ಮೇ 7ರಂದು ಸಚಿವ ಸಂಪುಟದ 12ನೇ ಸಭೆ: ವಿಧಾನಸೌಧದಲ್ಲಿ ಸಂಜೆ 4ಕ್ಕೆ ಮಹತ್ವದ ಕೂಟ
ಮೇ 7ರಂದು ಸಚಿವ ಸಂಪುಟದ 12ನೇ ಸಭೆ: ವಿಧಾನಸೌಧದಲ್ಲಿ ಸಂಜೆ 4ಕ್ಕೆ ಮಹತ್ವದ ಕೂಟ
ಬೆಂಗಳೂರು: ರಾಜ್ಯ ಸಚಿವ ಸಂಪುಟದ 2026ನೇ ಸಾಲಿನ 12ನೇ ಸಭೆಯನ್ನು ಮೇ 7ರಂದು ಗುರುವಾರ ಸಂಜೆ 4:00 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ.
ಸರ್ಕಾರದ ಅಪರ ಕಾರ್ಯದರ್ಶಿ ಆರ್. ಚಂದ್ರಶೇಖರ್ ಅವರು ಈ ಕುರಿತು ಸೂಚನಾ ಪತ್ರ ಹೊರಡಿಸಿದ್ದು, ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಆಡಳಿತಾತ್ಮಕ ಹಾಗೂ ಮಹತ್ವದ ನೀತಿ ನಿರ್ಧಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದ್ದು, ವಿವಿಧ ಇಲಾಖೆಗಳ ಪ್ರಸ್ತಾವನೆಗಳ ಮೇಲೂ ಸಚಿವ ಸಂಪುಟ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
