ಸಂಘಟಕ ಮಾರುತಿ ಗಂಜಗಿರಿ ನೇತೃತ್ವದಲ್ಲಿ ನಾಗಾಇದ್ಲಾಯಿ ಗ್ರಾ.ಪಂ. ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ
ಸಂಘಟಕ ಮಾರುತಿ ಗಂಜಗಿರಿ ನೇತೃತ್ವದಲ್ಲಿ ನಾಗಾಇದ್ಲಾಯಿ ಗ್ರಾ.ಪಂ. ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ
ವಿವಿಧ ಬೇಡಿಕೆಗಳು ಈಡೇರಿಕೆಗಾಗಿ ಹಕ್ಕೊತ್ತಾಯ ಜಿ.ಪಂ.ಸಿಇಓಗೆ ಮನವಿ ಸಲ್ಲಿಕೆ
ಚಿಂಚೋಳಿ: ವಿವಿಧ ಬೇಡಿಕೆಗಳು ಈಡೇರಿಸಲು ತಾಲೂಕಿನ ನಾಗಇದ್ಲಾಯಿ ಗ್ರಾಮ ಪಂಚಾಯಿತಿ ಆಡಳಿತ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಸಂಘಟಕ ಮಾರುತಿ ಗಂಜಗಿರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಕ್ಕೋತ್ತಾಯದ ಬೇಡಿಕೆಗಳು :
ಗ್ರಾಮ ಪಂಚಾಯಿತಿಯಲ್ಲಿ ವಯೋವೃದ್ದರ ಹಗಲು ಯೋಗಕ್ಷೇಮ ಕೇಂದ್ರ ಪ್ರಾರಂಭ ಮಾಡಬೇಕು.
ಕೊಳ್ಳುರ ಗ್ರಾಮದಲ್ಲಿ ಸಾಮೂಹಿಕ ಮಹಿಳಾ ಶೌಚಾಲಯದ ನಿರ್ಮಾಣ. ಕುಸರಂಪಳ್ಳಿ ಗ್ರಾಮದ ಪರಿಶಿಷ್ಟ ಜನರು ವಾಸಿಸುವ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಬಹುದಿನಗಳಿಂದ ಕೆಟ್ಟು ಹೋಗಿರುವ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿ ಹಾಗೂ ಲಕ್ಷ್ಮಿ ದೇವಾಲಯ, ಚರ್ಚ್ ಮತ್ತು ಹಳೆಯ ಒಣಿಯ ಹೈ ಮಾಸ್ಕ್ ದೀಪಗಳು ಕೂಡಲೆ ರೀಪೇರಿ ಮಾಡಿ ಬಳಕೆಗೆ ತರಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಅಕ್ರಮ ಮಧ್ಯ ಮಾರಾಟ ದಂಧೆ ತಡೆಯುವದು
ಪಂಚಾಯತ್ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಬೋಧನ ಶಿಕ್ಷಕರ ನೇಮಿಸುವುದು ಹಾಗೂ ದುಡಿಯುವ ಕೂಲಿ ಕಾರ್ಮಿಕರ ಕೈಗಳಿಗೆ ಕೆಲಸ ಒದಗಿಸುವುದು ಮತ್ತು ಕಡಿತಗೊಂಡಿರುವ ವಯೋವೃದ್ದರ ವೇತನ ಹಾಗೂ ವಿಧವಾ ವೇತನ ಮತ್ತು ಅಂಗವೀಕಲರ ವೇತನಗಳನ್ನು ಪುನಃ ಪ್ರಾರಂಭಿಸಲು ಅರ್ಹ ಫಲಾನುಭವಿಗಳ ಮನೆಗಳಿಗೆ ತೆರಳಿ ಗ್ರಾಮ ಆಡಳಿತಾಧಿಕಾರಿಗಳು ದಾಖಲಾತಿಗಳು ಪರಿಶೀಲನೆ ನಡೆಸಿ ಬ್ಯಾಂಕ್ ಖಾತೆಗಳಿಗೆ ವೇತನ ಜಮೆ ಮಾಡಬೇಕೆನ್ನುವ ಬೇಡಿಕೆ ಮನವಿ ಪತ್ರವನ್ನು ತಾ.ಪಂ. ಇಒ ಸಂತೋಷಕುಮಾರ ಚವ್ಹಾಣ ರವರ ಮೂಲಕ ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿಕುಮಾರ್ ರುಸ್ತಂಪೂರ, ಪ್ರದೀಪ್ ಕೊಳ್ಳುರ, ಮಹೇಶ ಕುಸರಂಪಳ್ಳಿ, ಮೋಹನ ಐನಾಪೂರ, ಅಮರನಾಥ ಹೂವಿನಭಾವಿ , ಮೂಬೀನ್ ಚಿಂಚೋಳಿ, ರಮೇಶ ಕುಸರಂಪಳ್ಳಿ, ಸುಮಿತ್ರ ಕೊಳ್ಳೂರ, ಜಗಮ್ಮಾ , ಕಾಶಮ್ಮಾ , ಆಶಾ ರಾಣಿ, ಅಂಬಿಕಾ, ರಂಗಮ್ಮಾ, ಯಶೋಧಾ, ಸತ್ಯಮ್ಮಾ, ಸುನಿತಾ, ಮಹೇಶ, ಚಂದ್ರಮ್ಮಾ, ಈರಮ್ಮ, ನಾಗಮ್ಮ, ವೈಜನಾಥ, ಪರಮೇಶ್ವರ ,ರಾಜಕುಮಾರ, ಲೋಕೇಶ, ಪವನಕುಮಾರ, ಆನಂದ, ನೀಲಪ್ಪ ಅಬ್ರಾಹಂ ಹಾಗೂ ರಾಜು ಅವರು ಇದ್ದರು.

