ಹೈ ಕ ಶಿಕ್ಷಣ ಸಂಸ್ಥೆಯು ಸಂಸ್ಥೆಯ ಸದಸ್ಯರು, ಹಾಗೂ ಸಿಬ್ಬಂದಿಗಳ ಸಮರ್ಪಣಾ ಸೇವಾ ಮನೋಭಾವದಿಂದ ಸದೃಢಗೊಳ್ಳುತ್ತಿದೆ ಶಶೀಲ್ ಜಿ ನಮೋಶಿ

ಹೈ ಕ ಶಿಕ್ಷಣ ಸಂಸ್ಥೆಯು ಸಂಸ್ಥೆಯ ಸದಸ್ಯರು, ಹಾಗೂ ಸಿಬ್ಬಂದಿಗಳ ಸಮರ್ಪಣಾ ಸೇವಾ ಮನೋಭಾವದಿಂದ ಸದೃಢಗೊಳ್ಳುತ್ತಿದೆ ಶಶೀಲ್ ಜಿ ನಮೋಶಿ

ಹೈ ಕ ಶಿಕ್ಷಣ ಸಂಸ್ಥೆಯು ಸಂಸ್ಥೆಯ ಸದಸ್ಯರು, ಹಾಗೂ ಸಿಬ್ಬಂದಿಗಳ ಸಮರ್ಪಣಾ ಸೇವಾ ಮನೋಭಾವದಿಂದ ಸದೃಢಗೊಳ್ಳುತ್ತಿದೆ ಶಶೀಲ್ ಜಿ ನಮೋಶಿ 

ಕಲಬುರ್ಗಿ:ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಂಬ ಎಲ್ಲಾ ಸದಸ್ಯರ ಸಮರ್ಪಣಾ ಭಾವ, ಕರ್ತವ್ಯನಿಷ್ಠೆ ಮತ್ತು ಪರಸ್ಪರ ಸಹಕಾರ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬ ಸದಸ್ಯರ ಸಕ್ರಿಯ ಭಾಗಿತ್ವದಿಂದ ಸಂಸ್ಥೆಯು ಶೈಕ್ಷಣಿಕವಾಗಿ ಮತ್ತು ನೈತಿಕವಾಗಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು

ಅವರು ಬಸವೇಶ್ವರ ಬೋಧನಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕೇಂದ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜರುಗಿದ 80 ನೇ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಒಂದು ಸಂಸ್ಥೆಯ ಅಭಿವೃದ್ದಿಯಲ್ಲಿ ಸಂಸ್ಥೆಯ ಸದಸ್ಯರ ಸಹಕಾರ ಸಿಬ್ಬಂದಿಗಳ ಸೇವಾ ಮನೋಭಾವ ಮುಖ್ಯ ಪಾತ್ರ ವಹಿಸುತ್ತದೆ. ಇವರಿಬ್ಬರ ಸಹಕಾರ ನನ್ನ ನೇತ್ರತ್ಶದ ಆಡಳಿತ ಮಂಡಳಿಗೆ ಸಂಪೂರ್ಣ ದೊರೆತಿರುವುದರಿಂದ ಅಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಹೇಳಿದರು

ಕಳೆದ ಎರಡು ವರ್ಷಗಳಲ್ಲಿ ಬಸವೇಶ್ವರ ಆಸ್ಪತ್ರೆಯು ನಮ್ಮ ಸಂಸ್ಥೆಯ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಹೆಮ್ಮೆಯಿಂದ ತಮ್ಮದೇ ಆಸ್ಪತ್ರೆ ಎಂದು ಕರೆಯುವಂತಾಗಬೇಕು ಎಂಬುದು ನನ್ನ ಸ್ಪಷ್ಟ ದೃಷ್ಟಿಕೋನವಾಗಿತ್ತು. ಸದಸ್ಯರ ಬಂಬಲದಿಂದ ಅದೆ ದೃಷ್ಟಿಕೋನದೊಂದಿಗೆ ಬಸವೇಶ್ವರ ಮೂಲಸೌಕರ್ಯ, ಆಧುನಿಕ ವೈದ್ಯಕೀಯ ಉಪಕರಣಗಳು, ಸುಧಾರಿತ ಪ್ರಯೋಗಾಲಯ ಸೌಲಭ್ಯಗಳು, ಔಷಧಾಲಯ ಸೇವೆಗಳು ಹಾಗೂ ಅನುಭವಿ ವೈದ್ಯರು ಮತ್ತು ಸೂಪರ್-ಸ್ಪೆಷಲಿಸ್ಟ್‌ಗಳಂತಹ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದೇವೆ.ಇನ್ನಷ್ಟು ಉತ್ತಮ, ಬಲಿಷ್ಠ ಮತ್ತು ಹೆಚ್ಚು ವಿಶ್ವಾಸಾರ್ಹ ಆಸ್ಪತ್ರೆಯನ್ನಾಗಿ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.ಎಂದು ಹೇಳಿದರು. ಇದಕ್ಕೆ ನಮ್ಮ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಸಂಸ್ಥೆಯಲ್ಲಿ ಶಿಕ್ಷಕರು ಸಮರ್ಪಿತ ಸೇವಾ ಮನೋಭಾವದಿಂದ ಕಾರ್ಯ ಮಾಡುತ್ತಿದ್ದು ಈಗಾಗಲೇ ಇದನ್ನು ಸಾಬೀತು ಪಡಿಸಿದ್ದಾರೆ ಹೀಗಾಗಿಯೆ ಈ ಬಾರಿ ನಮ್ಮ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ ಎಂದು ಹೇಳಿದರು ಶಿಕ್ಷಕರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸದಸ್ಯರು ಹಾಗೂ ಶಿಕ್ಷಕರ ಸಿಬ್ಬಂದಿಗಳ ಸಹಕಾರದಿಂದ ಇನ್ನು ಮುಂದೆ ನಮ್ಮ ಶಿಕ್ಷಣ ಸಂಸ್ಥೆಯು ಗುಣಮಟ್ಟದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯಬೇಕಾಗಿದೆ ಎಂದು ಹೇಳಿದರು.

