ಜಕ್ಕಡಿ ಓಟದಲ್ಲಿ ಸುರೇಶ ಬೆಟಗೇರಿ ಎತ್ತುಗಳಿಗೆ ದ್ವಿತೀಯ ಸ್ಥಾನ
ಜಕ್ಕಡಿ ಓಟದಲ್ಲಿ ಸುರೇಶ ಬೆಟಗೇರಿ ಎತ್ತುಗಳಿಗೆ ದ್ವಿತೀಯ ಸ್ಥಾನ
ಸವಣೂರು:ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ಗೌರಿ-ಗಣೇಶ ಹಬ್ಬದ ಅಂಗವಾಗಿ ಸ್ನೇಹ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ‘ಅಳಿಯ ಮಾವನ ಸಾಮ್ರಾಜ್ಯ’ ಎಂಬ 22 ಕಿ.ಮೀ. ಜಕ್ಕಡಿ ಓಟದ ಸ್ಪರ್ಧೆಯಲ್ಲಿ ನರೇಗಲ್ಲ ಪಟ್ಟಣದ ದರಗಾದ ಓಣಿಯ ರೈತ ಸುರೇಶ ಕಳಕಪ್ಪ ಬೆಟಗೇರಿ ಅವರ ಎತ್ತುಗಳು ದ್ವಿತೀಯ ಸ್ಥಾನ ಪಡೆದುಕೊಂಡಿವೆ.
ದ್ವಿತೀಯ ಸ್ಥಾನ ಪಡೆದ ಎತ್ತುಗಳ ಮಾಲೀಕರಿಗೆ **₹15,000 ನಗದು ಬಹುಮಾನ** ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ವಿವಿಧ ಭಾಗಗಳಿಂದ ರೈತರು ಹಾಗೂ ಎತ್ತಿನಗಾಡಿ ಮಾಲೀಕರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ, ಗದಗ

