ದಾಸ ಸಾಹಿತ್ಯ ಲೇಖಕ : ಡಾ. ಸುರೇಶ ಜಾಧವ
ದಾಸ ಸಾಹಿತ್ಯ ಲೇಖಕ : ಡಾ. ಸುರೇಶ ಜಾಧವ
(ಇಂದು ೦೯-೦೭-೨೦೨೬ ರಂದು ಜರುಗುವ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪರಿಚಯ )
ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ,
ಸಾಹಿತಿಗಳು, ಕಲಬುರಗಿ
ಕಲಬುರಗಿ ಜಿಲ್ಲೆಯ ಅನೇಕ ಜನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಇದ್ದಾರೆ. ಅವರಲ್ಲೂ ವಿರಳರಲ್ಲಿ ವಿರಳರಾಗಿ ಸೌಜನ್ಯ, ಪ್ರೀತಿ, ಭಯ, ಭಕ್ತಿಯಿಂದ ಇರುವ ಅಪರೂಪದ ಪ್ರಾಧ್ಯಾಪಕರಲ್ಲಿ ಡಾ.ಸುರೇಶ ಜಾಧವ ಒಬ್ಬರೆಂದು ನನಗೆ ಅನಿಸುತ್ತದೆ. ಅವರನ್ನು ಕಳೆದ ಎರಡು ದಶಕಗಳಿಂದಲೂ ನೋಡುತ್ತಿದ್ದೇನೆ. ಸರಳತೆಗೆ ಮತ್ತೊಂದು ಹೆಸರು ಜಾಧವ. ಅವರ ಮುಖದ ನಗು ಯಾವಾಗಲೂ ಹಸನ್ಮುಖಿ. ಕನ್ನಡಕ, ಸಫಾರಿ ಡ್ರೇಸ್, ಯಾವುದೋ ಚಿಂತನೆಯಲ್ಲಿ ಇರುವಂತೆ ಕಾಣುವ ಅಪರೂಪದ ವ್ಯಕ್ತಿ. ಯಾವುದೇ ವಿಶ್ವವಿದ್ಯಾಲಯದ, ಕನ್ನಡ ಅಧ್ಯಯನ ಸಂಸ್ಥೆಗೆ ಸಭೆ, ಸಮಾರಂಭಕ್ಕೆ ಬಂದರೆ ತಮಗೆ ವಹಿಸಿದ ಕಾರ್ಯವನ್ನು ಮುಗಿಸಿ, ಅದು ಬರುವವರೆಗೆ ಕಾಯ್ದು, ತಮಗೆ ಬಂದ ಪಾಲೇ ಪಂಚಾಮೃತವೆಂದು ಭಾವಿಸಿ ಹೋಗುವ ಜಾಯಮಾನ! ನನಗೆ ಅದು ಬೇಕು, ಇದು ಬೇಡ ನಾನೇಕೆ ಮಾಡಲಿ, ನೀವು ಮಾಡಿ ಅನ್ನದೇ ತಮ್ಮಷ್ಟಕ್ಕೆ ತಾವು ಹೋಗುವ ನಿಷ್ಟ್ರಹ ಜೀವಿ.
ಕಲಬುರಗಿ ಜಿಲ್ಲೆಯ ಶ್ರೀನಿವಾಸ ಸರಡಗಿಯ ಲಕ್ಷ್ಮಣರಾವ್ ಮತ್ತು ಕಮಲಾಬಾಯಿಯವರ ಮಗನಾಗಿ ೧೦-೧೨-೧೯೬೩ರಲ್ಲಿ ಜನಿಸಿದರು. ತಂದೆ ಇವರು ಬಾಲ್ಯದಿಂದಲೇ ದೂರಾದರು. ತಾಯಿ ಕಷ್ಟಪಟ್ಟು ಬೆಳೆಸಿದ್ದಾರೆ. ಅಣ್ಣ-ಅತ್ತಿಗೆಯರು ಸೇರಿದ ಕೂಡು ಕುಟುಂಬದ ನಿರ್ವಹಣೆ. ಮಧ್ಯಮ ವರ್ಗದಲ್ಲಿ ಬೆಳೆದವರು.
