ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಉಳಿಸಿ ಪ್ರೊ. ಶಿವರಾಜ ಪಾಟೀಲ ಕರೆ

ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಉಳಿಸಿ ಪ್ರೊ. ಶಿವರಾಜ ಪಾಟೀಲ  ಕರೆ

ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಉಳಿಸಿ ಪ್ರೊ. ಶಿವರಾಜ ಪಾಟೀಲ ಕರೆ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದೆ ಚುನಾವಣಾಧಿಕಾರಿಯನ್ನು ಸರ್ಕಾರ ಇಷ್ಟರಲ್ಲಿಯೇ ನೇಮಿಸಲಿದೆ ನವಂಬರ್ 23 2026ರಂದು ನಡೆಯುವ ಸಾಧ್ಯತೆಗಳಿವೆ. ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಮತ್ತು ಯಾರನ್ನು ಆಯ್ಕೆ ಮಾಡಬೇಕೆಂಬ ಸಮಸ್ಯೆ, ಮತದಾರರ ಮುಂದಿದೆ. ಕಳೆದ 12 ವರ್ಷಗಳ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವ ಏನಾಗಿದೆ ಎಂಬುದು ತಮಗೆ ತಿಳಿದಿದೆ. ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಮಾಡಿದ ತಪ್ಪಿಗೆ ಪರಿಷತ್ತಿನ ಸ್ಥಿತಿಗತಿ ಏನಾಗಿದೆ ಎಂಬುದು ತಾವು ಗಮನಿಸಿದ್ದೀರಿ. ಮೂರು ವರ್ಷದ ಅವಧಿ ಇದ್ದ ಪರಿಷತ್ತು ಐದು ವರ್ಷದ ಅವಧಿಗೆ ವಿಸ್ತರಿಸಿದ್ದು ಅಧಿಕಾರದ ದಾಹಾವಲ್ಲದೆ ಮತ್ತೇನು ಇವರ ನಂತರ ಬಂದ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯಿಂದ ತಮ್ಮ ತಲೆಯ ಮೇಲೆ ತಾವೇ ಕೈ ಇಟ್ಟುಕೊಂಡು ತಮ್ಮ ಅವನತಿಗೆ ತಾವೇ ಕಾರಣರಾಗಿ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಗಾದರು ಇದು ಪರಿಷತ್ತಿನ ಇತಿಹಾಸ ದಲ್ಲಿಯೇ ಒಂದು ಬಹುದೊಡ್ಡ ಕಳಂಕ ಎಂದು ಹೇಳಬಹುದು ಇಂಥದಕ್ಕೆ ನಾವು ಅವಕಾಶ ಕೊಡಬಾರದು ಮತ್ತೊಮ್ಮೆ ಆ ತಪ್ಪು ಮಾಡಬಾರದು ಸಾಹಿತ್ಯ ಪರಿಷತ್ತಿಗೆ ಸಾಹಿತಿಗಳಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಪರಿಷತ್ತಿಗೆ ಅವಮಾನ ನಾಲ್ವಡಿ ಕೃಷ್ಣರಾಜ ಒಡೆಯರು ಯಾವ ಘನವಾದ ಉದ್ದೇಶವನ್ನು ಹಾಗೂ ಆಶಯಗಳನ್ನು ಇರಿಸಿಕೊಂಡು ಪರಿಷತ್ತನ್ನು ಕಟ್ಟಿದರೊ ಅವೆಲ್ಲ ಇಂದು ನುಚ್ಚುನೂರಾಗಿವೆ ಪರಿಷತ್ತು ಮತ್ತೆ ಪವಿತ್ರಗೊಳ್ಳಬೇಕಾದರೆ ಅಧಿಕಾರದ ಭಾಷೆಯಲ್ಲಿ ಮಾತನಾಡುವ ಅಧಿಕಾರಿಗಳನ್ನು ಪರಿಷತ್ತಿನ ಹತ್ತಿರ ಕೂಡ ಸೇರಿಸಬಾರದು ಸಾಧಕ ಮತ್ತು ಶರಣ ಸಂಸ್ಕೃತಿಯನ್ನು ಅಳವಡಿಸಿಕೊಂಡ ಬಾಗಿದ ಶಿರ ಮುಗಿದ ಕರವನ್ನಾಗಿರಿಸಿಕೊಂಡ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾದದ್ದು ಅನಿವಾರ್ಯವಾಗಿದೆ ಅಧಿಕಾರಿಗಳ ಭಾಷೆಯಲ್ಲಿ ಮಾತನಾಡುವವರು ಅಧ್ಯಕ್ಷ ಸ್ಥಾನದ ಪದವಿಯ ಘನತೆ ಗೌರವವನ್ನು ಹಾಳು ಮಾಡಿದ್ದಾರೆ ಅವರ ವರ್ತನೆಗಳನ್ನು ನಾವು ಗಮನಿಸಿದ್ದೇವೆ ಈಗ ಕನ್ನಡ ಕಟ್ಟುವ ನಾಡು ನುಡಿ ಸಂರಕ್ಷಿಸುವ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗಿರುವದು ತುರ್ತಾಗಿದೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡದ ರಾಯಭಾರಿಯಾಗಿರು ವವನು ಮಂತ್ರಿಗಳ ಮುಖ್ಯಮಂತ್ರಿಗಳ ಎದುರಿಗೆ ಕೈಮುಗಿದು ನಿಲ್ಲುವ ಮತ್ತು ಮತದಾರರ ಮೇಲೆ ಅಧಿಕಾರ ಚಲಾಯಿಸುವ ಪರಿಷತ್ತನ್ನು ತಮ್ಮ ಮನಸೋ ಇಚ್ಛೆ ಅಧಿಕಾರವನ್ನು ನಡೆಸುವ ಅಧಿಕಾರಿಗಳನ್ನು ಅಧ್ಯಕ್ಶರನ್ನಾಗಿ ಮಾಡಬಾರದು ಹಾಗೆ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವ ಎಳ್ಳು ಕಾಳಿನಷ್ಟು ಉಳಿಯುವುದಿಲ್ಲವೆಂಬುದು ಈಗ ನಮಗೆ ತಿಳಿದಿದೆ ಈ ಬಾರಿ ಚುನಾವಣೆಯಲ್ಲಿ ಸಾಹಿತಿಗಳಲ್ಲದವರನ್ನು ಪರಿಷತ್ತಿನ ಅಧ್ಯಕ್ಷರನ್ನಾಗಿ ಮಾಡಬಾರದು ಅಧಿಕಾರಿ ಸ್ಥಾನದಲ್ಲಿ ಇದ್ದವರನ್ನು ಸಮೀಪಕ್ಕೂ ಬರಗೂಡಿಸಬಾರದು ಅಂದಾಗ ಪರಿಷತ್ತು ಪವಿತ್ರವಾಗಿ ಪರಿಶುದ್ಧವಾಗಿ ಉಳಿಯಲು ಸಾಧ್ಯವಾಗುತ್ತದೆ ಕಳೆದ ಬಾರಿ ಚುನಾವಣೆಯಲ್ಲಿ ನಾಡೋಜ ಮಹೇಶ್ ಜೋಶಿಯವರನ್ನು ಒಳವಳಗೆ ಬೆಂಬಲಿಸಿದ ಬಿಜೆಪಿ ಈಗ ಅಪರಾಧಿ ಸ್ಥಾನದಲ್ಲಿದೆ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಬಹುಶಃ ಅದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಲೆ ಹಾಕುವುದಿಲ್ಲವೆಂಬ ಭರವಸೆ ನಮಗಿದೆ ಒಂದು ವೇಳೆ ಜಾತಿಯನ್ನು ಮುಂದಿರಿಸಿಕೊಂಡು ಪ್ರವೇಶ ಮಾಡಿದರೆ ತಲೆದಂಡ ವಿಧಿಸಬೇಕಾಗುತ್ತದೆ ಸಾಹಿತಿ ಗಳ ವಿಚಾರದಲ್ಲಿ ರಾಜಕಾರಣಿಗಳು ತಲೆ ಹಾಕಬಾರದೆಂದು ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ಮೈಸೂರು ಮಹಾರಾಜರೇ ಅದರಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಅಂದಾಗ ಈಗಿನ ರಾಜಕಾರಣಿಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲವೆಂದು ವಿನಮ್ರವಾಗಿ ತಿಳಿಸಪಡಿಸುತ್ತೇನೆ