ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ಆಪರೇಷನ್ ಖಂಡನೀಯ: ರಾಜಗೋಪಾಲರೆಡ್ಡಿ

ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ಆಪರೇಷನ್ ಖಂಡನೀಯ: ರಾಜಗೋಪಾಲರೆಡ್ಡಿ

ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ಆಪರೇಷನ್ ಖಂಡನೀಯ: ರಾಜಗೋಪಾಲರೆಡ್ಡಿ

ಕಲಬುರಗಿ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಸಿರುವ ಸ್ಟಿಂಗ್ ಆಪರೇಷನ್ ಖಂಡನೀಯ' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಗುರಮಿಠಕಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರಾಜಗೋಪಾಲರೆಡ್ಡಿ ಮುದಿರಾಜ ಹೇಳಿದರು.

      ಈ ಕುರಿತು ಪ್ರಕಟಣೆ ನೀಡಿದ ಅವರು,'ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಅದರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಬೇಡ, ಸಾರ್ವಜನಿಕ ಜೀವನದಲ್ಲಿರುವ ನಾಯಕರ ಕುರಿತು ಯಾವುದೇ ಆರೋಪಗಳು ಕೇಳಿ ಬಂದಾಗ ಅವುಗಳ ಸತ್ಯಾ ಸತ್ಯತೆ ಪರಿಶೀಲಿಸದೆ ತೀರ್ಮಾನ ಮಾಡಬಾರದು. ಪ್ರಜಾಪ್ರಭುತ್ವದಲ್ಲಿ ಟೀಕೆ ಮತ್ತು ವಿಮರ್ಶೆಗಳಿಗೆ ಅವಕಾಶವಿದೆ. ಆದರೆ ರಾಜಕೀಯ ಉದ್ದೇಶದಿಂದ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯಬಾರದು' ಎಂದು ತಿಳಿಸಿದ್ದಾರೆ.