,ಲತಾ ತುಪ್ಪದ,ವಿಜಯಾ ದಂಡೋತಿ, ಗೀತಾ ಹುಡುಗಿ, ಶಿವಲೀಲಾ ಬೊಮ್ಮಣ,ಗಂಗಾ ಅನ್ವರಕರ,ಗೀತಾ ಸಿರಗಾಪೂರ, ಪಾರ್ವತಿ ಶೆಟ್ಟಿ,ನಿಲೋಚನಾ ಬೀಡಪ್, ಅಶ್ವಿನಿ ಪಾಟೀಲ, ಶೈಲಜಾ ಬೊಮ್ಮಣ ಸೇರಿದಂತೆ ಅನೇಕ ಮಹಿಳೆಯರು, ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.

