ಸದೃಢ ದೇಹ ಮತ್ತು ದೃಢ ಮನಸ್ಸಿಗೆ ಕ್ರೀಡೆ ಬಹಳ ಮುಖ್ಯ :ಮೃತ್ಯುಂಜಯ ಹಿರೇಮಠ

ಸದೃಢ ದೇಹ ಮತ್ತು ದೃಢ ಮನಸ್ಸಿಗೆ ಕ್ರೀಡೆ ಬಹಳ ಮುಖ್ಯ :ಮೃತ್ಯುಂಜಯ ಹಿರೇಮಠ

| ಶಹಾಬಾದ ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟ |

ಸದೃಢ ದೇಹ ಮತ್ತು ದೃಢ ಮನಸ್ಸಿಗೆ ಕ್ರೀಡೆ ಬಹಳ ಮುಖ್ಯ :ಮೃತ್ಯುಂಜಯ ಹಿರೇಮಠ

ಶಹಾಬಾದ : -ಕ್ರೀಡೆಯು ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸದೃಢ ದೇಹ ಮತ್ತು ಸದೃಢ ಮನಸ್ಸಿಗೆ ಎಲ್ಲರಿಗೂ ಕ್ರೀಡೆ ಬಹಳ ಮುಖ್ಯವಾಗಿದೆ ಎಂದು ಪಂಚ ಗ್ಯಾರಂಟಿ ಅಧ್ಯಕ್ಷ ಮೃತ್ಯುಂಜಯ ಹಿರೇಮಠ ಅಭಿಪ್ರಾಯಪಟ್ಟರು.

ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲ್ಬುರ್ಗಿ ವತಿಯಿಂದ ೨೦೨೬-೨೭ ನೇ ಸಾಲಿನ ಶಹಾಬಾದ ತಾಲೂಕ ಮಟ್ಟದ ದಸರಾ ಕ್ರೀಡಾಕೂಟವನ್ನು ಉಧ್ಘಾಟಿಸಿ ಮಾತನಾಡಿದರು.

ದಶರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲ್ಲೂಕಿನಿಂದ ಜಿಲ್ಲಾಮಟ್ಟ, ವಿಭಾಗ ಮಟ್ಟಕ್ಕೆ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿ ನಮ್ಮ ತಾಲ್ಲೂಕಿನ ಮತ್ತು ಜಿಲ್ಲೆಯ ಕೀರ್ತಿಯನ್ನು ತರಬೇಕೆಂದು ಹೇಳಿದರು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಮಾತನಾಡಿ, ದಸರಾ ಕ್ರೀಡಾಕೂಟ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ. ಕ್ರೀಡಾಸ್ಪೂರ್ತಿಯಿಂದ ಆಡುವ ಮೂಲಕ ಆಟಗಾರರು ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕಿದೆ. ರಾಜ್ಯಮಟ್ಟವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಸಂಘ ಸಂಸ್ಥೆಗಳ ಉತ್ತೇಜನ ಅಗತ್ಯ ಎಂದರು.

ತಾಲ್ಲೂಕ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಮಾತನಾಡಿದರು.

ತಾ. ಪಂ. ಇಒ ಮಲ್ಲಿನಾಥ್ ರಾವೂರ ಕ್ರೀಡಾಕೂಟದ ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ವೇದಿಕೆ ಮೇಲೆ ಬಿ.ವಿ.ಎಂ ಶಾಲೆಯ ಮುಖ್ಯಗುರು ಗಂಗಾಧರ, ದಸರಾ ಕ್ರೀಡಾಕೂಟದ ಸಂಯೋಜಕ ಮರಿಯಪ್ಪ ಬೊಮ್ಮನಹಳ್ಳಿಕರ, ಹನುಮಂತರಾವ ಬಿರಾದರ ಇದ್ದರು.

ದಸರಾ ಕ್ರೀಡಾಕೂಟದಲ್ಲಿ ಬನ್ನಪ್ಪ ಸೈದಾಪುರ, ಗಣೇಶ ಜಾಯಿ, ಎಚ್ ವೈ ರೆಡ್ಡಿ, ಸಿದ್ದಲಿಂಗ ಬುಳ್ಳಾ, ಸುರೇಶ ಕಾಂಬಳೆ, ಅಶೋಕ್ ಜಾದವ, ಸತ್ತಯ್ಯ ಗುತ್ತೇದಾರ, ಮಹೇಶ ಕಾಂಬಳೆ ಸೇರಿದಂತೆ ಅನೇಕ ಜನ ದೈಹಿಕ ಶಿಕ್ಷಕರು ಹಾಗೂ ಗ್ರಾಮೀಣ ಮತ್ತು ನಗರದ ಕ್ರೀಡಾಪಟುಗಳು ಭಾಗವಹಿಸಿದ್ದರು.

ರತನರಾಜ ಕೋಬಾಳ ಸ್ವಾಗತಿಸಿದರು, ರಾಣಪ್ಪ ಸಂಗನ ನಿರೂಪಿಸಿದರು, ಮಲ್ಲಿಕಾರ್ಜುನ್ ಸಿಂಗೆ ವಂದಿಸಿದರು.