ಕರದಾಳ ಶಕ್ತಿಪೀಠದ ಭೂದಾನಿ ಸುರೇಶ್ ಗುತ್ತೇದಾರ್ ಅಗಲಿಕೆಗೆ ಪ್ರಣವಾನಂದ ಶ್ರೀ, ಗಣ್ಯರ ಶೋಕ

ಕರದಾಳ ಶಕ್ತಿಪೀಠದ ಭೂದಾನಿ ಸುರೇಶ್ ಗುತ್ತೇದಾರ್ ಅಗಲಿಕೆಗೆ ಪ್ರಣವಾನಂದ ಶ್ರೀ, ಗಣ್ಯರ ಶೋಕ

ಕರದಾಳ ಶಕ್ತಿಪೀಠದ ಭೂದಾನಿ ಸುರೇಶ್ ಗುತ್ತೇದಾರ್ ಅಗಲಿಕೆಗೆ ಪ್ರಣವಾನಂದ ಶ್ರೀ, ಗಣ್ಯರ ಶೋಕ

 ಕಲಬುರಗಿ : ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣಪುರು ಶಕ್ತಿ ಪೀಠಕ್ಕೆ ಭೂದಾನ ಮಾಡಿದ ಈಡಿಗ ಸಮಾಜದ ಮುಂದಾಳು ಕುಡುಗೈದಾನಿ ಸುರೇಶ್ ಗುತ್ತೇದಾರ್ ಕರದಾಳ ಅವರು ಅಲ್ಪಕಾಲದಾಸೌಖ್ಯದಿಂದ ಶನಿವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ಮಠದ ಪೀಠಾಧಿಪತಿಗಳಾದ ಡಾ. ಪ್ರಣವಾನಂದ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

     ಸುರೇಶ್ ಗುತ್ತೇದಾರ್ ಚಿತ್ತಾಪುರ ತಾಲೂಕು ಕರದಾಳದವರಾಗಿದ್ದು ಕಳೆದ ಕೆಲದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ,ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

   ಮೃತರ ಪಾರ್ಥಿವ ಶರೀರದ ಅಂತಿಮ ಕ್ರಿಯೆಯು ಭಾನುವಾರ ಮಧ್ಯಾಹ್ನ 12 ಗಂಟೆಗೆ ಕರದಾಳ ಗ್ರಾಮದಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ . ಸುರೇಶ್ ಗುತ್ತೇದಾರ್ ಈಡಿಗ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದವರು ಮತ್ತು ಶಕ್ತಿ ಪೀಠದ ನಿರ್ಮಾಣಕ್ಕೆ ಭೂಮಿಯನ್ನು ಉಚಿತವಾಗಿ ನೀಡಿದ ಕೊಡುಗೈ ದಾನಿಗಳು ಹಾಗೂ ಕರ್ನಾಟಕ ಸೇನೆಯ ಕಲ್ಯಾಣ ಕರ್ನಾಟಕ ರೈತ ಸಂಘದ ಅಧ್ಯಕ್ಷರಾಗಿದ್ದವರು ಅವರ ಅಗಲುವಿಕೆ ಸಮಾಜಕ್ಕೆ ದೊಡ್ಡ ನಷ್ಟ ಎಂದು ಡಾ.ಪ್ರಣವಾನಂದ ಶ್ರೀಗಳು ಕಂಬನಿ ಮಿಡಿದಿದ್ದಾರೆ. ಮಠದ ಟ್ರಸ್ಟಿಗಳಾದ ನಿತಿನ್ ಗುತ್ತೇದಾರ್, ಮಹಾದೇವ ಗುತ್ತೇದಾರ್, ವೆಂಕಟೇಶ ಎಂ ಕಡೇಚೂರ್, ಸತೀಶ್ ಗುತ್ತೇದಾರ್, ವಿನೋದ್ ಗುತ್ತೇದಾರ್, ವೆಂಕಟೇಶ ಗುಂಡಾನೂರು ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ, ಪತ್ರಕರ್ತ ಕಾಶಿನಾಥ ಗುತ್ತೇದಾರ್ ಮತ್ತಿತರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.