ಸಗರ ಜಿಲೇಬಿ ಜಾತ್ರೆ,ಬಲು ಜೋರು.
ಸಗರ ಜಿಲೇಬಿ ಜಾತ್ರೆ,ಬಲು ಜೋರು.
ಶಹಾಪುರ : ತಾಲೂಕಿನ ಸಗರ ಗ್ರಾಮದ ಹಿಂದೂ ಮುಸ್ಲಿಂ ಭಾವೈಕ್ಯದ ಹಜರತ್ ಮುನವರ್ ಬಾಷಾ ದರ್ಗಾ ಜಾತ್ರಾ ನಿಮಿತ್ಯ ಜಿಲೇಬಿ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಜೃಂಭಣೆಯಿಂದ ಜರುಗಿತು.
ಹಿಂದೂ ಮುಸ್ಲಿಂ ಭಾವೈಕ್ಯತೆಯ ಈ ಜಾತ್ರೆಗೆ ಗ್ರಾಮದ ಎಲ್ಲ ಜಾತಿ ಜನಾಂಗದವರು ಕೂಡಿಕೊಂಡು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮುನಾವರ ಬಾಷಾ ದರ್ಗಾದ ದರ್ಶನ ಪಡೆದು ಪುರಿತರಾಗುತ್ತಾರೆ.ಮುನವರ್ ಭಾಷಾ ದರ್ಗಾದ ಮುಂದೆ ಭಕ್ತರು ತಮ್ಮ ಆಸೆಗಳನ್ನು ಮನಸ್ಸಿನೊಳಗೆ ನೆನೆದುಕೊಳ್ಳುತ್ತಾ,ಕಲ್ಲು ಗುಂಡುಗಳನ್ನು ಕೈಯಲ್ಲಿ ಹಿಡಿದು ಸಲೀಸಾಗಿ ಎತ್ತಿದರೆ ಮುಂಬರುವ ದಿನಗಳಲ್ಲಿ ಶುಭ ಶುದ್ಧಿ ಬರುತ್ತದೆ ಎಂಬ ವಾಡಿಕೆ ಇಲ್ಲಿಯ ಜನರಲ್ಲಿದೆ.
ನಂತರ ಬಿಸಿ ಬಿಸಿ ಸಜ್ಜೆ ಜಿಲೇಬಿ ತಿನ್ನುವುದರ ಜೊತೆಗೆ ವಿವಿಧ ಬಗೆಯ ತಿಂಡಿ ತಿನಿಸುಗಳಾದ ಬೆಂಡುಭತ್ತಾಸು,ಮಂಡಕ್ಕಿ,ಸೇವಾ ಖರೀದಿಸುವುದು ಬಲುಜೋರು ಈ ಜಿಲೇಬಿ ಜಾತ್ರೆ ನಡೆಯುವುದು ಮೂರೇ ಮೂರು ತಾಸು,ಆದರೂ ಈ ಭಾಗದಲ್ಲಿ ಜಾತ್ರೆ ಬಲು ಫೇಮಸ್ಸು,
ಎತ್ತ ನೋಡಿದರತ್ತ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಜಿಲೇಬಿ ಕಣ್ಣಿಗೆ ಗೋಚರಿಸುವುದು,ಈ ಜಿಲೇಬಿಯ ಸ್ವಾದ ಸವಿಯಲೆಂದೆ ಈ ಜಾತ್ರೆಗೆ ವಿವಿದಡೆಯಿಂದ ಆಗಮಿಸುದ ಭಕ್ತರು ಹಾಗೂ ಗ್ರಾಮಕ್ಕೆ ಆಗಮಿಸಿದ ಬೀಗರು ನೆಂಟರಿಗೆ ಸ್ಥಳೀಯರು ಜಿಲೇಬಿ ಕೊಡಿಸುವುದು ವಾಡಿಕೆ,ಅಲ್ಲದೆ ಸಾಯಂಕಾಲ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸೇರಿಕೊಂಡು ಜಿಲೇಬಿಯ ರುಚಿ ಸವಿಯುವದೆ ಮತ್ತೊಂದು ವಿಶೇಷತೆ,ಒಟ್ಟಾರೆ ಜಾತ್ರೆಯಲ್ಲಿ ಜಿಲೇಬಿಯದ್ದೆ ಸದ್ದು. - ಬಸವರಾಜ ಶಿಣ್ಣೂರ

