80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ

80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ

80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ

ತೆಲ್ಕರ ನಗರದ ನಂದಿಕೂರಿನಲ್ಲಿ ಭಾರತ ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ವೆಂಕಟಗಿರಿ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಶ್ರೀ ವೆಂಕಟಗಿರಿ ಗ್ರಾಮೀಣ ಅಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಪವನಕುಮಾರ ಬಿ. ವಳಕೇರಿ ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ರವೀಂದ್ರ ಪಾಟೀಲ, ಮಲ್ಲಣ್ಣಗೌಡ ಪಾಟೀಲ ನಂದಿಕೂರ, ಭೋಜರಾಜ ಮಠ, ಸಹಕಾರಿ ನಿಯಮಿತದ ಉಪಾಧ್ಯಕ್ಷ ಬಸವಲಿಂಗ ಪಾಟೀಲ, ಶಾಖಿಲ ಉತ್ತನಾಳ, ಹೂವಣ್ಣಗೌಡ, ಅನಿತಾ ವಳಕೇರಿ, ರೋಷನ ಬಿ. ಉತ್ತನಾಳ, ಜಗದೇವಿ ಆರ್., ಅಂಬಿಕಾ ಎಸ್., ಆಶಾ ಮುಚ್ಚಖೆಡ ಹಾಗೂ ವಿಠ್ಠಬಾಯಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮದ ಸಂದೇಶ ಸಾರುವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.