ಗಣೇಶ ಉತ್ಸವ ಸಾಮರಸ್ಯದ ಸಂಕೇತ -ಶಾಂತವೀರ ಶ್ರೀ.

ಗಣೇಶ ಉತ್ಸವ ಸಾಮರಸ್ಯದ ಸಂಕೇತ -ಶಾಂತವೀರ ಶ್ರೀ.

ಗಣೇಶ ಉತ್ಸವ ಸಾಮರಸ್ಯದ ಸಂಕೇತ -ಶಾಂತವೀರ ಶ್ರೀ.

ಕಮಲಾಪುರ:ಭಾರತ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರು ಒಂದಾಗಿರಲು ಗಣೇಶ ಉತ್ಸವವು ಕಾರಣವಾಗಿದ್ದು,ಜಾತಿ,ಮತ,ದರ್ಮ ಪಂಗಡಗಳ ಗೊಂದಲವಿಲ್ಲದೆ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಸಾಮರಸ್ಯದ ಸಂಕೇತವಾಗಿದೆ ಎಂದು ಚಲಗೇರಾ ಹಾಗೂ ಮಾದನ ಹಿಪ್ಪರ್ಗಿಯ ಶ್ರೀ ಮಠದ ಪರಮ ಪೂಜ್ಯ ಶ್ರೀ ಷ.ಬ್ರ.ಶಾಂತವೀರ ಮಹಾಶಿವಯೋಗಿಗಳು ಹೇಳಿದರು.

ಕುರಿಕೋಟ ಗ್ರಾಮದಲ್ಲಿ ಶ್ರೀ ಗಜಾನನ ಯುವಕ ಮಂಡಳಿ ಹಮ್ಮಿಕೊಂಡಿದ್ದ ಅದ್ದೂರಿ ಗಣೇಶೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

 ಪರಂಪರೆಯಲ್ಲಿ ಗಣೇಶನಿಗೆ ಮೊದಲ ಪೂಜೆ ಮಾಡುವದು ರೂಢಿಯಲ್ಲಿದ್ದು,ಇಂದಿಗೂ ಮುಂದುವರುದಿರುವದು ನಮ್ಮೆಲ್ಲರ ಹಿರಿಯರು ಹಾಕಿಕೊಟ್ಟ ಮಾರ್ಗವೇ ಕಾರಣವಾಗಿದೆ.ಅದನ್ನ ಉತ್ಸವ ರೀತಿಯಲ್ಲಿ ಆಚರಣೆ ಮಾಡುವದು ನಮ್ಮೆಲ್ಲರ ಏಕತೆಗೆ ಸಾಕ್ಷಿಯಾಗಿದೆ ಎಂದರು.

 ಗಣೇಶ ಉತ್ಸವವು ಪ್ರತಿಯೊಬ್ಬರನ್ನ ಧರ್ಮ ಮಾರ್ಗದಲ್ಲಿ ಸಾಗುವದಕ್ಕೆ ವಿಶೇಷ ಪ್ರೇರಣೆ ನೀಡುವುದಲ್ಲದೆ,ಸನ್ಮಾರ್ಗದ ಅರಿವು ಮೂಡಿಸುತ್ತದೆ.ಹಾಗಾಗಿ ಇದರಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಎಂದರು.

 ಯುವ ಸಾಹಿತಿ ಶ್ರೀ ಅಂಬರಾಯ ಮಡ್ಡೆ ಅವರು ಗಣೇಶ ಉತ್ಸವ ಕುರಿತು ವಿಶೇಷವಾಗಿ ಮಾತನಾಡಿದರು.

 ವೇದಿಕೆ ಮೇಲೆ ಶ್ರೀ ರಮೇಶ್ ಸಾಹು,ಶ್ರೀ ಶಾಂತವೀರಯ್ಯ ಹಿರೇಮಠ್,ಚನ್ನು ಬಸವಣ್ಣ,ಪಂಚಯ್ಯ,ಆಕಾಶ,ಸುನಿಲ್ ಬಿರಾದಾರ್ ಇದ್ದರು.ಶ್ರೀ ಬಸವರಾಜ್ ಗೌಡನೂರ್ ನಿರೂಪಿಸಿದರು.ನಂತರ ಮಕ್ಕಳಿಂದ ಹಲವಾರು ಸಂಸ್ಕೃತಿಕ್ ಕಾರ್ಯಕ್ರಮ ನಡೆದವು.