ಸ್ವಚ್ಚತೆಯೇ ಪ್ರಥಮ ಆದ್ಯತೆಯಾಗಿರಲಿ - ಡಾ. ರಾಜಶೇಖರ
ಸ್ವಚ್ಚತೆಯೇ ಪ್ರಥಮ ಆದ್ಯತೆಯಾಗಿರಲಿ - ಡಾ. ರಾಜಶೇಖರ
ಕಲಬುರಗಿ ೦೨: ಹೆಣ್ಣು ಮಕ್ಕಳು ವೈಯಕ್ತಿಕ ಸ್ವಚ್ಚತೆಗೆ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ಡಾ. ರಾಜಶೇಖರ್ ಹೇಳಿದರು.
ನಗರದ ಪರಿವರ್ತನ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಸಮಗ್ರ ಅಭಿವೃದ್ಧಿ ಸಂಸ್ಥೆ (ರಿ) ಕಲಬುರಗಿ ಹಾಗೂ ಹೆಡ್ ಹೆಲ್ಡ್ ಹೈ ಪೌಂಡೇಶನ್ ವತಿಯಿಂದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿ ಇರಬೇಕಾದರೆ ಸ್ವಚ್ಚತೆಗೆ ಬಹಳ ಪ್ರಾಮುಖ್ಯತೆ ಕೊಡಬೇಕು ಎಂದು ಹೇಳಿದರು.
ಬುದ್ದಿಮಾಂದ್ಯ ವಿಶೇಷಚೇತನ ಬಾಲಕೀಯರಿಗೆ ‘ಸಖಿ’ ಕಿಟ್ ವಿತರಣೆ ಮಾಡಿದರು,
ಗುರು ಉಪದೇಶ ಪತ್ರಿಕೆಯ ಸಂಪಾದಕರಾದ ಸಿದ್ದಣ್ಣಗೌಡ ಮಾಲಿ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಕ್ಟೋಬರ್ 2 ರಂದು ನಾವು ದೇಶಕ್ಕೆ ಅಹಿಂಸೆಯ ಮಾರ್ಗ ತೋರಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು 'ಜೈ ಜವಾನ್, ಜೈ ಕಿಸಾನ್' ಘೋಷಣೆಯ ಮೂಲಕ ರೈತ ಹಾಗೂ ಸೈನಿಕರ ಶಕ್ತಿ ಹೆಚ್ಚಿಸಿದ ಹೆಮ್ಮೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಗೌರವದಿಂದ ಆಚರಿಸುತ್ತೇವೆ. ಮಹನೀಯರ ಆದರ್ಶಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ಕರಬಸಪ್ಪ ವಾಲಿ ರಾಜ್ಯ ವ್ಯವಸ್ಥಾಪಕರು ಹೆಡ್ ಹೆಲ್ಡ್ ಹೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು , ಸಾಹಿತಿ ವಿಶ್ವನಾಥ್ ಭಕರೆ ಮಾತನಾಡಿ ಗಾಂಧೀಜೀಯವರು ಸತ್ಯ ಅಹಿಂಸೆಯೊಂದಿಗೆ ನಮಗೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದು ಹೇಳಿದರು
ಶ್ರೀಮಂತ ರೇವೂರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ,ವಿಕಲಚೇತನ ಮಕ್ಕಳು ದೇವರ ಸಮಾನವಾಗಿದ್ದು, ಪಾಲಕರು ಹಾಗೂ ಪೋಷಕರು ಅವರನ್ನು ದೇವರಂತೆಯೇ ಗೌರವಿಸಬೇಕೆಂದು ಎಂದು ತಿಳಿಸಿದರು.
ಬಿ.ಐ.ಈ.ಆರ್.ಟಿ ಸಿದ್ದರಾಮ ರಾಜಮಾನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ವರಿ ಜಿ. ಲಾಳಿ, ನಿರ್ಮಲಾ ಸನಬಂಗಿ, ನಾಗರಾಜ ಬಿರಾದಾರ ಶಾಲೆಯ ಸಿಬ್ಬಂದಿ, ವಿಕಲಚೇತನ ಮಕ್ಕಳ ಪಾಲಕ ಪೋಷಕರು ಮಕ್ಕಳು ಉಪಸ್ಥಿತರಿದ್ದರು. ಬಸಮ್ಮ ಎಂ. ಗುತ್ತೇದಾರ ನಿರೂಪಿಸಿದರು, ಅರವಿಂದ ಠಾಕೂರ ಸ್ವಾಗತಿಸಿದರು. ರಾಹುಲ್ ವಾಡಿ ವಂದಿಸಿದರು.

