ಸೆ.18 ರಂದೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ,KYF ಸಂಘಟನೆ ವತಿಯಿಂದ ಆಚರಿಸಲಾಯಿತು
ಸೆ.18 ರಂದೇ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ, (ನೈಜ ದಿನಾಚರಣೆಯ) ಅಂಗವಾಗಿ, ಕಲ್ಯಾಣ ಕರ್ನಾಟಕ ಮರು ಸ್ವಾತ್ರತೋತ್ಸವ ಆಚರಣೆ ಹಾಗೂ ನೈಜ ಹುತಾತ್ಮರಿಗೆ ನಮನರೋಹಣ ಕಾರ್ಯಕ್ರಮ, KYF ಸಂಘಟನೆ ವತಿಯಿಂದ ಆಚರಿಸಲಾಯಿತು
ಕಲಬುರಗಿ: ಹೈದರಾಬಾದ್ ಕರ್ನಾಟಕ ಪ್ರದೇಶದ ನೈಜ ವಿಮೋಚನಾ ದಿನವನ್ನು ಸೆಪ್ಟೆಂಬರ್ 18 ರಂದು ಕರ್ನಾಟಕ ಯುವಜನ ಒಕ್ಕೂಟ (KYF) ಆಚರಿಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸೆ.18 ರಂದು KYF ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿ, ಜಯಘೋಷಗಳೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಷ್ಟ್ರಗೀತೆ ಹಾಡಿ ನಮನರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
KYF ಅಧ್ಯಕ್ಷ ಅನಂತ ಗುಡಿ ಸ್ವಾಗತಿಸಿದರು. ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ವಿನೋದಕುಮಾರ ಜೆನವೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ನೈಜ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಗಣಿಸಿ ಸೆ.18 ರಂದು ಆಚರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ವಕೀಲ ಸಂಜೀವಕುಮಾರ ಡೊಂಗರಗಾಂವ್ ಮಾತನಾಡಿ, “1948 ರ ಸೆಪ್ಟೆಂಬರ್ 18 ರಂದು ನಮ್ಮ ಕಲ್ಯಾಣ ಕರ್ನಾಟಕ ಭಾಗ ನಿಜಾಮರ ಆಡಳಿತದಿಂದ ವಿಮೋಚನೆಗೊಂಡಿತು ಎಂಬುದು ನಮ್ಮ ನಂಬಿಕೆ. ಈ ಕುರಿತು ದಾಖಲೆಗಳು ಲಭ್ಯವಿದ್ದು, ಸರ್ಕಾರ ಅವುಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ತಪ್ಪುಗಳು ಆಗುವುದು ಸಹಜ; ಆದರೆ ಅವುಗಳನ್ನು ತಿದ್ದಿಕೊಳ್ಳುವುದು ನಮ್ಮ ನಡೆ-ನುಡಿಯಾಗಬೇಕು” ಎಂದರು.
“ರಾಜಕೀಯದಲ್ಲಿ ಜಾತಿ, ಮತ, ವರ್ಣ, ಪಂಗಡಗಳ ಭಿನ್ನತೆಯನ್ನು ಮನ್ನಿಸಿ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗಬೇಕು. ಇತಿಹಾಸವನ್ನು ಮರೆಯದೆ ಮುಂದಿನ ಪೀಳಿಗೆಗೆ ಅದರ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ” ಎಂದು ಅವರು ಹೇಳಿದರು.
ನೈಜ ದಿನದಂದು ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಯನ್ನು ಸರಕಾರವೇ ಆಚರಣೆ ಮಾಡುವ ಹೊಸ ಆದೇಶ ಮಾಡುವವರೆಗೂ ನಾವು ಹೀಗೆ ಮುಂದುವರಿಸುತ್ತೇವೆ ಎಂದು KYF ಹೋರಾಟಗಾರರು ಹೇಳಿದರು.
ಸಂಘಟನೆಯ ಹಿರಿಯ ಮಾರ್ಗದರ್ಶಕ ಹಾಗೂ ನಿವೃತ್ತ ಶಿಕ್ಷಕ ಎಸ್.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕೆ.ಜಿ. ಜಮಶೆಟ್ಟಿ ನಿರೂಪಿಸಿದರು. ಸಮಾಜಸೇವಕ ಉದಯಕುಮಾರ ಜೇವರ್ಗಿ ವಂದಿಸಿದರು.
ವಕೀಲರಾದ, ರಮೇಶ ದೊಡ್ಡಮನಿ, ರಾಘವೇಂದ್ರ ಕಟ್ಟಿ, ನಾಗರಾಜ ವಾಡೇಕರ, ಸಂಗಮೇಶ ಹತ್ತಿ, ನಾಗಣ್ಣ ಶೀಲವಂತ, ಅನಂತ ರೆಡ್ಡಿ, ಜಗನ್ನಾಥ ಮಂಠಾಳೆ, ಡಾ. ಬಸವರಾಜ ಚನ್ನಾ, ಸುರೇಶ ಘನಾತೆ, ಶರಣು ಪಾಟೀಲ ಜಾಪುರ್, ಯುವ ನಾಯಕ ಆನಂದ ಹೋನಗುಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವಿಷಯ ಕುರಿತು ಜಿಲ್ಲಾಧಿಕಾರಿಗಳಿಗೆ ದಿ. 16 ರಂದು ಮನವಿ ಸಂಘಟನೆ ವತಿಯಿಂದ ಸಲ್ಲಿಸಲಾಗಿದ್ದು, ಇಂದು, ಮುಖ್ಯತಾ ಭೇಟಿ ನೀಡಿ ಮನವರಿಕೆ ಮಾಡಲಾಯಿತು, ಇದನ್ನು ತಕ್ಷಣವೇ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ ಎಂದು ರಾಜ್ಯ ಸಂಚಾಲಕ ವಿನೋದಕುಮಾರ ಜೆನವೇರಿ ಯವರು ತಿಳಿಸಿದ್ದಾರೆ.

