ಪುರಸಭೆ ಅಧಿಕಾರ ಸ್ವೀಕರಿಸಿದ ನೂತನ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಸನ್ಮಾನ ಅಧಿಕಾರ ವಹಿಸಿಕೊಂಡ ನೂತನ ಅಧಿಕಾರಿಗಳಿಂದ ಸ್ವಚ್ಛ ಆಡಳಿತದ ನಿರೀಕ್ಷೆ ನೋಡುತ್ತಿರುವ ಜನತೆ

ಪುರಸಭೆ ಅಧಿಕಾರ ಸ್ವೀಕರಿಸಿದ ನೂತನ ಅಧಿಕಾರಿಗಳಿಗೆ  ಸಾರ್ವಜನಿಕರಿಂದ ಸನ್ಮಾನ ಅಧಿಕಾರ ವಹಿಸಿಕೊಂಡ ನೂತನ ಅಧಿಕಾರಿಗಳಿಂದ  ಸ್ವಚ್ಛ ಆಡಳಿತದ ನಿರೀಕ್ಷೆ ನೋಡುತ್ತಿರುವ ಜನತೆ

ಪುರಸಭೆ ಅಧಿಕಾರ ಸ್ವೀಕರಿಸಿದ ನೂತನ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಸನ್ಮಾನ

ಅಧಿಕಾರ ವಹಿಸಿಕೊಂಡ ನೂತನ ಅಧಿಕಾರಿಗಳಿಂದ ಸ್ವಚ್ಛ ಆಡಳಿತದ ನಿರೀಕ್ಷೆ ನೋಡುತ್ತಿರುವ ಜನತೆ 

ಚಿಂಚೋಳಿ : ಪುರಸಭೆ ಕಾರ್ಯಾಲಯಕ್ಕೆ ನೂತನ ಮುಖ್ಯಅಧಿಕಾರಿಗಳಾಗಿ ಆಡಳಿತ ಅಧಿಕಾರ ವಹಿಸಿಕೊಂಡ ವಿಜಯ ಮಹಾಂತೇಶ ಹೂಗಾರ ಅವರಿಗೆ ಚಿಂಚೋಳಿ -ಚಂದಾಪೂರ ಅವಳಿ ಪಟ್ಟಣದ ಸಾರ್ವಜನಿಕರಿಂದ ವಿಶೇಷ ಸನ್ಮಾನ ಮಾಡಿ ಗೌರವಿಸಿದರು. 

ಕಾಶಿನಾಥ ಧನ್ನಿ ಅವರಿಂದ ತೆರವಾದ ಸ್ಥಾನಕ್ಕೆ ನಿಂಗಮ್ಮ ಬಿರಾದಾರ ಅವರು ಮುಖ್ಯ ಅಧಿಕಾರಿಗಳಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದರು. ಸುಗಮವಾಗಿ ನಡೆಯುತ್ತಿದ್ದ ಅಧಿಕಾರಕ್ಕೆ ಕಾನೂನು ತೊಡಕುಗಳು ಬಂದು ನಿಂಗಮ್ಮ ಬಿರಾದಾರ ಅವರು ಅಧಿಕಾರ ಬಿಡುವಂತೆ ಆಯಿತು. ತದನಂತರ ಅವರಿಂದ ತೆರವಾದ ಸ್ಥಾನಕ್ಕೆ ಕಾಶಿನಾಥ ಧನ್ನಿ ಅವರು ಮತ್ತೇ ಅಧಿಕಾರ ವಹಿಸಿಕೊಂಡು 8 ತಿಂಗಳು ಅಧಿಕಾರ ನಡೆಸಿದರು. ಇದೀಗ ಮತ್ತೇ ಕಾಶಿನಾಥ ಧನ್ನಿ ಅವರ ಕುರ್ಚಿ ಖಾಲಿಯಾದ ಹಿನ್ನಲೆಯಲ್ಲಿ ಸರಕಾರ ವಿಜಯ ಮಹಾಂತೇಶ ಹೂಗಾರ ಅವರನ್ನು ಪುರಸಭೆ ಮುಖ್ಯ ಅಧಿಕಾರಿಯಾಗಿ ಕಳುಹಿಸಿ ಕೊಟ್ಟಿದೆ. ಈ ಕಾರಣದ ಹಿನ್ನಲೆಯಲ್ಲಿ ಸಾರ್ವಜನಿಕರು ಕೆಲವೇ ವರ್ಷಗಳಲ್ಲಿ ಪುರಸಭೆ ಕಾರ್ಯಾಲಯಕ್ಕೆ ಮೂರು ಜನ ಅಧಿಕಾರಿಗಳನ್ನು ಕಂಡಂತಾಗಿದೆ. ಬಂದ ನೂತನ ಅಧಿಕಾರಿಗಳು ಪಟ್ಟಣದ ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗದಂತಹ ಸುಗಮ ಮತ್ತು ದಕ್ಷತೆಯ ಆಡಳಿತವನ್ನು ನೂತನ ಅಧಿಕಾರಿಗಳಿಂದ ಸಿಗುವ, ದೊರಕುವ ವಿಶ್ವಾಸ ಪುರಸಭೆ ಜನತೆ ನಿರೀಕ್ಷಿಸಿದಸುತ್ತಿದೆ.

ಈ ಸಂದರ್ಭದಲ್ಲಿ ವಕೀಲ ಸೂರ್ಯಕಾಂತ್ ಚಿಂಚೋಳಿಕರ್ , ಶಿವಕುಮಾರ ಸಜ್ಜನ, ಸಂತೋಷ ಮಲಿ, ಶಾಂತಕುಮಾರ ಯಂಪಳ್ಳಿ, ಡಾ. ಪ್ರಭಾಕರ್ ಗೌನಳ್ಳಿ, ಸೂರ್ಯಪ್ರಕಾಶ ಸೀಳಿನ್ ಅವರು ಉಪಸ್ಥಿತರಿದ್ದರು.