ವಿದ್ಯಾರ್ಥಿಗಳ ಶೋಷಣೆ: ಜವಳಿ ಕಾಲೇಜು ನಿಯಮ ಉಲ್ಲಂಘನೆ ಆರೋಪ”

ವಿದ್ಯಾರ್ಥಿಗಳ ಶೋಷಣೆ: ಜವಳಿ ಕಾಲೇಜು ನಿಯಮ ಉಲ್ಲಂಘನೆ ಆರೋಪ”
ಕಲಬುರಗಿ : ನಗರದಲ್ಲಿ ಇರುವ ಶ್ರೀ ಗುರುಶಾಂತಪ್ಪ ಜವಳಿ ಸ್ಮಾರಕ ಶಿಕ್ಷಣ ಸಂಸ್ಥಯ ಶ್ರೀ ಗುರುಶಾಂತಪ್ಪ ಜವಳಿ ಗ್ರಾಮೀಣ ವಸತಿ ಶಿಕ್ಷಣ ಮಹಾವಿದ್ಯಾಲಯವು ಗುಲ್ಬರ್ಗಾ ವಿಶ್ವವಿದ್ಯಾಲಯದ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಬಂದಂತೆ ಕಾಲೇಜು ನಡೆಸುತ್ತಿದ್ದಾರೆಂದು RTI ಕಾರ್ಯಕರ್ತರಾದ ಸಂಜೀವಕುಮಾರ ಭೋಸಲೆ ಆರೋಪಿಸಿದ್ದರು.
ನಗರದಿಂದ ದೂರದಲ್ಲಿ ಇರುವ ಈ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ, ಹಾಗೂ ವಿದ್ಯಾರ್ಥಿಗಳ ಹತ್ತಿರ ಹೆಚ್ಚಿನ ಹಣ ಪಡೆದು ನೇರವಾಗಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುತ್ತಾರೆ!!. ವಿಷಯಕ್ಕೆ ಅನುಗುಣವಾಗಿ ಉಪನ್ಯಾಸಕರು ಇಲ್ಲ ಹಾಗೂ ಪ್ರತಿ ದಿನ ತರಗತಿಗಳು ನಡೆಯುವುದಿಲ್ಲ, ಕೇವಲ ಹಣ ಕೇಳುತ್ತಾರೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಡಾ. ಬಿ.ಜಿ. ಜವಳಿ, ಪ್ರಾಂಶುಪಾಲರಾದ ಶ್ರೀ ನಾಗಪ್ಪ ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಿಲ್ಲ ಎಂದು ಹೆಸರು ಹೇಳದ ವಿದ್ಯಾರ್ಥಿಯೊಬ್ಬರು ನಮ್ಮ ಮಾದ್ಯಮಕ್ಕೆ ತಿಳಿಸಿದರು.
ಮುಂದಿನ ದಿನಮಾನಗಳಲ್ಲಿ ಕಲಬುರಗಿ ನಗರದ ಹಲವು ವಿದ್ಯಾರ್ಥಿ ಸಂಘಟನೆಗಳು ಸೇರಿ ವಿಶ್ವವಿದ್ಯಾಲಯದ ಎದುರುಗಡೆ ಪ್ರತಿಭಟನೆ ಮಾಡಿ, ಈ ಕಾಲೇಜಿನ ವಿರುದ್ಧ ಸೂಕ್ತ ಕ್ರಮಕೈಗೊಳ್ಳವರೆಗೆ ಬಿಡುವುದಿಲ್ಲ ಎಂದು RTI ಕಾರ್ಯಕರ್ತರಾದ ಸಂಜೀವಕುಮಾರ ಭೋಸಲೆ ತಿಳಿಸಿದರು.