ಶಿಕ್ಷಣ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಪೂರ ಕಲಬುರಗಿಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಾಲೆ ಎಂ.ಪಿ.ಎಚ್.ಎಸ್ದ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ. ಟೇಲರಿಂಗ್ ಕೆಲಸ ಮಾಡಿ ಸೋದರ ಮಾವರ ಆಶ್ರಯದಲ್ಲಿ ಬೆಳೆದರೂ ಕನಿಷ್ಠ ಸೌಲಭ್ಯ ದೊರಕದಾದಾಗ ಪ್ರತಿಭಟಿ ಹೊರಬಂದು ಸ್ವತಃ ದುಡಿಮೆಯೊಂದಿಗೆ ಓದನ್ನು ಏಕಲವ್ಯನಂತೆ ಮುಂದುವರಿಸಿದರು. ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪಿಯುಸಿ, ನೂತನ ಪದವಿ ಮಹಾವಿದ್ಯಾಲಯ ಕಲಬುರಗಿಯಲ್ಲಿ ಬಿ.ಎ. ಪದವಿಯನ್ನು ೧೯೮೬ರಲ್ಲಿ ಪಡೆದರು. ಇದರ ತರುವಾಯ ಅವರಿಗೆ ಅಡ್ಡಿ ಆತಂಕ ಪ್ರಾರಂಭವಾದವು ಇದರಿಂದ ಸೇಡಂದ ವಾಸವದತ್ತ ಸಿಮೆಂಟ್ ಕಾರ್ಖಾನೆಯಲ್ಲಿ ಸ್ಪೇನೋಗ್ರಾಫರ್ ಆಗಿ ದುಡಿದರು. ಆರು ಸಾವಿರ ರೂಪಾಯಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಯಸೇನನ ಧರ್ಮಾಮೃತ ಭಾಷಿಕ ಅಧ್ಯಯನ (೧೯೯೦) ಎಂಫಿಲ್, ಕೀರ್ತನ ಸಾಹಿತ್ಯ ಸಂಸ್ಕೃತಿ ಪಿಎಚ್.ಡಿ ಅಧ್ಯಯನ (೨೦೦೬) ಮಾಡಿ ಡಾಕ್ಟರೇಟ್ ಪದವಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಡೆದವರು.
ವೃತ್ತಿ : ಅವರು ಕಾಯಕ ಪ್ರೇಮಿ. ತಾನು ಕಲಿತ ವಿದ್ಯೆಗೆ ತಕ್ಕಂತೆ ಕಲಬುರಗಿ ಸರಕಾರಿ ಮಹಾವಿದ್ಯಾಲಯ ದಲ್ಲಿ ೧೯೮೯ರಿಂದ ೧೯೯೬ರವರೆಗೆ ಏಳು ವರ್ಷ ಅತಿಥಿ ಉಪನ್ಯಾಸಕರಾಗಿ, ೧೯೮೯ ರಿಂದ ೧೯೯೬ ರವರೆಗೆ ಆರು ವರ್ಷ ಎನ್.ವಿ. ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ಆಯ್ಕೆಗೊಂಡು ೧೯೯೬ರಲ್ಲಿ ಕನ್ನಡ ಉಪನ್ಯಾಸಕರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ತಾಪೂರದಲ್ಲಿ ಸೇವೆ ಆರಂಭಿಸಿದರು. ಹಿರಿಯ ವೇತನ ಶ್ರೇಣಿ, ಆಯ್ಕೆ ವೇತನ ಶ್ರೇಣಿ ಉಪನ್ಯಾಸಕರಾಗಿ ಪದನ್ನೋತಿ ಹೊಂದಿದರು. ಫರಹತಾಬಾದನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ, ೨೦೧೧ರಿಂದ ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜು ಕಲಬುರಗಿಯಲ್ಲಿ ಪ್ರಾಧ್ಯಾಪಕರರಾಗಿ, ಸ್ನಾತಕೋತ್ತರ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ೩೧-೧೨-೨೦೨೩ರಂದು ನಿವೃತ್ತರಾದರು.
ದಾಂಪತ್ಯ ಜೀವನ : ಡಾ. ಸುರೇಶ ಜಾಧವರ ಅವರು ತಮ್ಮ ಬದುಕಿನಲ್ಲಿ ತಾಯಿ, ಅಕ್ಕ, ಮಾವ, ಸಹಾಯ ಪಡೆದು, ಮುಂದೆ ಜೀವನ ನಿರ್ವಹಣೆಗೆ ಗಂಡಿಗೆ ಹೆಣ್ಣು: ಹೆಣ್ಣಿಗೆ ಗಂಡು ಬೇಕು ಸಂಸಾರ ಸಾಗಲು ಡೋಣಿ ಬೇಕೆಂದು ಸುರೇಖಾ ಅವರನ್ನು ಅಯ್ಕೆ ಮಾಡಿಕೊಂಡವರು. ಎಂ.ಎ, ಬಿಇಡಿ ಪದವೀಧರೆ. ಕಲಬುರಗಿ ವಿಜಯನಗರ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾ ಗಿರುವರು. ಮಗಳು ಸೌಮ್ಯಶ್ರೀ ಬಿ.ಇ. ಎಂಟೆಕ್ ಆಗಿ ಬೆಂಗಳೂರಿನಲ್ಲಿ ನಂದಕಿಶೋರ ಜೊತೆ ವಾಸವಾಗಿದ್ದಾರೆ. ಬೆಂಗಳೂರಿನಲ್ಲಿ ಮಗ ಸತ್ಯಜೀತ ಬಿ.ಇ. ಸಾಪ್ಟವೇರ್ ಇಂಜನೀಯರಾಗಿದ್ದಾರೆ. ಕಿರಿಯ ಮಗ ಗಣೇಶ ಎಂ.ಎಸ್ಸಿ, ಬಿ.ಇಡಿ. ಪದವಿ ಹೊಂದಿ ಖಾಸಗಿ ಪ್ರೌಢ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವರು. ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿದವರು. ಚಿಕ್ಕ ಚೊಕ್ಕ ಕುಟುಂಬ ಆದರ್ಶತೆಯಿಂದ ಬಾಳುತ್ತಿದ್ದಾರೆ.
