ನರೇಗಲ್: ಹಿಂಗಾರು ಕೃಷಿಗೆ ಚಿಗುರಿದ ಆಸೆ — ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಬೀಜ ವಿತರಣೆಗೆ ಚಾಲನೆ

ನರೇಗಲ್: ಹಿಂಗಾರು ಕೃಷಿಗೆ ಚಿಗುರಿದ ಆಸೆ — ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಬೀಜ ವಿತರಣೆಗೆ ಚಾಲನೆ

ನರೇಗಲ್: ಹಿಂಗಾರು ಕೃಷಿಗೆ ಚಿಗುರಿದ ಆಸೆ — ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಬೀಜ ವಿತರಣೆಗೆ ಚಾಲನೆ

ನರೇಗಲ್ (ಗದಗ): ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಭೂಮಿ ಹದಗೊಳಿಸುತ್ತಿರುವ ಈ ಭಾಗದ ರೈತರಿಗೆ ಕೃಷಿ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ನರೇಗಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ 2026-27 ನೇ ಸಾಲಿನ ಹಿಂಗಾರು ಹಂಗಾಮಿಗೆ ಅಗತ್ಯವಿರುವ ರಿಯಾಯಿತಿ ದರದ ಸುಧಾರಿತ ಕಡಲೆ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.

ಕಪ್ಪು ಮಣ್ಣಿನ ಪ್ರದೇಶವಾದ ನರೇಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ ಪ್ರಮುಖ ಒಣಬೇಸಾಯ ಬೆಳೆಯಾಗಿದೆ. ಸಮಯಕ್ಕೆ ಸರಿಯಾಗಿ ರೈತರಿಗೆ ಉತ್ತಮ ತಳಿಯ ಬಿತ್ತನೆ ಬೀಜ ತಲುಪಿಸುವ ನಿಟ್ಟಿನಲ್ಲಿ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಿದೆ.

ರೈತರ ನೆರವಿಗೆ ಸಬ್ಸಿಡಿ ಸೌಲಭ್ಯ:

ಉಪಾ ಕೃಷಿ ನಿರ್ದೆಶಕರು ಶ್ರೀ ಜಯಪ್ರಕಾಶ ಮಾತನಾಡಿ

(ಸರಕಾರ ನೀಡುವ ರಿಯಾಯಿತಿ (ಸಬ್ಸಿಡಿ) ದರದಲ್ಲಿ ರೈತರಿಗೆ ಪ್ರಮಾಣೀಕೃತ ಬೀಜಗಳನ್ನು ನೀಡಲಾಗುತ್ತಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಸೌಲಭ್ಯ ಪಡೆದುಕೊಳ್ಳಲು ಕೋರಲಾಗಿದೆ. ಬೀಜ ಪಡೆಯಲು ಬಯಸುವ ರೈತರು ತಮ್ಮ ಜಮೀನಿನ ಇತ್ತೀಚಿನ ಪಹಣಿ (RTC), ಆಧಾರ್ ಕಾರ್ಡ್ ಪ್ರತಿ, ಫ್ರೂಟ್ಸ್ ಐಡಿ (FID) ಹಾಗೂ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ.)

ಬೀಜೋಪಚಾರಕ್ಕೆ ಅಧಿಕಾರಿಗಳ ಸಲಹೆ: ಸಹಾಯಕ ಕೃಷಿ ನಿರ್ದೆಶಕರು ಶ್ರೀ ಬಸವರಾಜ ಮಾಳೆದ ಮಾತನಾಡಿ

("ಕಡಲೆ ಬಿತ್ತನೆ ಮಾಡುವ ಮುನ್ನ ರೈತರು ಕಡ್ಡಾಯವಾಗಿ ಬೀಜೋಪಚಾರ (ರೋಗ ನಿರೋಧಕ ಉಪಚಾರ) ಮಾಡಬೇಕು. ಇದರಿಂದ ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ಸಸಿ ಒಣಗುವ ರೋಗ ಹಾಗೂ ಶಿಲೀಂಧ್ರ ಬಾಧೆಗಳನ್ನು ತಡೆಗಟ್ಟಿ, ಗರಿಷ್ಠ ಇಳುವರಿ ಪಡೆಯಲು ಸಾಧ್ಯವಾಗುತ್ತದೆ" ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.)

ಕೃಷಿ ನಿರ್ದೆಶಕರು ನರೇಗಲ್ಲ ಬಸವರಾಜ ಗದುಗಿನ ಇವರು ಮಾತನಾಡಿ

(ರೈತರು ಯಾವುದೇ ರೀತಿಯ ತರಾತುರಿ ಮಾಡದೇ, ಶಾಂತಿಯುತವಾಗಿ ಸರದಿ ಸಾಲಿನಲ್ಲಿ ನಿಂತು ನಿಯಮಾವಳಿಗಳಂತೆ ಬೀಜಗಳನ್ನು ಪಡೆದುಕೊಂಡು ಹಿಂಗಾರು ಹಂಗಾಮನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಲಾಗಿದೆ.)

ರೃತ ಮುಖಂಡರಾದ ಶರಣಪ್ಪ ಧರ್ಮಾಯತ, ಆನಂದ ಕೊಂಡಿ, ಶಿವನಗೌಡ ಕರದಳ್ಳಿ , ಚಂದ್ರು ವನವಾಡ, ಮಲ್ಲನಗೌಡ ಪಾಟೀಲ್, ನಜೀರಹಮ್ಮದ ಹದ್ಲಿ, ಕಳಕಪ್ಪ ರೋಣದ ಇತರರು ಇದ್ದರು. 

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