ಶರಣ ಶ್ರೀ ಪ್ರಶಸ್ತಿ ನೀಡಿ ಅಮೋಘ ಸೇವೆಗೆ ಗೌರವ

ಶರಣ ಶ್ರೀ ಪ್ರಶಸ್ತಿ ನೀಡಿ ಅಮೋಘ ಸೇವೆಗೆ ಗೌರವ

ಶರಣ ಶ್ರೀ ಪ್ರಶಸ್ತಿ ನೀಡಿ ಅಮೋಘ ಸೇವೆಗೆ ಗೌರವ

ಕಲಬುರಗಿ: ನಗರದ ಹೋಳಿಕಟ್ಟಾ, ಮಕ್ತಾಪುರದಲ್ಲಿರುವ ಭಗವಾನ್ ಶ್ರೀ ಜೀವೇಶ್ವರ ದೇವಸ್ಥಾನದಲ್ಲಿ ಆ. 26ರಂದು ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಶ್ರೀ ಪುಟ್ಟರಾಜ ಕಲಾ ಸಂಘದ ವತಿಯಿಂದ ಜಿಲ್ಲಾ ಸ್ವಕುಳ ಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಹಾಗೂ 2025ರಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಮೋಘ ಕಾರ್ಯಗೈದ, ಶರಣ ಸಂಪ್ರದಾಯವನ್ನು ಅಳವಡಿಸಿಕೊಂಡಿರುವ ಖ್ಯಾತ ಉದ್ಯಮಿ, ನಾರಾಯಣ ಸಿಂಗಾಡೆ ಅವರನ್ನು ‘ಶರಣ ಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ಖ್ಯಾತ ಕಲಾವಿದ ಶ್ರೀ ದತ್ತರಾಜ ಕಲಶೆಟ್ಟಿ, ಅಂಡಗಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿವರಾಜ ಅಂಡಗಿ, ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ವಿನೋದಕುಮಾರ ಜೇನವೆರಿ, ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷ ಶ್ರೀ ಶಿವಲಿಂಗಪ್ಪ ಅಷ್ಟಗಿ, ಪೇಂಟರ್ ಅರುಣಕುಮಾರ ಕಲಶೆಟ್ಟಿ, ಖ್ಯಾತ ಪುರವಂತ ಶ್ರೀ ಗಂಗಾಧರ ಅಗ್ಗಿಮಠ, ಪೂನಾ ಟೈಲರ್, ಸ್ವಕುಳ ಸಾಲಿ ಸಮಾಜದ ಗೌರವಾಧ್ಯಕ್ಷ ಹೀರೊಳ್ಳಿಕರ, ರಾಜ್ಯ ಉಪಾಧ್ಯಕ್ಷ ತುಕಾರಾಂ ಕೊಂಗೆ, ಶಿಕ್ಷಕ ಮಹೇಶಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.