ವಳಕೇರಿ ಯುವಕರಿಗೆ ಮಾದರಿ: ಶಾಸಕ ಅಲ್ಲಮಪ್ರಭು ಪಾಟೀಲ
ವಳಕೇರಿ ಯುವಕರಿಗೆ ಮಾದರಿ: ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ: ರಾಜಕೀಯ ನಾಯಕತ್ವದಿಂದ ಸುದೀರ್ಘವಾಗಿ 25 ವರ್ಷಗಳಿಂದ ಸಮಾಜಸೇವೆ ಮಾಡುತ್ತಾ ಬರುತ್ತಿರುವ ಪವನಕುಮಾರ ಬಿ ವಳಕೇರಿಯವರ ನಾಯಕತ್ವ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ ಹೇಳಿದರು.
ನಗರದ ಹೊರವಲಯದಲ್ಲಿರುವ ನಂದಿಕೂರು ಗ್ರಾಮದಲ್ಲಿ ಏರ್ಪಡಿಸಿದ್ದ ವಳಕೆರಿಯವರ 25 ವರ್ಷಗಳ ರಾಜಕೀಯ ಜೀವನದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಕಿರಣ ದೇಶಮುಖ ಅವರು, ಪವನಕುಮಾರ ವಳಕೇರಿಯವರು ಅನೇಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಸಾವಿರಾರು ಜನರಿಗೆ ಆರೋಗ್ಯದ ಮಾಹಿತಿಯನ್ನು ನೀಡಿದ್ದು ಸ್ಮರಣೀಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಲಬುರ್ಗಿ ವಿದ್ಯುತ್ ಶಕ್ತಿ ನಿಗಮದ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಅವರು, ವಳಕೇರಿಯವರ ಸಮಗ್ರ ಸಾಮಾಜಿಕ ಸೇವೆ ಕಲಬುರಗಿ ಜಿಲ್ಲೆಗೆ ಹಿಡಿದ ಕೈ ಕನ್ನಡಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಭಿನಂದನಾ ಭಾಷಣವನ್ನು ಮಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು, ಕಲಬುರ್ಗಿ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ವಳಕೇರಿ ಕುಟುಂಬದ ಪಾತ್ರ ಅನನ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಸುಧಾರಣೆ ಮತ್ತು ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿರುವ ಅವ್ಯವಸ್ಥೆಯ ವಿರುದ್ಧ ಹೋರಾಡಿ ನಂದಿಕೂರ್ ಗ್ರಾಮಸ್ಥರಿಗೆ ರುದ್ರಭೂಮಿ ಇರಲಿಲ್ಲ ಹೋರಾಟ ಮಾಡಿ ಜಿಲ್ಲಾಧಿಕಾರಿಯಿಂದ ಅಧಿಕೃತವಾಗಿ ಎರಡು ಎಕರೆ ಜಮೀನು ಎಲ್ಲಾ ಜಾತಿ ಜನಾಂಗಕ್ಕೆ ಕೊಡಸಿದ್ದರೆ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ ಕೀರ್ತಿ ವಳಕೇರಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಸಾನಿಧ್ಯ ಶ್ರೀ ಶ್ರೀ ಶಿವಲಿಂಗ ಶರಣರು ನಂದಿಕೂರ್
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಸಂದೇಶ ಕಮಕನೂರ, ಸಿದ್ದರಾಮ್ ಪ್ಯಾಟಿ, ರವೀಂದ್ರ ವಿಭೂತಿ, ರವಿ ರಾಠೋಡ, ಲತಾ ರಾಥೋಡ, ಅನಿತಾ ಪವನಕುಮಾರ ವಳಕೇರಿ, ಯುವ ನಾಯಕರಾದ ನಂದು ನಾಯಕ,ನಾರಾಯಣ ಸರ್ವಶೆಟ್ಟಿ , ಲೋಹಿತ ವಿಶ್ವಕರ್ಮ, ಬಸವರಾಜ ಡಿಗ್ಗಾವಿ, ಸತೀಶ ಗುತ್ತೇದಾರ, ಅಶೋಕ ಗುತ್ತೇದಾರ, ಗಣಪತಿ ಬಬಲಾದ, ಸಂಪತಕುಮಾರ ವಳಕೇರಿ,ಮಹದೇವ ಮೊಘಾ, ರಾಘವೇಂದ್ರ ಮರತುರಕರ,ಯಾಸಮಿನ್ ಶಖಿಲ, ಆಶಾ ಬೀರಪ್ಪ, ಹೂವಣ್ಣ ಗೌಡ, ಸಂಧ್ಯಾಕಿರಣ ವರುಣ ಬಬಲಾದ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಪವನಕುಮಾರ ವಳಕೇರಿ ಅವರು, ತಮ್ಮ ಉಸಿರು ಇರುವವರೆಗೂ ನೊಂದ ಜನರ ಕಣ್ಣೀರು ವರೆಸುವುದರೊಂದಿಗೆ ಸಮಾಜ ಸೇವೆಗೆ ಪೂರ್ಣ ಸಮಯ ಕೊಡುತ್ತೆನೆ ಎಂಬ ಘೋಷಣೆಯನ್ನು ಮಾಡಿದರು.