ಇಂದು ನಮ್ಮ ಜೀವನಶೈಲಿ ಬದಲಾಗಿದೆ. ಆಹಾರ ಪದ್ಧತಿಗಳು ಬದಲಾಗಿವೆ. ಒತ್ತಡ ಹೆಚ್ಚಾಗಿದೆ. ದುರದೃಷ್ಟವಶಾತ್, ಅನೇಕ ಆರೋಗ್ಯ ಸಮಸ್ಯೆಗಳು 35 ಅಥವಾ 40 ವರ್ಷ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದು, ಅವು ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿವೆ.

ಆದರೆ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆಹಚ್ಚಿದರೆ, ಅದನ್ನು ಆರಂಭದಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬ ಎಚ್ ಕೆ ಇ ಸದಸ್ಯರಿಗೆ ನನ್ನದೊಂದು ವಿಶೇಷ ಮನವಿ ನಿಮಗೆ ಅನಾರೋಗ್ಯವಾಗುವವರೆಗೆ ಕಾಯಬೇಡಿ. ಬಸವೇಶ್ವರ ಆಸ್ಪತ್ರೆಗೆ ಬನ್ನಿ. ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಿ.

ಎಚ್ ಕೆ ಇ ಸದಸ್ಯರಿಗೆ ವಿಶೇಷ ಸೌಲಭ್ಯವಾಗಿ, ಬಸವೇಶ್ವರ ಆಸ್ಪತ್ರೆಯ ವತಿಯಿಂದ ₹10,000 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಪರೀಕ್ಷೆಗಳನ್ನು ಒಳಗೊಂಡ ಸಮಗ್ರ ಎಕ್ಸಿಕ್ಯೂಟಿವ್ ಆರೋಗ್ಯ ತಪಾಸಣೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.

ದಯವಿಟ್ಟು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

‌ಸ್ವಾತಂತ್ರೋತ್ಸವದ ಈ ಪವಿತ್ರ ದಿನದಂದೆ 

ವಿಶೇಷ ಆರೋಗ್ಯ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. 

ಸ್ವತ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ 16 ಸದಸ್ಯರು , ಸಹೋದ್ಯೋಗಿಗಳು ಆರೋಗ್ಯ ತಪಾಸಣೆ ಮಾಡಿಕೊಂಡು

ಈ ಕಾರ್ಯಕ್ರಮ ಅಧಿಕೃತವಾಗಿ ಉದ್ಘಾಟಿಸಿದರು. ಈ ಸೌಲಭ್ಯವನ್ನು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೂ ವಿಸ್ತರಿಸಲಾಗುವದು ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ, ಸಂಚಾಲಕರಾದ ಡಾ ಕಿರಣ ದೇಶಮುಖ್, ಡಾ ಶರಣಬಸಪ್ಪ ಹರವಾಳ, ಎಲ್ಲ ಆಡಳಿತ ಮಂಡಳಿಯ ಸದಸ್ಯರು, ಡೀನ್ ಡಾ ಶರಣಗೌಡ ಪಾಟೀಲ,ವೈಸ್ ಡೀನ್ ಡಾ ವಿಜಯಕುಮಾರ್ ಕಪ್ಪೀಕೇರಿ, ವೈದ್ಯಾಧಿಕಾರಿಗಳಾದ ಡಾ ಮಲ್ಲಿಕಾರ್ಜುನ್ ತೇಗನೂರ, ಡಾ ಮಲ್ಲಿಕಾರ್ಜುನ್ ಬಂಡಾರ್, ಎಂ ಆರ್ ಪೂಜಾರಿ ಆಡಳಿತಾಧಿಕಾರಿಗಳಾದ ಡಾ ಎಸ್ ಎಲ್ ಹಿರೇಮಠ , ಡಾ ಜಯಶ್ರೀ ಮುದ್ದಾ ಉಪಸ್ಥಿತರಿದ್ದರು. ಶಶೀಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು