ಅ. 6ರಂದು ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ

ಅ. 6ರಂದು ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ

ಅ. 6ರಂದು ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ: ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೆಲ್‌ಫೇರ್ ಟ್ರಸ್ಟ್‌ ವತಿಯಿಂದ ಅಕ್ಟೋಬರ್ 6ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕನ್ನಡ ಭವನದಲ್ಲಿ ಜಾನಪದ ನೃತ್ಯೋತ್ಸವ, ಕೌಶಲ್ಯಾಭಿವೃದ್ಧಿ ಕುರಿತು ಜಾಗೃತಿ ಶಿಬಿರ ಹಾಗೂ ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಸಂಸ್ಥಾಪಕಿ ಅಶ್ವಿನಿ ಚವ್ಹಾಣ ಕುಮಾರಸಿಂಗ್ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಶ್ರೀನಿವಾಸ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದ ಪೂಜ್ಯ ಡಾ. ಅಪ್ಪಾರಾವ ದೇವಿಮುತ್ಯಾ ಹಾಗೂ ಅಂಬಲಗಾ ಶಕ್ತಿಪೀಠದ ಪೂಜ್ಯ ಶಿವಕುಮಾರ ಮುತ್ಯಾ ಅವರು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮೃದ್ಧಿ ಡೆವಲಪರ್ಸ್‌ನ ಡಾ. ಸುನೀಲ ರಾಠೋಡ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ನಿವೃತ್ತ ಮುಖ್ಯ ಅಭಿಯಂತರ ಡಾ. ಸುರೇಶ ಎಲ್. ಶರ್ಮಾ ಹಾಗೂ ಮಣ್ಣೂರ ಆಸ್ಪತ್ರೆಯ ಅಧ್ಯಕ್ಷ ಡಾ. ಫಾರುಕ್ ಮಣ್ಣೂರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದ ಬ್ಲಾಕ್ ಅಧ್ಯಕ್ಷೆ ವಾಣಿಶ್ರೀ ಸಗರಕರ್ ಹಾಗೂ ಉದ್ಯಮೆದಾರ್ತಿ, ಸಮಾಜ ಸೇವಕಿ ಅನ್ನಪೂರ್ಣ ಸಂಗೋಳಗಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಜಯಕುಮಾರ ಕಟ್ಟಿಮನಿ, ಗುರುರಾಜ ಬಂಡಿ, ಸೈಯದ್ ಅಶಫಾಕ್, ಅಮೀರ್ ನಿಂಬಾಳಕರ್, ಹನುಮಂತ ಬಿರಾದಾರ್, ಸಿಂಧೂಮತಿ ಭೋಸ್ಥೆ ಹಾಗೂ ಸೀತಾ ಬಡಿಗೇರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸಂಸ್ಥಾಪಕಿ ಅಶ್ವಿನಿ ಚವ್ಹಾಣ ವಹಿಸಲಿದ್ದಾರೆ.

ವಿದ್ವಾನ್ ಅನಂತ್ ಕೆ. ಚಿಂಚನಸೂರ್, ರೂಪಾಲಿ ರವೀಂದ್ರ, ಭವಾನಿ ಜಗದೇವ ಕದಲೂರ, ಸಂಜನಾ ಠಾಕೂರ್, ದೇವಿಂದ್ರಪ್ಪ ಸಜ್ಜನ್ ಚಿಂಚನಸೂರ್, ಸಚಿನ್ ಜಿ. ಲೋಕಾಣಿ, ಮಹಾದೇವಿ ಪಾಟೀಲ, ಅರುಣದೇವಿ ಭಂಡಾರಿ, ಕೆ. ವಾಲಿ, ಮಡಿವಾಳಪ್ಪ ಹಾಗೂ ಸಂಪೂರ್ಣ ಪಾಟೀಲ ಅವರಿಗೆ ಕಲ್ಯಾಣ ಕರ್ನಾಟಕ ಜಾನಪದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಶಿಲ್ಪಾ ನಾಗೂರ, ಬಸಮ್ಮ ಶರಣಕುಮಾರ, ಶೀತಲ್ ಜೋಶಿ ಹಾಗೂ ಜೈನಾಬಾಯಿ ರಾಠೋಡ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಸಮಾರಂಭದಲ್ಲಿ ಸಾಂಸ್ಕೃತಿಕ ಹಾಗೂ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಮನವಿ ಮಾಡಿದೆ.