ಸದಾ ತಮ್ಮದೇ ಆದ ಓದು, ಅಧ್ಯಯನ, ಅಧ್ಯಾಪನ, ಸಂಶೋಧನೆ, ಬರಹ, ಕುಟುಂಬ, ಕಾಲೇಜು ಅವರ ಸುತ್ತಲಿರುವ ಪ್ರಪಂಚ ! ಮರಾಠ ಕಲಿತವರು. ಯಾವ ರಾಗ ದ್ವೇಷ ಅಸೂಯೆ, ಹೊಂದದೇ ತಮ್ಮ ಗುರು ಜನಾಂಗದಿಂದ ಬಂದು ಅಕ್ಷರದಿಂದ ವಂಚಿತ ಸಮುದಾಯದಲ್ಲಿ ಮೊದಲು ಮಾವು ನಾವರಣಗೊ ಬದ್ಧವಾಗಿ ಹಕ್ಕು ಕರ್ತವ್ಯ ಪಾಲಿಸಿಕೊಂಡು ಬರುವವರು. ಅವರು ಮನೆ ಗೆದ್ದು ಮಾ ಜೋಡಣೆ, ವಸ್ತು, ಶಿವಾಜಿಯ ದಿವ್ಯ ಕೃಪೆಯಲ್ಲಿ ಬೆಳೆದು ಅಕ್ಷರ ಜ್ಞಾನ ಪಡೆದು, ಸಂವಿಧಾನ ಜಾ ಕಾಲೇಜಿನ ವಿದ್ಯಾಥಿ ಮಾರು ಗೆದ್ದವರು. ಬುದ್ಧ, ಬಸವ, ಶಿವಾಜಿ, ಅಂಬೇಡ್ಕರ್ ತತ್ತ್ವ, ಸಾಧು ಸಂತರ ದು ಲೇಖಕರ ಪ ಹಾಗೂ ದಾಸರ ಮಾರ್ಗದಲ್ಲಿ ನಡೆದುಕೊಂಡು ಬಂದವರು. ಅವರ ಸೇವೆ ಪರಿಪೂರ್ಣವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದವರು. ಅವರು ಕತ್ತಲೆಗೆ ಬೆಳಕಾಗಿನಿಂತ ಗುರು. ಗುರು-ಶಿಷ್ಯ ಪರಂಪರೆ ಬೆಳೆಸಿದವರು. ಸದಾ ಮಕ್ಕಳ, ವಿದ್ಯಾರ್ಥಿಗಳ ಹಿತಬಯಸಿ ಸಾರ್ಥಕ ಎರಡುವರೆ ದಶಕದ ಅಪಾರ ಬೋಧನಾನುಭವ ಹೊಂದಿದವರು.
ಸಾಹಿತ್ಯ ಸೇವೆಯಲ್ಲಿ ಮೂವತ್ತು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸುವುದರೊಂದಿಗೆ ಸಾಮಾಜಿಕ ಶೈಕ್ಷಣಿಕ, ಸಾಹಿತ್ಯಕ ಸೇವೆಯಲ್ಲಿದ್ದಾರೆ. ಸಮಾಜದ ಒಳಿತಿಗಾಗಿ ಸಾಕಷ್ಟು ಶ್ರಮಿಸಿದರು. ಎಂ.ಎ, ಪಿಎಚ್.ಡಿ ಪದವೀಧರರಾಗಿ ಕನ್ನಡದಲ್ಲಿ ಮರಾಠ ಸಮುದಾಯ ಹಿಂದಿಗಿಂತಲೂ ಇಂದು ಮುಂದುವರೆದಿದ್ದಾರೆ. ಮಹಾರಾಷ್ಟ್ರದ ಶಿವಾಜಿ, ಜೀಜಾ ಮಾತಾ ಅವರ, ದಿವ್ಯ ಶಕ್ತಿ ಇವರಿಗಿದೆ. ಇವರ ಸಾಲಿನಲ್ಲಿ ಡಾ.ಸುರೇಶ ಜಾಧವ ನಿಲ್ಲುತ್ತಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಹಕರಿಸಿದವರು. ಚಿತ್ತಾಪುರ ಕಾಲೇಜಿಗೆ ಕಲಾ ಅಷ್ಟೇ ಇತ್ತು. ನಂತರ ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ತೆರೆಯಲು ಜಾಧವರ ಪಾತ್ರ ಗಣನೀಯವಾಗಿದೆ.
