ಕನ್ನಡದ ಕಂಪು, ಕವಿತೆಗಳ ಸೊಬಗು… ಕನ್ನಡ ಕಿರಣ ಕಾಲೇಜಿನಲ್ಲಿ ರಾಜ್ಯೋತ್ಸವದ ಸಂಭ್ರಮ!

ಕನ್ನಡದ ಕಂಪು, ಕವಿತೆಗಳ ಸೊಬಗು… ಕನ್ನಡ ಕಿರಣ ಕಾಲೇಜಿನಲ್ಲಿ ರಾಜ್ಯೋತ್ಸವದ ಸಂಭ್ರಮ!

ಕನ್ನಡದ ಕಂಪು, ಕವಿತೆಗಳ ಸೊಬಗು… ಕನ್ನಡ ಕಿರಣ ಕಾಲೇಜಿನಲ್ಲಿ ರಾಜ್ಯೋತ್ಸವದ ಸಂಭ್ರಮ!

ಗದಗ: ಕನ್ನಡ ನಾಡು-ನುಡಿಯ ಅಭಿಮಾನ, ಸಾಹಿತ್ಯದ ಸೊಗಡು ಹಾಗೂ ಕವಿತೆಗಳ ಭಾವಲೋಕದೊಂದಿಗೆ ನಗರದ ಕನ್ನಡ ಕಿರಣ ಬಿ.ಎಸ್.ಡಬ್ಲ್ಯೂ. ಕಾಲೇಜಿನಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಾಜ್ಯೋತ್ಸವ, ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಸಡಗರದಿಂದ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ವಿ.ಎಸ್.ಆರ್. ಪ್ರೌಢಶಾಲೆಯ ಕನ್ನಡ ಶಿಕ್ಷಕ ಎಂ.ಕೆ. ಬೇವಿನಕಟ್ಟಿ ಅವರು ಮಾತನಾಡಿ, ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ ಹಾಗೂ ಕವಿಪುಂಗವರ ಸಾಹಿತ್ಯ ಶ್ರೀಮಂತಿಕೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕನ್ನಡ ಭಾಷೆಯ ಸೊಗಡು ಮತ್ತು ಸಾಹಿತ್ಯದ ವೈಭವವನ್ನು ಅರಿತು, ನಾಡು-ನುಡಿಯ ಗೌರವವನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು.

ಕನ್ನಡ ಕಿರಣ ಬಿ.ಎಸ್.ಡಬ್ಲ್ಯೂ. ಕಾಲೇಜಿನ ಉಪನ್ಯಾಸಕಿ ಶೋಭಾ ಬೆನಕನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯದ ಸಾರಸ್ವತ ಅಂಶಗಳು, ಸಾಹಿತ್ಯದ ಮೌಲ್ಯಗಳು ಹಾಗೂ ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿದರು.

ಕವಿಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ ನೇತ್ರಾವತಿ ಮಕ್ಕಣ್ಣವರ, ಪದ್ಮಾವತಿ ಹಾಗೂ ನಿರ್ಮಲಾ ಗುಂಜಳ ಅವರು ಕುವೆಂಪು, ಬೇಂದ್ರೆ ಸೇರಿದಂತೆ ಶ್ರೇಷ್ಠ ಕವಿಗಳ ಸುಂದರ ಕವಿತೆಗಳನ್ನು ವಾಚಿಸುವ ಮೂಲಕ ಸಾಹಿತ್ಯದ ಕಂಪನ್ನು ಹರಡಿದರು. ಯಶಸ್ವಿನಿ ಟೋಕಣ್ಣವರ, ವೀಣಾಶ್ರೀ ಕರೀಭಿಷ್ಟಿ, ಪಲ್ಲವಿ ಬೈಲಪ್ಪನವರ ಹಾಗೂ ಸಂಜನಾ ನಿಂಗೋಜಿ ಅವರು ಕನ್ನಡ ಭಾಷೆಯ ವಿಶಾಲತೆ ಮತ್ತು ಹಿರಿಮೆಯ ಕುರಿತು ಮಾತನಾಡಿ ಕನ್ನಡಾಭಿಮಾನ ಮೆರೆದರು.

ಕಾರ್ಯಕ್ರಮದಲ್ಲಿ ಎಸ್.ಜಿ. ಪೂಜಾರ, ಅರ್ಜುನ್ ಪೂಜಾರ, ಅರ್ಜುನ ಗುರಿಕಾರ, ನಾಗೇಶ ಕರಿ ಹಾಗೂ ಬಸವರಾಜ ಭೋಗಿ ಉಪಸ್ಥಿತರಿದ್ದರು.

ವೀಣಾಶ್ರೀ ಕರೀಭಿಷ್ಟಿ ಪ್ರಾರ್ಥಿಸಿದರು. ಯಶಸ್ವಿನಿ ಟೋಕಣ್ಣವರ ಸ್ವಾಗತಿಸಿದರು. ಅನುಷಾ ಹುಣಶಿಮರದ ನಿರೂಪಿಸಿದರು. ಅಶ್ವಿನಿ ಮುಂಡವಾಡ ವಂದಿಸಿದರು.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