ಹಬ್ಬಗಳಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಚಿಂತನೆಗಳಿವೆ, ಮುಖ್ಯಶಿಕ್ಷಕ ಎಸ್.ಬಿ. ದೊಡ್ಡಣ್ಣವರ.

ಹಬ್ಬಗಳಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಚಿಂತನೆಗಳಿವೆ, ಮುಖ್ಯಶಿಕ್ಷಕ ಎಸ್.ಬಿ. ದೊಡ್ಡಣ್ಣವರ.

ಹಬ್ಬಗಳಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಚಿಂತನೆಗಳಿವೆ, ಮುಖ್ಯಶಿಕ್ಷಕ ಎಸ್.ಬಿ. ದೊಡ್ಡಣ್ಣವರ.

ನರೇಗಲ್ಲ, ಆ.30: ಸಾಹಿತ್ಯ ಕೇವಲ ಅಕ್ಷರಗಳ ಜೋಡಣೆಯಲ್ಲ. ಅದು ವ್ಯಕ್ತಿಯ ಚಿಂತನೆಗೆ ದಿಕ್ಕು ತೋರಿಸುವುದರ ಜೊತೆಗೆ ಸಮಾಜದಲ್ಲಿ ಪರಿವರ್ತನೆ ತರುವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಬಲ ಶಕ್ತಿಯಾಗಿದೆ ಎಂದು ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ರವೀಂದ್ರನಾಥ ಬಿ. ದಂಡಿನ ಹೇಳಿದರು.

ಪಟ್ಟಣದ ಬೀಚಿ ಬಳಗ ಹಾಗೂ ಕೆ.ಎಸ್.ಎಸ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಮಹಾವಿದ್ಯಾಲಯದಲ್ಲಿ ನಡೆದ ಬೀಚಿ ಬಳಗದ ಮಾಸಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯ ಓದು ಮತ್ತು ಬರವಣಿಗೆಯ ಅಭ್ಯಾಸದಿಂದ ಭಾಷಾ ಜ್ಞಾನ, ಶಬ್ದ ಸಂಪತ್ತು ಹಾಗೂ ಸೃಜನಶೀಲತೆ ವೃದ್ಧಿಯಾಗುತ್ತದೆ. ಉತ್ತಮ ಸಾಹಿತ್ಯ ರಚನೆಗೆ ನಿರಂತರ ಅಧ್ಯಯನ, ಭಾಷೆಯ ಮೇಲಿನ ಪ್ರಭುತ್ವ ಹಾಗೂ ಸಮೃದ್ಧ ಶಬ್ದ ಸಂಪತ್ತು ಅಗತ್ಯ ವಿದ್ಯಾರ್ಥಿಗಳು ಉತ್ತಮ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಬೀಚಿ ಅವರ ಸಾಹಿತ್ಯವನ್ನು ಓದಿ, ಸವಿಯುವ ಅವಕಾಶ ದೊರೆತಿರುವುದು ಮಹತ್ವದ್ದಾಗಿದೆ. ಸಾಹಿತ್ಯ ಮತ್ತು ಸಂಗೀತಕ್ಕೆ ಜಾತಿ, ಮತ, ಪಂಥ, ವಯಸ್ಸು ಹಾಗೂ ಶ್ರೀಮಂತಿಕೆಯ ಯಾವುದೇ ಗಡಿಗಳಿಲ್ಲ. ಅವು ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿವೆ. ನರೇಗಲ್ಲದಲ್ಲಿ ಬೀಚಿ ಬಳಗ ಪ್ರತಿ ತಿಂಗಳು ಮಾಸಿಕ ಸಭೆ ನಡೆಸುವ ಮೂಲಕ ಸಾಹಿತ್ಯಾಸಕ್ತಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯ. ಗದಗ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಇಂತಹ ನಿರಂತರ ಪ್ರೋತ್ಸಾಹ ಇನ್ನಷ್ಟು ವಿಸ್ತರಿಸಬೇಕು ಎಂದು ಹೇಳಿದರು.