ಸಾಹಿತ್ಯ : ಕೀರ್ತನ ಸಾಹಿತ್ಯ ಸಂಸ್ಕೃತಿ, ಹರಿದಾಸ ಸಿರಿ ದೀಪ್ತಿ ಇವು ಅವರ ಸಂಶೋಧನಾ, ವಿಮರ್ಶಾ ಸಂಕಲನಗಳು, ದಾಸ ಸಾಹಿತ್ಯದ ಅಧ್ಯಯನದ ವಿಸ್ತಾರ ಗಹನವಾಗಿದೆ. ಕೀರ್ತನೆಗಳು ಸಾಮಾಜಿಕ, ಆಧ್ಯಾತ್ಮ ದೃಷ್ಟಿಯಿಂದ ಸಮಾಜದ ಒಳಿತಿಗೆ ಶ್ರಮಿಸಿದವರು. ಮಾನವೀಯತೆ ಜೊತೆಗೆ ಸಂಸ್ಕೃತಿ ವಿಕಾಸಕ್ಕೆ ಹರಿದಾಸರ ಕೊಡುಗೆ ಅನನ್ಯವೆಂದು ಗುರುತಿಸಿದ್ದಾರೆ. ಕೀರ್ತನೆಗಳಿಗೆ ಪಲ್ಲವಿ, ಅನುಪಲ್ಲವಿ, ಅಂಕಿತ ರಾಗಬದ್ದವಾಗಿ ಮತ್ತು ಸಂಗೀತಕ್ಕೆ ಅಳವಡಿಸಿಕೊಂಡು, ಮನೆಮನೆಗೆ ತಲುಪಿಸುವ ಕಾರ್ಯ ದಾಸರು ಮಾಡಿದರು. ಮನೆಯ ಜಗುಲಿಯಲ್ಲಿ ನಿತ್ಯ ಪಠನ ಮಾಡುವ ಸಂದರ್ಭವನ್ನು ವಿವರಿಸಿದ್ದಾರೆ. ಕೀರ್ತನ ಸಂಗ್ರಹ, ಸಾಹಿತ್ಯ ಶೋಧ, ಕಲಾವಿದರ ಬದುಕು, ಸಾಹಿತ್ಯ ಸುರಣ, ಸಂಸ್ಕೃತಿ ಶೋಧ, ಶೋದ ತರಂಗ, ಚಿಂತನ ಸಿರಿ, ಇವು ಅವರ ಮಹತ್ವದ ಕೃತಿಗಳು. ಚಿಂತನ ಲೇಖನಗಳು ಇವೆ. ಕಲಾವಿದರ ಬದುಕಿನಲ್ಲಿ ಸಂಗೀತ, ರಂಗಭೂಮಿ, ಚಿತ್ರಕಲೆ, ಹೀಗೆ ಹಲವರ ಬಣ್ಣದ ಬದುಕನ್ನು ಅನಾವರಣಗೊಳಿಸುವ ಪುಸ್ತಕ. ಸಂವಹನ ಕನ್ನಡ, ಕರ್ನಾಟಕ ಸಂಸ್ಕೃತಿ, ವಾಣಿಜ್ಯ ಕನ್ನಡ, ಕಲಾ ಕನ್ನಡ ಪುಸ್ತಕಗಳನ್ನು ವಿಶ್ವವಿದ್ಯಾಲಯ ಮತ್ತು ತಮ್ಮ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ಅವರ ಸಂಪಾದನೆಯ ಶಿಸ್ತು, ಕ್ರಮಬದ್ಧ ಜೋಡಣೆ, ವಸ್ತು, ವಿಷಯಕ್ಕೆ ತಕ್ಕಂತೆ ನಿರೂಪಣೆ, ಪ್ರಸ್ತಾವನೆಯನ್ನು ವಿಸ್ತಾರವಾಗಿ ಬರೆದು ಲೇಖಕರ ಪರಿಚಯ, ವಿಳಾಸ ನೀಡಿ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ. ಕಾಲೇಜು ಸಿಬ್ಬಂದಿ ಕಾರ್ಯದರ್ಶಯಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ, ವೃತ್ತಿ ಮಾರ್ಗದರ್ಶನ ಕೋಶದ ಸಂಯೋಜಕರಾಗಿ, ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕರಾಗಿ, ಇವರ ಮಾರ್ಗದರ್ಶನದಲ್ಲಿ ಆರು ಜನ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇನ್ನೂ ನಾಲ್ಕು ಜನ ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನ ಕೈಗೊಂಡಿದ್ದಾರೆ.
