ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂತೋಷಗೌಡ ಜಿ. ಮಾಲಿ ಪಾಟೀಲ ಅವಿರೋಧ ಆಯ್ಕೆ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂತೋಷಗೌಡ ಜಿ. ಮಾಲಿ ಪಾಟೀಲ ಅವಿರೋಧ ಆಯ್ಕೆ
ಯಡ್ರಾಮಿ: ತಾಲೂಕಿನ ಹಂಗರಗಾ (ಕೆ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಂಗರಗಾ (ಬಿ) ಗ್ರಾಮದ ಯುವ ಹೋರಾಟಗಾರ ಹಾಗೂ ನಮ್ಮ ಕರ್ನಾಟಕ ಸೇನೆಯ ಕಲ್ಯಾಣ ಕರ್ನಾಟಕ ಉಪಾಧ್ಯಕ್ಷ ಸಂತೋಷಗೌಡ ಜಿ. ಮಾಲಿ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂತೋಷಗೌಡ ಜಿ. ಮಾಲಿ ಪಾಟೀಲ ಅವರು ಸದಾ ಕ್ರಿಯಾಶೀಲರಾಗಿದ್ದು, ವಿವಿಧ ಹೋರಾಟಗಳು ಹಾಗೂ ಚಳವಳಿಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಗ್ರಾಮಸ್ಥರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರಾದ ದೊಡ್ಡಪ್ಪಗೌಡ ಎಸ್. ಪಾಟೀಲ ನರಿಬೋಳ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ ಎಸ್. ಪಾಟೀಲ ನರಿಬೋಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಿದ್ದಣ್ಣ ಹೂಗಾರ್, ಶ್ರೀಶೈಲ ಪಾಟೀಲ ಕರ್ಕೇಹಳ್ಳಿ, ಮಾಜಿ ಅಧ್ಯಕ್ಷ ಮಹಾಂತಪ್ಪ ದೊರೆ, ನಿಜಲಿಂಗದೂರಿ ಸೇರಿದಂತೆ ಹಲವು ಮುಖಂಡರು, ಸಂಘದ ಸದಸ್ಯರು ಹಾಗೂ ಹಂಗರಗಾ (ಬಿ) ಗ್ರಾಮದ ವಿವಿಧ ಸಮುದಾಯಗಳ ಸಾರ್ವಜನಿಕರು ಉಪಸ್ಥಿತರಿದ್ದು, ಸಂತೋಷಗೌಡ ಜಿ. ಮಾಲಿ ಪಾಟೀಲ ಅವರಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದರು.
ವರದಿ: ಜೆಟ್ಟೆಪ್ಪ ಎಸ್. ಪೂಜಾರಿ

