ಅಕ್ಷರ ಜಾತ್ರೆ-ಬೃಹತ್ ಉದ್ಯೋಗ ಮೇಳ
ಅಕ್ಷರ ಜಾತ್ರೆ-ಬೃಹತ್ ಉದ್ಯೋಗ ಮೇಳ
ಶ್ರೀ ಎಸ್.ಎ.ವಿ.ಪಿ. ಸಮಿತಿ, ನರೇಗಲ್. ಈ ಸಂಸ್ಥೆಯ ಆವರಣದಲ್ಲಿ ಸಂಭ್ರಮದಿಂದ ಜರುಗಲಿರುವ 4ನೇ ವರ್ಷದ 'ಅಕ್ಷರ ಜಾತ್ರೆ - 2026' ರ ಸುಸಂದರ್ಭದಲ್ಲಿ, ದಿನಾಂಕ 04 ನವೆಂಬರ್ 2026 ರಂದು ಎಸ್.ಎ. ಕಾಲೇಜ್ ನರೇಗಲ್ಲಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ನಮ್ಮ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಇದು ಕೇವಲ ಒಂದು ಮೇಳವಲ್ಲ. ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿ, ನಿಮ್ಮ ಹೆತ್ತವರ ಕಣ್ಣಲ್ಲಿ ಹರ್ಷದ ಕಣ್ಣೀರು ತರಿಸುವ ಸುವರ್ಣ ಅವಕಾಶ.
ಪ್ರೀತಿಯ ವಿದ್ಯಾರ್ಥಿಗಳೇ, ನಿಮ್ಮ ಶಿಕ್ಷಣದ ಪಯಣದಲ್ಲಿ ನೀವು ಪಟ್ಟ ಶ್ರಮ, ಓದಿದ ಪರಿಶ್ರಮ, ಮತ್ತು ಉತ್ತಮ ಭವಿಷ್ಯಕ್ಕಾಗಿ ಕಂಡ ಕನಸುಗಳು ನನಸಾಗುವ ಘಳಿಗೆ ಇದು. ಪಿಯುಸಿ (PUC), ಬಿ.ಎ. (BA), ಬಿ.ಕಾಮ್ (B.Com), ಬಿ.ಎಸ್.ಸಿ (B.Sc), ಹಾಗೂ ಬಿ.ಸಿ.ಎ (BCA) ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ, ಮುಂದೇನು ಎಂಬ ಗೊಂದಲದಲ್ಲಿರುವ ನಿಮಗೆ ಈ ಉದ್ಯೋಗ ಮೇಳವು ಹೊಸ ಭರವಸೆಯ ಬೆಳಕಾಗಲಿದೆ.
ನಿಮಗೊಂದು ಗೌರವಯುತ ಜೀವನ ಕಟ್ಟಿಕೊಡಲು ದಿನವಿಡೀ ಕಷ್ಟಪಡುವ ನಿಮ್ಮ ತಂದೆ-ತಾಯಂದಿರ ಮುಖದಲ್ಲಿ ಮುಗುಳುನಗೆ ಮೂಡಿಸಲು ಇದಕ್ಕಿಂತ ದೊಡ್ಡ ಸಂದರ್ಭ ಸಿಗಲಾರದು. ಸಾಲು ಸಾಲು ಕಂಪನಿಗಳು ನಿಮ್ಮ ಮನೆಬಾಗಿಲಿಗೇ ಹುಡುಕಿಕೊಂಡು ಬರುತ್ತಿರುವಾಗ, ಅವಕಾಶವನ್ನು ಕೈಚೆಲ್ಲದೆ ಆತ್ಮವಿಶ್ವಾಸದಿಂದ ಹೆಜ್ಜೆ ಮುಂದಿಡಿ.
ಈ ಉದ್ಯೋಗ ಮೇಳದ ವಿಶೇಷತೆಗಳು:
ವಿವಿಧ ಕ್ಷೇತ್ರಗಳಲ್ಲಿ ಅವಕಾಶ:
ಐಟಿ, ಬ್ಯಾಂಕಿಂಗ್, ಆಡಳಿತ, ಮಾರ್ಕೆಟಿಂಗ್, ಸೈಂಟಿಫಿಕ್ ರಿಸರ್ಚ್ ಸೇರಿದಂತೆ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ನೂರಾರು ಅವಕಾಶಗಳು.
ಪ್ರಸಿದ್ಧ ಕಂಪನಿಗಳ ಭಾಗವಹಿಸುವಿಕೆ:
ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಸಿದ್ಧ ಸಂಸ್ಥೆಗಳು ಸ್ಥಳದಲ್ಲೇ ಸಂದರ್ಶನ ನಡೆಸಿ ನೆರವಾಗಲಿವೆ.
ಉಚಿತ ನೋಂದಣಿ:
ಯಾವುದೇ ರೀತಿಯ ಶುಲ್ಕವಿಲ್ಲದೆ ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮುಕ್ತ ವೇದಿಕೆ.
ನಿಮ್ಮಲ್ಲಿರುವ ಜ್ಞಾನ ಮತ್ತು ಪ್ರತಿಭೆಯ ಮೇಲೆ ನಿಮಗೇ ನಂಬಿಕೆ ಇರಲಿ. ಸೋಲು-ಗೆಲುವಿನ ಭಯವನ್ನು ಬದಿಗೊತ್ತಿ, ನಿಮ್ಮ ಅಂತಿಮ ಅಂಕಪಟ್ಟಿ, ಅಪ್ಡೇಟ್ ಮಾಡಿದ ರೆಸ್ಯೂಮ್ (Resume) ಹಾಗೂ ಸೂಕ್ತ ದಾಖಲೆಗಳೊಂದಿಗೆ ಈ ಮೇಳದಲ್ಲಿ ಪಾಲ್ಗೊಳ್ಳಿ.
ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ನಿಮ್ಮ ಸ್ವಾವಲಂಬನೆಯ ಜೀವನಕ್ಕೆ ಮುನ್ನುಡಿ ಬರೆಯಿರಿ.
ವಂದನೆಗಳು. ಶುಭ ಹಾರೈಸುವವರು.
ಎಸ್.ಎ.ವ್ಹಿ. ವ್ಹಿ.ಪಿ ಸಮಿತಿ, ಹಾಗೂ ಶ್ರೀ ಎಸ್. ಎ. ಕಾಲೇಜ್ ಕುಟುಂಬ, ನರೇಗಲ್.
ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