ಡಾ.ಜಾಧವ ಅವರು ಕೇವಲ ಪಾಠ ಬೋಧನೆ ಮಾಡಿ ಕೂಡದೇ ಸಾಹಿತ್ಯ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವರು. ಕನ್ನಡ ಸಾಹಿತ್ಯ ಪರಿಷತ್ತು, ಗಮಕ ಕಲಾ ಪರಿಷತ್ತು, ಲಯನ್ಸ್ ಇಂಟರ್‌ನ್ಯಾಶನಲ್ ಕ್ಲಬ್ ಶಹಬಾದದ ಘಟಕದ ಅಧ್ಯಕ್ಷರಾಗಿ ಹಲವು ಮಹತ್ವದ ಕಾರ್ಯ ಯೋಜನೆ ರೂಪಿಸಿದವರು. ತಮ್ಮ ಮರಾಠ ಸಮುದಾಯದ ಸಲುವಾಗಿ, ಸರಕಾರಿ ನೌಕರದಾರರಿಗೆ ಸಮಸ್ಯೆ ಸವಾಲುಗಳನ್ನು ಸ್ವೀಕರಿಸಲು, ಒಗ್ಗಟ್ಟಾಗಿಸಲು ಸಂಘ ರಚಿಸಿಕೊಂಡು ಜಿಲ್ಲಾ ಮರಾಠ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿರುವರು. ಇವರ ಸಾಧನೆ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಹರಿದಾಸ ಸಿರಿ ದೀಪ್ತಿ ಕೃತಿಗೆ ೨೦೨೧ನೆಯ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಡಾ.ಸುರೇಶ ಜಾಧವ ಅವರ ಷಷ್ಟಬ್ಬಿ ಸಂದರ್ಭದಲ್ಲಿ ಅವರ ಶಿಷ್ಯರು, ಅಭಿಮಾನಿಗಳು, ಸಾಹಿತ್ಯ ಮಂಥನ ಎಂಬ ಅಭಿನಂದನಾ ಗ್ರಂಥ ಅರ್ಪಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಆಕರ ಗ್ರಂಥ - “ಸಾಹಿತ್ಯ ಮಂಥನ" ಎಂಬ ಅಭಿನಂದನ ಗ್ರಂಥವನ್ನು ಡಾ. ರೋಳೆಕರ ನಾರಾಯಣ ಪ್ರಧಾನ ಸಂಪಾದಕರಾಗಿ, ಡಾ.ಸುರೇಂದಕುಮಾರ ಕೆರಮಗಿ ಸಂಪಾದಕತ್ವದಲ್ಲಿ ಹೊರಬಂದು ಈಗ ಲೋಕಾರ್ಪಣೆ ಆಗಲಿದೆ. ಇಲ್ಲಿಯ ಅಭಿನಂದನ ಗ್ರಂಥ ಅಪರೂಪವಾಗಿದೆ. ಡಾ.ಸುರೇಶ ಜಾಧವ ಅವರ ಜೀವನ ಸಾಧನೆ, ಶೈಕ್ಷಣಿಕ ಜೀವನ ಸಾಧನೆಯನ್ನು ಮಾಡುವುದರೊಂದಿಗೆ ಕನ್ನಡ ಸಾಹಿತ್ಯ ಚರಿತ್ರೆಯ ಹಲವು ಭಾಗಗಳಲ್ಲಿ ಮುಖ್ಯ ಆಶಯಗಳನ್ನು, ಅವಲೋಕನಕ್ಕೆ ಅಡಿಪಾಯ ಹಾಕಲಿದೆ.