ಹಬ್ಬಗಳ ಹಿಂದೆ ವೈಜ್ಞಾನಿಕ ಚಿಂತನೆಯಿದೆ

ಮುಖ್ಯಶಿಕ್ಷಕ ಎಸ್.ಬಿ. ದೊಡ್ಡಣ್ಣವರ ಮಾತನಾಡಿ, ಹಬ್ಬಗಳು ಕೇವಲ ಸಡಗರ-ಸಂಭ್ರಮಕ್ಕೆ ಸೀಮಿತವಾಗಿಲ್ಲ. ಅವುಗಳ ಹಿಂದೆ ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಚಿಂತನೆಗಳಿವೆ ಎಂದರು.

ಋತುಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜ್ಞಾನವನ್ನು ನಮ್ಮ ಹಿರಿಯರು ಹಬ್ಬಗಳ ಆಚರಣೆಯಲ್ಲಿಯೇ ಅಳವಡಿಸಿದ್ದರು. ಹಬ್ಬಗಳಲ್ಲಿ ತಯಾರಿಸುವ ವಿವಿಧ ಆಹಾರಗಳಿಗೂ ವೈಜ್ಞಾನಿಕ ಹಿನ್ನೆಲೆಯಿದೆ ಎಂದು ವಿವರಿಸಿದರು.

ಶಿವಯೋಗಿ ಜಕ್ಕಲಿ ಅಧ್ಯಕ್ಷತೆ ವಹಿಸಿದ್ದರು. ಅಬ್ಬಿಗೇರಿಯ ಯಲ್ಲಾಲಿಂಗೇಶ್ವರ ಮಠದ ಡಾ. ಬಸವರಾಜ ಬಸವರಡ್ಡಿ ದಿವ್ಯ ಸಾನಿಧ್ಯ ವಹಿಸಿದ್ದರು. ವೈದ್ಯ ಕೆ.ಬಿ. ಧನ್ನೂರ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್.ಬಿ. ದೊಡ್ಡಣ್ಣವರ, ನಿವೃತ್ತ ಮುಖ್ಯಶಿಕ್ಷಕಿ ಭಾರತಿ ಶಿರ್ಸಿ ಹಾಗೂ ಪರ್ವತಾರೋಹಿ ಸೃಷ್ಟಿ ಮೇಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಪಿ. ಸಾಲಿಮಠ ಹಾಗೂ ಶಿಕ್ಷಕ ಮೆಹರವಾಡೆ ಅವರ ಸಂಗೀತ ಜುಗಲ್ಬಂದಿ ಗಮನ ಸೆಳೆಯಿತು.

ಡಿ.ಎ. ಅರವಟಿಗಿಮಠ, ರಾಜಶೇಖರಗೌಡ ಪಾಟೀಲ, ಎಂ.ಕೆ. ಬೇವಿನಕಟ್ಟಿ, ಶ್ರೀ ಹುಚ್ಚೀರಪ್ಪ ಈಟಿ, ಬಿ.ವಿ. ದೇಸಾಯಿಪಟ್ಟಿ, ಬಿ.ಟಿ. ತಾಳಿ, ಸುರೇಶ ಹಳ್ಳಿಕೇರಿ, ಡಾ. ಎಲ್.ಎಸ್. ಗೌರಿ, ಗುರುಪಾದಪ್ಪ ಬೆಲ್ಲದ, ಆರ್.ಎಸ್. ಮಠದ, ಜೆ.ಎ. ಪಾಟೀಲ, ಈಶ್ವರ ಬೆಟಗೇರಿ, ಶರಣಪ್ಪ ಅರಮನಿ, ಮಲ್ಲಯ್ಯ ಗುಂಡಗೋಪುರಮಠ, ಸಂಗಮೇಶ ಮೆಣಸಗಿ ಹಾಗೂ ಉಮೇಶ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಾಚಾರ್ಯ ಶಿವಾನಂದ ಗೋಗೇರಿ ಸ್ವಾಗತಿಸಿದರು. ಎಂ.ಎಸ್. ಧಡೇಸೂರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಪಿ. ವೀರಸಣ್ಣವರ ನಿರೂಪಿಸಿ ವಂದಿಸಿದರು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