ಯುವ ಶಕ್ತಿ ವಿಕಸಿತ ಭಾರತದ ದೊಡ್ಡ ಶಕ್ತಿ

ಯುವ ಶಕ್ತಿ ವಿಕಸಿತ ಭಾರತದ ದೊಡ್ಡ ಶಕ್ತಿ

ಗೆಟ್ಸ್ ಪದವಿ‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಚಿಂತಕ ಡಾ.ಸದಾನಂದ ಪೆರ್ಲ ಅಭಿಮತ ಯುವ ಶಕ್ತಿ ವಿಕಸಿತ ಭಾರತದ ದೊಡ್ಡ ಶಕ್ತಿ 

ಕಲಬುರಗಿ : ಭಾರತದ ವಿದ್ಯಾರ್ಥಿ ಶಕ್ತಿ ವಿಕಸಿತ ಭಾರತ ನಿರ್ಮಾಣದ ದೊಡ್ಡ ಶಕ್ತಿಯಾಗಿ ಕೊಡುಗೆ ಸಲ್ಲಿಸಿ ರಾಷ್ಟ ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ಅಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಹೇಳಿದರು.

           ನಗರದ ಹೊಸ ಜೇವರ್ಗಿ ರಸ್ತೆಯ 'ಗೆಟ್ಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜ್ 'ನಲ್ಲಿ ಶನಿವಾರ ಜರುಗಿದ ಪ್ರಥಮ ವರ್ಷದ ಒದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಮ್ಮ ದೇಶದಲ್ಲಿ 15 ರಿಂದ 29 ವಯೋಮಾನದ

39 ಕೋಟಿಗೂ ಅಧಿಕ ಸಂಖ್ಯೆಯ ಯುವಕರಿದ್ದು, ಭಾರತ ಯುವ ಶಕ್ತಿಯನ್ನು ಹೊಂದಿದ ಅತ್ಯಂತ ದೊಡ್ಡ ರಾಷ್ಟ್ರ . 2047ರ ವಿಕಸಿತ ಭಾರತ ಸಂಕಲ್ಪ ಈಡೇರಿಕೆಗೆ ಈ ಬೃಹತ್ ಯುವಶಕ್ತಿ ಕೊಡುಗೆ ನೀಡುವಂತಾಗಲಿ. ಕಠಿಣ ಪರಿಶ್ರಮ, ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ಪಡೆದು ಬೆಳೆಯಬೇಕು ಎಂದು ಹೇಳಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಸಂತೋಷ್ ಹುಂಪಳಿ ಮಾತನಾಡಿ, ಉನ್ನತ ಶಿಕ್ಷಣ ಮುಂದುವರಿಸಲು ರಾಜ್ಯದ ಲಭ್ಯ ಎಲ್ಲಾ ಸೌಲಭ್ಯ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಉತ್ತಮ ಶಿಕ್ಷಣ ಪಡೆದು ಬೆಳೆಯಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನೇಹಾ ಎಚ್. ಕಂಟೆಗೋಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಚ್.ಬಿ ಪಾಟೀಲ್, ಸಂಸ್ಥೆಯ ಟ್ರಸ್ಟಿ ಚನ್ನವೀರಯ್ಯ ಹಿರೇಮಠ, ಸಂಸ್ಥೆಯ ಅಧ್ಯಕ್ಷ ಡಾ ಎಚ್ .ಬಿ. ಕಂಟೆಗೋಳ್, ಕೋಶಾಧಿಕಾರಿ ಬಸವರಾಜ್ ಎಚ್. ಕಂಟೆಗೋಳ್, ಚಂದ್ರಶೇಖರ್, ಪ್ರೊ. ಉಮಾ ರೆಡ್ಡಿ, ರೋಹಿಣಿ, ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರೊ. ಶಿವಲಿಂಗಪ್ಪ ತಳವಾರ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಕಲ್ಪನಾ ಭರತನಾಟ್ಯ ಪ್ರದರ್ಶಿದರು. ಅಶ್ವಿನಿ ಪ್ರಾರ್ಥಿಸಿದರು. ಮಯೂರಿ ಮತ್ತು ಸೂರಜ್ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.