ಸಪ್ತ ಮಠಗಳಿಗೆ ಸರ್ಕಾರದ ಆಹ್ವಾನ: ನಾಯಕರ ಒಗ್ಗಟ್ಟಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಸ್ವಾಗತ

ಸಪ್ತ ಮಠಗಳಿಗೆ ಸರ್ಕಾರದ ಆಹ್ವಾನ: ನಾಯಕರ ಒಗ್ಗಟ್ಟಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಸ್ವಾಗತ

ರಾಜ್ಯಮಟ್ಟದ ನಾರಾಯಣ ಗುರು ಜಯಂತಿಯು ಸಮಾಜದ ಒಗ್ಗಟ್ಟಿಗೆ ಶಕ್ತಿ

ಸಪ್ತ ಮಠಗಳಿಗೆ ಸರಕಾರದ ಆಹ್ವಾನ - ನಾಯಕರ ಒಗ್ಗಟ್ಟಿಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಹರ್ಷ

 ಕಲಬುರಗಿ : ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆಯ ವೇಳೆ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಮೊಟ್ಟಮೊದಲ ಬಾರಿಗೆ ಸಮಾಜದ ಏಳು ಮಠಗಳ ಸ್ವಾಮೀಜಿಗಳಿಗೆ ಅಧಿಕೃತ ಆಹ್ವಾನ ನೀಡಿ ಎಲ್ಲರನ್ನೂ ಒಗ್ಗೂಡಿಸಿ ಜಯಂತಿ ಆಚರಿಸಲು ನಿರ್ಧರಿಸಿರುವುದು ರಾಜ್ಯದ ಈಡಿಗ ಸಮಾಜದ ಒಗ್ಗಟ್ಟಿಗೆ ಶಕ್ತಿ ತುಂಬಿದಂತಾಗಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಹರ್ಷ ವ್ಯಕ್ತಪಡಿಸಿದೆ.

    ರಾಜ್ಯಮಟ್ಟದ ಬ್ರಹ್ಮ ಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಆಗಸ್ಟ್ 28ರಂದು ಸಾಯಂಕಾಲ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಿದ್ದು ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿಯವರು ಈಡಿಗ ಸಮಾಜದ ಎಲ್ಲ ಸ್ವಾಮೀಜಿಗಳನ್ನು ಇದೇ ಪ್ರಥಮ ಬಾರಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ಶಿಷ್ಟಾಚಾರದ ಪ್ರಕಾರ ನಡೆಸಲು ಸೂಚನೆ ನೀಡಿರುವುದು ರಾಜ್ಯದ ನಾಲ್ಕನೇ ಅತಿ ದೊಡ್ಡ ಈಡಿಗ, ಬಿಲ್ಲವ ಸೇರಿದಂತೆ 26 ಸಮುದಾಯ ಗಳಿಗೆ ಸರಕಾರವು ಕೊಟ್ಟ ವಿಶೇಷ ಗೌರವವಾಗಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್ ಸಂತಸ ವ್ಯಕ್ತಪಡಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಉದ್ಘಾಟನೆ ಮಾಡಲಿದ್ದು ಚಿಕ್ಕಪೇಟೆ ಶಾಸಕರಾದ ಉದಯ ಗರುಡಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ ನಮ್ಮ ಸಮಾಜದ ಮಂತ್ರಿಗಳು ಕೆಪಿಸಿಸಿ ಅಧ್ಯಕ್ಷ ರು ಶಾಸಕರು ಹಾಗೂ ಗಣ್ಯರು ಪಾಲ್ಗೊಳ್ಳುವ ಜೊತೆಗೆ ಸಮಾಜದ ಗುರುಗಳಾದ ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಚಿತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಡಾ ಪ್ರಣವಾನಂದ ಸ್ವಾಮೀಜಿ ಸಾಗರನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮೀಜಿ, ಸಂಡೂರು ಓಂ ಶಕ್ತಿ ಪೀಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಸ್ವಾಮೀಜಿ, ಹಾಜಲಾಪುರದ ಶ್ರೀ ಶಂಕರಪ್ಪ ಸ್ವಾಮೀಜಿ, ಸೈದಾಪುರ ಮಠದ ಶ್ರೀ ಭೀಮಾಶಂಕರ ಶರಣ ಸ್ವಾಮೀಜಿ ಭಾಗವಹಿಸುತ್ತಿರುವುದು ಸಮಾಜದ ಮಠಗಳಿಗೆ ಸರಕಾರ ನೀಡಿದ ವಿಶೇಷ ಗೌರವವಾಗಿದೆ. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಮಾಜ ಬಾಂಧವರು ಪಾಲ್ಗೊಳ್ಳಬೇಕು. ಸಮಾಜದ ಹಿರಿಯ ನಾಯಕರು ಈ ಬಾರಿಯ ಜಯಂತಿಯನ್ನು ಸರ್ವರ ಪಾಲ್ಗೊಳ್ಳುವಿಕೆಯೊಂದಿಗೆ ಆಚರಿಸಲು ಸರಕಾರ ಹಾಗೂ ಇಲಾಖೆಯ ಮೂಲಕ ಪ್ರಯತ್ನ ಮಾಡಿರುವುದಕ್ಕೆ, ಹೋರಾಟ ಸಮಿತಿ ಅಭಿನಂದನೆ ಸಲ್ಲಿಸಿದೆ.

