ನ.4ರಂದು. ವಚನ ಸಾಹಿತ್ಯ ಮತ್ತು ತತ್ವಪದಗಳ ರಾಚನಿಕತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
ನ.4ರಂದು. ವಚನ ಸಾಹಿತ್ಯ ಮತ್ತು ತತ್ವಪದಗಳ ರಾಚನಿಕತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
ಮಹಾಗಾಂವ: ವಚನ ಸಾಹಿತ್ಯ ಮತ್ತು ತತ್ವಪದಗಳ ರಾಚನೀಕತೆ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ನವೆಂಬರ್ 4ರಂದು ಮಹಾಗಾಂವ್ ಕ್ರಾಸ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ಮತ್ತು ಕಲಬುರಗಿ ಜಿಲ್ಲಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿವಿಧ ಗೋಷ್ಠಿಗಳು ನಡೆಯಲಿವೆ.
ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶರಣ ಸಾಹಿತ್ಯದ ಕುರಿತು ಚರ್ಚೆ ನಡೆಯಲಿದ್ದು, ಗ್ರಾಮೀಣ ಮಟ್ಟದ ಗಣ್ಯರು ಹಾಗೂ ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಶಾಸಕ ಬಸವರಾಜ ಮತ್ತಿಮೂಡ.ಉದ್ಘಾಟಿಸಲಿದ್ದು, ಡಾ. ಲಿಂಗಪ್ಪ ಗೋನಾಳ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ .ಮುಖ್ಯ ಅತಿಥಿಗಳಾಗಿ ಶ್ರೀ ಶಿವಪ್ರಭು ಪಾಟೀಲ, ಶ್ರೀ ಮಲ್ಲಿಕಾರ್ಜುನ ವೀರಶೆಟ್ಟಿ ಹಾಗೂ ಶ್ರೀ ಬಂಡೆಪ್ಪ ಚಿಂಚೋಳಿ ಭಾಗವಹಿಸಲಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜು ಮಹಾಗಾಂವ ನ ಪ್ರಾಚಾರ್ಯ ಪ್ರೊ. ಶರಣಪ್ಪ ಮಾಳಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿ ಡಾ.ಮಲ್ಲಿಕಾರ್ಜುನ ವಡ್ಡನಕೇರಿ. ಹಾಗೂ
ಡಾ. ತೀರ್ಥ ಕುಮಾರ ಬೆಳಕೊಟಾ
ಡಾ.ಅನಿಲಕುಮಾರ ಹಾಲು.
ಡಾ .ಕರಿಗೋಳೆಶ್ವರ.
ಡಾ .ಶರಣಬಸಪ್ಪ ವಡ್ಡನಕೇರಿ.
ಬಳಿಕ ನಡೆಯುವ ಗೋಷ್ಠಿಗಳಲ್ಲಿ ವಚನ ಸಾಹಿತ್ಯ, ತತ್ವಪದಗಳು ಮತ್ತು ಅವುಗಳ ಸಾಮಾಜಿಕ ಹಾಗೂ ರಾಜಕೀಯ ಪ್ರಸ್ತುತತೆ ಕುರಿತು ವಿಷಯ ಮಂಡನೆ ನಡೆಯಲಿದೆ. ವಿವಿಧ ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ಸಾಹಿತಿಗಳು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಮಧ್ಯಾಹ್ನ 12ರಿಂದ 1.30ರವರೆಗೆ ಉಪನ್ಯಾಸ ಗೋಷ್ಠಿ, ಮಧ್ಯಾಹ್ನ 2.30ರಿಂದ 4ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಉಪನ್ಯಾಸಕರಾಗಿ ಶ್ರೀಮತಿ ರಾಜೇಶ್ವರಿ ಲೋಕಾಪುರೆ.ಡಾ.ಚಿದಾನಂದ ಚಿಕ್ಕಮಠ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಕಾಂತ ಪಾಟೀಲ. ಮಲ್ಲಿಕಾರ್ಜುನ ಮುಲಗೆ. ಪ್ರಕಾಶ ಖೋಬರೆ . ಗೌರವ ಉಪಸ್ಥಿತಿ ಡಾ. ಶರಣಪ್ಪ ಚಕ್ರವರ್ತಿ .
ಸಮಾರೋಪ ಭಾಷಣವನ್ನು ಡಾ .ಶಾಂತಪ್ಪ ಡಂಬಳ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಶಿವಕುಮಾರ ಪಸಾರ. ಮಲ್ಲಿಕಾರ್ಜುನ ಮರತುರಕರ. ಗಿರೀಶ್ ಮಾಲಿಪಾಟೀಲ. ಉಮೇಶ್ ಸಾಗರ. ಸುರೇಶ್ ಲೆಂಗಟಿ.ಡಾ .ಮಲ್ಲಿಕಾರ್ಜುನ ವಡ್ಡನಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ .
ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.,

