ಡಾ,ಸಿದ್ಧತೋಟೇಂದ್ರ ಪೂಜ್ಯರಿಗೆ ಚುಟುಕು ಭೂಷಣ ಪ್ರಶಸ್ತಿ

ಡಾ,ಸಿದ್ಧತೋಟೇಂದ್ರ ಪೂಜ್ಯರಿಗೆ ಚುಟುಕು ಭೂಷಣ ಪ್ರಶಸ್ತಿ

ಡಾ,ಸಿದ್ಧತೋಟೇಂದ್ರ ಪೂಜ್ಯರಿಗೆ ಚುಟುಕು ಭೂಷಣ ಪ್ರಶಸ್ತಿ

ಹುಬ್ಬಳ್ಳಿ- ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಧಾರ್ಮಿಕ ಕ್ಷೇತ್ರದ ಗಣ್ಯರಿಗೆ ನೀಡುವ " ಚುಟುಕು ಭೂಷಣ " ಪ್ರಶಸ್ತಿಗೆ ಭಾಜನರಾದ ಶ್ರೀ ಕ್ಷೇತ್ರ ನಾಲವಾರ ಸದ್ಗುರು ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ರವಿವಾರ ಸಾಯಂಕಾಲ ಶ್ರೀಮಠದ ಸಭಾಭವನದಲ್ಲಿ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಜ್ಯರು ಶ್ರೀ ಮಠ ಹಾಗೂ ಕಚುಸಾಪ ಭಾಂದವ್ಯ ಪವಿತ್ರವಾದದು ಅದೇ ಗೌರವ ನಿಷ್ಟೆಯನ್ನು ಕಚುಸಾಪ‌ ಉಳಿಸಿ ಬೆಳಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಗಳು ಚುಟುಕು ಸಾಹಿತ್ಯದ ಮೂಲ ಶರಣರ ವಚನಗಳು, ಜನಪದ ಹಾಡುಗಳು ಎಂದು ಅನೇಕ ಕೃತಿಗಳನ್ನು ಉದಹರಿಸಿದರು.

ಇದೇ ಸಂದರ್ಭದಲ್ಲಿ ....

ಕುಟುಂಬದ ವರ್ಗ ದವರು ತಮ್ಮ ಮಗುವಿನ ನಾಮಕರಣೋತ್ಸವ ಜರುಗಿತು.

ಶಾಖಾ ಮಠದ ಶ್ರೀ. ಶಾಂತರುದ್ರುಮುನಿ ಮಹಾಸ್ವಾಮಿಗಳು ಕರಡಕಲ್ಲ ಯಾದಗಿರಿ ಜಿಲ್ಲೆ. ಉಪಸ್ಥಿತರಿದ್ದು ಶ್ರೀ ಮಠದಿಂದ ಗೌರವ ಸ್ವೀಕರಿಸಿದರು.

ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ ಕಳೆದ ಎರಡು ದಶಕದಿಂದ ಶ್ರೀ ಗಳೊಂದಿಗೆ ಸಂಪರ್ಕವನ್ನು ಹೊಂದಿದ್ದು ಮಂತ್ರಾಲಯ ಶ್ರೀ ಗಳೊಂದಿಗೆ ಬೇರೆ ಬೇರೆ ಶ್ರೀ ಗಳ ಸಂಪರ್ಕ ಕಲ್ಪಿಸುವಲ್ಲಿ ಕಚುಸಾಪ ಮಹತ್ಕಾರ್ಯ ವಹಿಸಿದೆ ಎಂದು ಹೇಳಿದರು. ಕಚುಸಾಪ 

ಕಲ್ಯಾಣ ಕರ್ನಾಟಕ ಅಧ್ಯಕ್ಷ ಡಾ.ಸಿದ್ದಕುಮಾರ ಘಂಟಿ, ರಾಯಚೂರು ಜಿಲ್ಲಾಧ್ಯಕ್ಷ ಯಂಕೋಬ ನಾಯಕ, ಮಹಿಳಾ ಘಟಕದ ವಂದನಾ ರಮೇಶ, ಹಾವೇರಿ ಘಟಕದ ಶೇಖರಗೌಡ ಪಾಟೀಲ ಮಾತನಾಡಿದರು. 

ಡಾ.ಸಿದ್ದಕುಮಾರ ಘಂಟಿ ಸ್ವಾಗತಿಸಿದರು. ಶ್ರೀ ಸಂಗರೆಡ್ಡಿ ಗೌಡ ಮಲಾರ. ಯಾದಗಿರಿ ಶ್ರೀ ಶಿವಲಿಂಗ ಭೀಮನಹಳ್ಳಿ ಬೆಂಗಳೂರು. ಮಹಾದೇವ ಗoವಾರ. ಉಪಸ್ಥಿತರಿದ್ದರು ಸಿದ್ದು ಅವರಾದಿ ಪ್ರಾರ್ಥಿಸಿದರು ಶಿಕ್ಷಕ ದೇವರಾಜ್ ಕೊಡೆಕಲ್ ನಿರೂಪಿಸಿದರು