ಕಲಬುರಗಿಯ ಸಪ್ತ ನೇಕಾರ ಸೇವಾ ಕೇಂದ್ರದಲ್ಲಿ ಗಾಂಧೀಜಿ–ಶಾಸ್ತ್ರಿ ಜಯಂತಿ

ಕಲಬುರಗಿಯ ಸಪ್ತ ನೇಕಾರ ಸೇವಾ ಕೇಂದ್ರದಲ್ಲಿ ಗಾಂಧೀಜಿ–ಶಾಸ್ತ್ರಿ ಜಯಂತಿ

ಕಲಬುರಗಿಯ ಸಪ್ತ ನೇಕಾರ ಸೇವಾ ಕೇಂದ್ರದಲ್ಲಿ ಗಾಂಧೀಜಿ–ಶಾಸ್ತ್ರಿ ಜಯಂತಿ

ಕಲಬುರಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಕಲಬುರಗಿಯ ಸಪ್ತ ನೇಕಾರ ಸಮಾಜಗಳ ಸೇವಾ ಕೇಂದ್ರದಲ್ಲಿ ಆಚರಿಸಲಾಯಿತು.

 ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಹಾರ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಸರಳತೆ, ಸತ್ಯ, ಅಹಿಂಸೆ, ಸ್ವಚ್ಛತೆ ಹಾಗೂ ದೇಶಸೇವೆಯಂತಹ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯ ಎಂದು ಹೇಳಿದರು 

   ಕವಿ ಹಾಗೂ ಪತ್ರಕರ್ತ ಸಂಗಮನಾಥ ರೇವತಗೌಡ ಅವರ ಜನ್ಮದಿನವನ್ನು ಆಚರಿಸಿ ಸನ್ಮಾನಿಸಲಾಯಿತು.

 ಬೆಂಗಳೂರಿನ ಪ್ರೊ. ಶ್ರೀಶೈಲ ಮಾಸುತೆ ಅವರನ್ನು ಸಹ ಸನ್ಮಾನಿಸಲಾಯಿತು. ಸಮಾಜದಲ್ಲಿ ಕಡೆಗಣನೆಗೆ ಒಳಗಾಗುತ್ತಿರುವ ದೇವದಾಸಿ ಮಕ್ಕಳಿಗಾಗಿ ಆಶ್ರಮ ಸ್ಥಾಪಿಸಿ, ಅವರಿಗೆ ನೆರವು ನೀಡುತ್ತಿರುವ ಅವರ ಸಮಾಜಮುಖಿ ಸೇವೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ಮೊದಲಿಗೆ, ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ಸ್ವಾಗತಿಸಿದರು, 

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಕೀಲರಾದ ಶಿವಲಿಂಗಪ್ಪ ಅಷ್ಟಗಿ ವಹಿಸಿದ್ದರು ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ಬಲಪುರ ವಂದಿಸಿದರು, ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ವಹಣೆಯನ್ನು ಲಾಲ್ ಬಹದ್ದೂರ್ ಶಾಸ್ತ್ರೀ ಯವರ ಅನುಯಾಗಿ, ನ್ಯಾಯವಾದಿ ಜೇ. ಎಸ್ ವಿನೋದ ಕುಮಾರ ಮಾಡಿದರು ಈ ಸಂದರ್ಭದಲ್ಲಿ 

ಸಪ್ತ ನೇಕಾರ ಸಮಾಜಗಳ ಸೇವಾ ಕೇಂದ್ರದ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಾಂಧೀಜಿ ಮತ್ತು ಶಾಸ್ತ್ರಿ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಂಕಲ್ಪವನ್ನು ಗಣ್ಯರು ವ್ಯಕ್ತಪಡಿಸಿದರು.