ಡಾ.ವಿನೋದ ಮುಕ್ತೇದಾರಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ
ಡಾ.ವಿನೋದ ಮುಕ್ತೇದಾರಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರದಾನ.
ಹುಬ್ಬಳ್ಳಿ : ಧಾರವಾಡದ ಪೊಲೀಸ್ ಇಲಾಖೆಯಲ್ಲಿ ಎಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ
ನಿಷ್ಠಾವಂತ ಹಾಗೂ ಸಾಂಸ್ಕೃತಿಕ ಚಿಂತಕ ಡಾ.ವಿನೋದ ಮುಕ್ತೇದಾರ ಅವರಿಗೆ ಶ್ರೇಯಾ ಜನ ಸೇವಾ ಟ್ರಸ್ಟ್ ವತಿಯಿಂದ ಭಾರತ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಶೆಟ್ಟರ್ ಬಡಾವಣೆಯ ಗ್ಲೋಬಲ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ನೂತನ ಟ್ರಸ್ಟ್ ಉದ್ಘಾಟನೆ ಹಾಗೂ 80 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಡಾ.ವಿನೋದ ಕುಮಾರ ಮುತ್ತೇದಾರ ಅವರಿಗೆ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕವಿಗಳಾಗಿ,ಕಲಾವಿದರಾಗಿ, ಲೇಖಕರಾಗಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ವಿನೋದ ಮುಕ್ತೇದಾರ ಅವರು ಕರೋನ ಸಮಯದಲ್ಲಿ ಸಂಕಷ್ಟದಲ್ಲಿರುವ ಬಡ ಜನರಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡಿ
ಮಾನವೀಯತೆ ಮೆರೆದು ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು ಇವರಾಗಿದ್ದು ಇವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಜೈ ಹನುಮಾನ್ ಫೌಂಡೇಶನದ ಅಧ್ಯಕ್ಷರಾದ ಡಾ.ರಮೇಶ್ ಮಹಾದೇವಪ್ಪನವರ,ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಶಾಂತಪ್ಪ ವಾಯ್,ಕಡಿವಾಲ.ಹೋಟೆಲ್ ಮಾಲೀಕರ ಸಂಘದ ರಾಜೇಶ್ ಶೆಟ್ಟಿ,ಗ್ಲೋಬಲ್ ಕಾಲೇಜ್ ಡೀನ್ ಡಾ.ಮಹೇಶ ದೇಶಪಾಂಡೆ ಸೇರಿದಂತೆ ಇತರರು ಹಾಜರಿದ್ದರು.

