ರಾಜ್ಯ ಹೋಟೆಲ್ ಸಂಘದ ನೂತನ ಅಧ್ಯಕ್ಷ ಮಧುಕರ್ ಶೆಟ್ಟಿ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿಗೆ ಅಭಿನಂದನೆ

ರಾಜ್ಯ ಹೋಟೆಲ್ ಸಂಘದ ನೂತನ ಅಧ್ಯಕ್ಷ ಮಧುಕರ್ ಶೆಟ್ಟಿ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿಗೆ ಅಭಿನಂದನೆ

ರಾಜ್ಯ ಹೋಟೆಲ್ ಸಂಘದ ನೂತನ ಅಧ್ಯಕ್ಷ ಮಧುಕರ್ ಶೆಟ್ಟಿ, ಉಪಾಧ್ಯಕ್ಷ ಸತ್ಯನಾಥ ಶೆಟ್ಟಿಗೆ ಅಭಿನಂದನೆ

 ಕಲಬುರಗಿ : ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘದ 2026 - 29 ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆ ಹೊಂದಿದ ಮಧುಕರ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಉದ್ಯಮಿ ಕಲಬುರಗಿಯ ಸತ್ಯನಾಥ ಶೆಟ್ಟಿ ಆಯ್ಕೆಗೊಂಡಿರುವುದಕ್ಕೆ ಕಲಬುರಗಿ ಜಿಲ್ಲಾ ಹೋಟೆಲ್, ವಸತಿಗೃಹ ಹಾಗೂ ಬೇಕರಿ ಮಾಲೀಕರ ಸಂಘ ಅಭಿನಂದನೆ ಸಲ್ಲಿಸಿದೆ.

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆಗಸ್ಟ್ 27ರಂದು ನಡೆದ ಮಹಾ ಸಭೆಯಲ್ಲಿ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳಾಗಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್ ತಿಳಿಸಿದ್ದಾರೆ. ನೂತನ ಸಮಿತಿಗೆ ಜಿ.ಕೆ.ಶೆಟ್ಟಿ (ಗೌರವಾಧ್ಯಕ್ಷ) ಮಧುಕರ ಶೆಟ್ಟಿ (ಅಧ್ಯಕ್ಷ) ವೀರೇಂದ್ರ ಎಂ ಕಾಮತ್ ( ಗೌರವ ಕಾರ್ಯದರ್ಶಿ) ರಾಮಮೂರ್ತಿ (ಕೋಶಾಧಿಕಾರಿ) 

ಪಿ.ಸಿ ರಾವ್, ರಾಘವೇಂದ್ರರಾವ್ ಸತ್ಯನಾರಾಯಣಗೌಡ, ಎಚ್ ಎನ್ ಉಮೇಶ್, ಸತ್ಯನಾಥ ಶೆಟ್ಟಿ, ಜಿ.ಎ ದೀಪಾನಂದ ಉಪಾಧ್ಯಕ್ಷರುಗಳು ಶೇಖರ ನಾಯ್ಡು( ಜಂಟಿ ಕಾರ್ಯದರ್ಶಿ) ಆಯ್ಕೆ ಹೊಂದಿದ್ದಾರೆ.

    ನೂತನ ಸಮಿತಿಗೆ ಆಯ್ಕೆ ಹೊಂದಿದೆ ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯದಲ್ಲಿ ಹೋಟೆಲ್ ಉದ್ಯಮ ರಂಗವು, ಇನ್ನಷ್ಟು ಅಭಿವೃದ್ಧಿಯ ಕಡೆಗೆ ಸಾಗಲಿ ಎಂದು ಅಧ್ಯಕ್ಷರಾದ ನರಸಿಂಹ ಮೆಂಡನ್, ಶಿವರಾಜ ಕೋಟ್ಯಾನ್, ಶರಣು ಪಾಟೀಲ್, ಡಾ ಸದಾನಂದ ಪೆರ್ಲ,ಮೊಯಿನುದ್ದೀನ್, ದೀಪಕ್ ರಾಯ್ಕರ್, ಮಹಾ ಕೀರ್ತಿ ಶೆಟ್ಟಿ, ಸುನಿಲ್ ಶೆಟ್ಟಿ ರಮಾನಂದ ಬಂಡಾರಿ ಪ್ರಶಾಂತ್ ಶೆಟ್ಟಿ, ಮಾಲಾ ಕಣ್ಣಿ, ಗಿರಿಧರ ಭಟ್, ರಾಜಶೇಖರ ಶೆಳ್ಳಗಿ, ಮತ್ತಿತರರು ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.