ಜೀವನದಿಂದ ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದವರು. ಅವನ್ನು ತುಂಬಾ ಭಾಗ-೧ರಲ್ಲಿ ನನ್ನ ನಾ ಕಂಡಂತೆ ಹತ್ತು ಪುಟಗಳಲ್ಲಿ ಅವರ ಸೋದರಿ, ಭಾವ ಇವರು ಆಪ್ತ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕೌಟುಂಬಿಕ ಕಲಾತ್ಮಕ ಆತ್ಮಕಥೆ ಎಂಬಂತೆ ನಿರೂಪಣೆಗೊಂಡಿದೆ. ಪತ್ನಿ, ಮಗಳು, ಮಗ, ಜೀವನದ ಹಲವು ಸಂಗತಿ ಹೊರ ಹಾಕಿದ್ದಾರೆ. ಗುರುಗಳು, ಆಪ್ತರು, ಶಿಷ್ಯರು ಕಂಡ ಹಾಗೆ ಹದಿನಾಲ್ಕು ಲೇಖನಗಳಿವೆ. ಡಾ. ಸುರೇಶ ಜಾಧವ ಅವರ ಅನೇಕ ಮುಖಗಳನ್ನು ಪರಿಚಯಿಸಿದ್ದಾರೆ. ಕತ್ತಲಲ್ಲಿ ಬೆಳಕನ್ನು ಹುಡುಕಿಕೊಂಡವರೆಂದಿದ್ದಾರೆ. ಬಾಲ್ಯದಿಂದಲೂ ಅವರ ಒಡನಾಡಿಗಳು. ಅವರ ಶೈಕ್ಷಣಿಕ ಸಾಧನೆಯಲ್ಲಿ ಗುರುವಿನ ಸ್ಥಾನಕ್ಕೆ ನ್ಯಾಯ ಒದಗಿಸಿದವರೆಂದು ಡಾ. ಸವಿತಾ ತಿವಾರಿ ಬರೆದಿರುವರು. ಡಾಚಿತ್ಕಳರು ಸದಾ ಹಸನ್ಮುಖಿ ಎಂದವರು. ಡಾ. ಮಲ್ಲೇಶಪ್ಪ ಕಂಬಾರ, ಗವಿಸಿದ್ಧಪ್ಪ ಪಾಟೀಲ, ವಿಜಯಕುಮಾರ ಗೊತಗಿ, ಡಾ. ಮೀನಾಕುಮಾರಿ ಪಾಟೀಲ, ರಾಮಕೃಷ್ಣ ಕುಲಕರ್ಣಿ, ಡಾ.ಮಿರಜಪಾಶಾ, ಡಾ.ರೇಶ್ಚಾ, ಪೂಜಾ ಬಂಕಲಗಿ, ಸುಷ್ಮಾ ಹಾಗರಗಿ, ಸುಮಂಗಲ ತಂಬಾಕೆ, ಅವರು ಬಹುಮುಖ ವ್ಯಕ್ತಿತ್ವ ಸಾಹಿತ್ಯ, ಒಡನಾಟ, ಶಿಕ್ಷಣ, ಸ್ವಭಾವಗಳನ್ನು ಅನಾವರಣಗೊಳಿಸಿದ್ದಾರೆ. ನಾಗಪ್ಪ ಗೋಗಿ ಸಜ್ಜನಿಕೆ ಸರದಾರರೆಂದು ಕವನ ಬರೆದಿದ್ದಾರೆ.
ಭಾಗ-೨ರಲ್ಲಿ ಸುರೇಶ ಜಾಧವರ ಕೃತಿಗಳ ಅವಲೋಕನದಲ್ಲಿ ಹದಿನೆಂಟು ಲೇಖನಗಳಿವೆ. ವಸಂತ ಕುಷ್ಟಗಿ, ಶಾರದಾ ಜಾಧವ, ಅರಳುಮಲ್ಲಿಗೆ ಪಾರ್ಥಸಾರಥಿ, ಸುರೇಂದ್ರ ಕೆರಮಗಿ, ಚಿತ್ಕಳಾಮಠ, ಶೋಭಾದೇವಿ ಚಕ್ಕಿ, ಗೋಗಿ, ಶಾಮಲಾ ಸ್ವಾಮಿ, ಶೈಲಜಾ ಬಾಗೇವಾಡಿ, ಸಿದ್ದಲಿಂಗ ದಬ್ಬಾ, ಡಾ. ಶೈಲಜಾ ರೆಡ್ಡಿ, ಸೀತಾಬಾಯಿ, ಗೌರಮ್ಮ, ವಡ್ಡನಕೇರಿ, ಪ್ರೇಮಾ ಅಪಚಂದ, ಮಲ್ಲಿನಾಥ ನಿಂಬರ್ಗಿ, ಅವರ ದಾಸ ಸಾಹಿತ್ಯ ಲೇಖನ, ವಿಮರ್ಶೆ, ಕಲಾವಿದರ ಬದುಕು, ಚಿಂತನ, ಪಠ್ಯ ಸಂಪಾದನೆಗಳು, ಅವರ ಒಟ್ಟು ಸಮಗ್ರ ಸಾಹಿತ್ಯಾವ ಲೋಕನವನ್ನು ಸಮರ್ಪಕವಾಗಿ ಲೇಖನ ವಿಮರ್ಶೆ; ಅವಲೋಕನ, ವಿಶ್ಲೇಷಣೆ ಮಾಡಿದ್ದಾರೆ.