    ಸರಕಾರದ ಈ ನಿರ್ಧಾರಕ್ಕೆ ಹೋರಾಟ ಸಮಿತಿಯ ಹಾಗೂ ಕರದಾಳ ಶಕ್ತಿ ಪೀಠದ ಟ್ರಸ್ಟಿ ಹಾಗೂ ಪದಾಧಿಕಾರಿಗಳಾದ ಮಹಾದೇವ ಗುತ್ತೇದಾರ್, ನಿತಿನ್ ಗುತ್ತೇದಾರ್,ಬಾಲರಾಜ್ ಗುತ್ತೇದಾರ್, ವೆಂಕಟೇಶ ಗುಂಡಾನೂರ, ಕುಪೇಂದ್ರ ಗುತ್ತೇದಾರ್ ನಾಗೂರ, ರಾಜೇಶ್ ಡಿ ಗುತ್ತೇದಾರ್ ಕಾಶಿನಾಥ ಗುತ್ತೇದಾರ್ ಚಿತ್ತಾಪುರ, ಪ್ರವೀಣ್ ಜತ್ತನ್, ವಿನೋದ್ ಗುತ್ತೇದಾರ್, ಸುರೇಶ್ ಗುತ್ತೇದಾರ್ ಮಟ್ಟೂರು, ಮಲ್ಲಿಕಾರ್ಜುನ ಕುಂದಿ, ನಾಗಯ್ಯ ಗುತ್ತೇದಾರ್ ಕರದಾಳ, ಶಿವಯ್ಯ ಪೇಟ್ ಶಿರೂರು, ಸೋಮರಾಯ ಶಾಖಾಪುರ,ರಾಜು ತೆಲಂಗಾ, ಸುರೇಶ್ ಗುತ್ತೇದಾರ್ ಕರದಾಳ, ಮಹೇಶ್ ಗುತ್ತೇದಾರ ಹೊಳಕುಂದ,ಅನಿಲ್ ಯಾರಗೋಳ, ದಯಾನಂದ ಪೂಜಾರಿ ಸಂತೋಷ್ ಪೂಜಾರಿ, ಶರಣಯ್ಯ ಗುತ್ತೇದಾರ್ ಕೊಂಚೂರು, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಮಲ್ಲು ಜೀವಣಗಿ ಸೇರಿದಂತೆ ಅನೇಕರು ಸರಕಾರದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಶಕ್ತಿಪೀಠದ ಮಾಧ್ಯಮ ಸಂಚಾಲಕರಾದ ಡಾ ಸದಾನಂದ ಪೆರ್ಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