ಭಾಗ-೩ : ಹಳಗನ್ನಡ-ನಡುಗನ್ನಡ-ಹೊಸಗನ್ನಡ ಎಂಬ ಭಾಗ ಈ ಅಭಿನಂದನ ಗ್ರಂಥದ ಹೃದಯ ಭಾಗವಾಗಿದೆ. ಅರವತ್ತಾರು ಲೇಖನಗಳಿವೆ. ಹಳಗನ್ನಡ ಭಾಗದಲ್ಲಿ ವೈ.ಚಂದ್ರಬಾಬುರ ಹಳಗನ್ನಡ ಕಾವ್ಯಗಳ ಸ್ವರೂಪ, ಪಂಪನ ಕಾವ್ಯಗಳ ಕೃತಿಗಳಲ್ಲಿ ಆತ್ಮ ಗೌರವ, ರನ್ನನ ಗದಾಯುದ್ಧದಲ್ಲಿ ಪ್ರತಿರೋಧನೆಲೆಗಳು ಶಿವಗಂಗಾ ರುಮ್ಮಾ. ಧರ್ಮಾಮೃತದಲ್ಲಿ ಡೊಣ್ಣೆಗೌಡರ, ಯಶೋಧರ ಚರಿತ್ರೆ ಡಾ. ಕೆರಮಗಿ, ಇಲ್ಲಿರುವ ಹಳಗನ್ನಡ ಸಾಹಿತ್ಯದವಾವಲೋಕನ, ವಚನ ಸಾಹಿತ್ಯದ ಹದಿಮೂರು ಲೇಖನಗಳಲ್ಲಿ ವ್ಯಕ್ತಿತ್ವ, ಆರ್ಥಿಕತೆ, ಸ್ತ್ರೀಪರ, ವ್ರತ-ನೇಮ, ದಾಂಪತ್ಯ, ಆಧ್ಯಾತ್ಮ ಚಿಂತನೆ. ಇಹಪರ, ಶೀಲಾಚರಣೆ, ಮಾದಾರಚನ್ನಯ್ಯ, ವಚನಕಾರ್ತಿಯರು, ಕಲಬುರ್ಗಿಯವರು ಕಂಡ ಬಸವಣ್ಣ, ಪವಾಡ ಕಥೆಗಳು, ವಚನೇತರ ಸಾಹಿತ್ಯದ ಹಲವು ಮುಖಗಳ ಅಧ್ಯಯನಕ್ಕೆ ಮಾದರಿಯಾದ ಲೇಖನಗಳಾಗಿವೆ. ನಾಡಿನ ಪ್ರಮುಖ ಲೇಖಕರಾಗಿದ್ದಾರೆ.
ಕೀರ್ತನ ಸಾಹಿತ್ಯ ಭಾಗದಲ್ಲಿ ಹದಿನೇಳು ಲೇಖನಗಳಿವೆ. ಡಾ. ಜಾಧವ ಅವರು ದಾಸ ಸಾಹಿತ್ಯ ಕುರಿತು ಅಧ್ಯಯನ ಮಾಡಿದ್ದಾರೆ. ಹೀಗಾಗಿ ಅವರದೇ ಎರಡು ಲೇಖನಗಳಿವೆ. ದಕ್ಷಿಣ ಭಾರತದ ಭಕ್ತಿ ಪರಂಪರೆಯ ಹುಡುಕಾಟ ಸಿ.ಬಿ. ಚಿಲ್ಕರಾಗಿ, ಬ್ರಾಹ್ಮಣೇತರ ಕೊಡುಗೆ ಶಾಶ್ವತಸ್ವಾಮಿ, ಪುರಂದರ, ಕನಕ, ಗಿರಿಯಮ್ಮ, ರಾಮದಾಸರು, ಅಲ್ಲದೇ ಅನೇಕ ಲೇಖನಗಳು ಮಹತ್ವ ಪೂರ್ಣವಾಗಿವೆ.
ನಡುಗನ್ನಡ ಸಾಹಿತ್ಯದ ನಂಬಿಯಣ್ಣ, ಹರಿಶ್ಚಂದ್ರ, ಚಾಮರಸ, ಕುಮಾರವ್ಯಾಸ, ಅಲ್ಲದೇ ತತ್ವಪದ ಸಾಹಿತ್ಯ ಮುಖ್ಯವಾದ ಅಮರೇಶ ನುಗಡೋಣಿ, ಅಮೃತ ಕಟಕೆ ಅವರ ಲೇಖನ ಮನನೀಯವಾಗಿವೆ. ಕೆರಮಗಿಯವರ ಪ್ರಭುಲಿಂಗ ಲೀಲೆ, ರೋಳೇಕರರ ಹರಿಶ್ಚಂದ್ರರ ಕಾವ್ಯದ ಬಹುಲೇಖನ ಅಧ್ಯಯನವಾಗಿವೆ. ಹೊಸಗನ್ನಡ ಸಾಹಿತ್ಯದಲ್ಲಿ ಇಪ್ಪತ್ತೈದು ಲೇಖನಗಳಿವೆ. ಕಾರಂತ, ಕುವೆಂಪು, ಬೇಂದ್ರೆ, ಕಾವ್ಯಾನಂದ, ತೇಜಸ್ವಿ, ಮುನಿವೆಂಕಟಪ್ಪ, ದೇವನೂರ, ಸಬರದ, ಅಲ್ಲದೇ ಅನೇಕರ ಸಾಹಿತ್ಯ ಆರಾಧನೆ, ಅವಲೋಕನ ತುಂಬಾ ಕಾದಂಬರಿ, ಕಥೆ, ಕಾವ್ಯಮಿಮಾಂಸೆ ಹಲವಾರು ಲೇಖನಗಳು ವಿದ್ವತ್ತವಲಯದ ಅಧ್ಯಯನ ಯೋಗ್ಯ ಲೇಖನಗಳಾಗಿವೆ.
ಭಾಗ-೪ : ರಲ್ಲಿ ವೈವಿಧ್ಯತೆಯ ಲೇಖನಗಳು ಸಂಕೀರ್ಣವಾಗಿ ಮೂಡಿಬಂದಿವೆ. ಸ್ಮಾರಕಗಳಿಗೆ ಮಾರಕವಾದ ಸಾಂಸ್ಕೃತಿಕ ಅಸಡ್ಡೆ ಡಾ. ಶ್ರೀನಿವಾಸ ಸಿರನೂರಕರ ಲೇಖನ ಉಪಯುಕ್ತ. ಗುಲ್ಬರ್ಗಾ ಇತಿಹಾಸ ತಿಳಿಯಲು ಡಾ.ಶಂಭುಲಿಂಗ ವಾಣಿ ಲೇಖನ ಸಂಗ್ರಹಯೋಗ್ಯವಾಗಿದೆ. ಡಾ. ಸೂರ್ಯಕಾಂತ ಸುಜ್ಯಾತ್‌ರ ಬೌದ್ಧಧಮ್ಮ ಮತ್ತು ಮಹಿಳೆ, ಕೆ.ರಂಗರಾವ್ರ ಸಿರಿಧಾನ್ಯಗಳು, ಪ್ರಾಥಮಿಕ ಶಾಲಾ ಮಕ್ ಆರೋಗ್ಯ ಮತ್ತು ಶುಚಿತ್ವ ಡಾ. ಶರಣಬಸಪ್ಪ ವಡ್ಡನಕೇರಿ, ಜಾಧವರ ಅಂತರ್ಜಾಲ ಡಾ. ಖಾಸೀಮಸಾಬರ ಅಂತರ್ಜಾಲ ಕನ್ನಡ ಭಾಷೆ ಸಾಹಿತ್ಯ ಲೇಖನಗಳಿವೆ.
ಭಾಗ-೫ರಲ್ಲಿ ಜಾಧವ ಅವರ ಪರಿಚಯ ಚಿತ್ರ ಸಂಪುಟ ನೋಡುಗರ ಮನ ಸೆಳೆಯುತ್ತವೆ. ಸಾಹಿತ್ಯ ಮಂಥನ ಎಂಬ ಅಭಿನಂದನ ಗ್ರಂಥ ಸಾವಿರ ಪುಟಗಳನ್ನು ಹೊಂದಿದೆ. ಒಂದು ನೂರಾ ಹತ್ತೊಂಬತ್ತು ಲೇಖನಗಳು ಐದು ಭಾಗಗಳಲ್ಲಿ ಆಯಾ ವಿಷಯದ ಸಂದರ್ಭನುಸಾರವಾಗಿ ವರ್ಗೀಕರಿಸಿ ಕೊಟ್ಟಿದ್ದಾರೆ. ಪ ಆಕರ್ಷಕ ಮುಖಪುಟ, ಬೆನ್ನುಡಿಯಲ್ಲಿ ಇರ್ವರ ಮಾತುಗಳು ಗ್ರಂಥಕ್ಕೆ ಹಿಡಿದ ಕನ್ನಡಿ. ಸಾಹಿತ್ಯ ಮಂಥನ ಎಂಬ ಅಭಿನಂದನ ಗ್ರಂಥ ಕನ್ನಡ ಸಾಹಿತ್ಯ ಚರಿತ್ರೆಯ ಮುಖ್ಯವಾದ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಸಂಕೀರ್ಣವಾದ ಲೇಖನಗಳಿಂದ ಕೂಡಿದ ವೈವಿಧ್ಯಮಯ ಲೇಖನಗಳಿವೆ. ಇವು ಸಾಹಿತ್ಯ ಚರಿತ್ರೆಯ ಅಧ್ಯಯನಕ್ಕೆ ಓದಿಗೆ, ಸಂಶೋಧನೆ, ಭಾಷಣ, ಪಾಠಪ್ರವಚನ, ಉಪನ್ಯಾಸ, ಹಾಗೂ ಸಾಹಿತ್ಯ ಚರಿತ್ರೆಯ ತಿಳಿದುಕೊಳ್ಳಬೇಕಾದವರಿಗೆ ಆಕರ ಗ್ರಂಥವಾಗಿ ಮೂಡಿ ಬಂದಿವೆ. ಡಾ.ಸುರೇಶ ಎಲ್.ಜಾಧವರ ವ್ಯಕ್ತಿತ್ವ ಸಾಧನೆ ಸಾಹಿತ್ಯ ಅವಲೋಕನದ ಜೊತೆ ಜೊತೆಗೆ ಸಾಹಿತ್ಯ ಚರಿತ್ರೆಯ ಅವಲೋಕನವೇ ಸಾಹಿತ್ಯ ಮಂಥನವಾಗಿದೆ.

