ಸೆ.18 ರಂದು, ನೈಜ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಗೆ ಗುಡಿ ಕರೆ
ಸೆ.18 ರಂದು, ನೈಜ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಗೆ ಗುಡಿ ಕರೆ
ವೀರ ಯೋಧರಿಗೆ ನಮನರೋಹಣ ಕಾರ್ಯಕ್ರಮ
ಕಲಬುರಗಿ, ಸೆ.16: KYF ಕೇಂದ್ರ ಸಮಿತಿ ಕಲಬುರಗಿ ವತಿಯಿಂದ ಸೆಪ್ಟೆಂಬರ್ 18 ರಂದು, ನೈಜ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನ, ಆಚರಣೆ ಹಾಗೂ ವೀರ ಯೋಧರಿಗೆ ನಮನರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೆಳಿಗ್ಗೆ 8.30ರಿಂದ 9.30 ರವರೆಗೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ ಗೀತೆ ಯೊಂದಿಗೆ svp ಯವರ ಮೂರ್ತಿಗೆ ಮಾಲಾರ್ಪಣೆ, ಹುತಾತ್ಮ ವೀರ ಯೋಧರಿಗೆ ಪುಷ್ಪನಮನ, ಗಮಿಸಿದ ಗಣ್ಯರ ಭಾಷಣ, ರಾಷ್ಟಭಕ್ತಿ ಗೀತೆಗಳು ಹಾಗೂ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಅನಂತ ಗುಡಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ವಾಗಿ ಇತಿಹಾಸ ಪ್ರಿಯರು ಸುಮಾರು 15 ರಿಂದ 21 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮವನ್ನು ಶಾಂತಿಯುತವಾಗಿ ಹಾಗೂ ಕಾನೂನುಬದ್ಧವಾಗಿ ನಡೆಸಲು ಸಂಘಟಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಒದಗಿಸುವಂತೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ
KYF, ಕೇಂದ್ರ ಸಮಿತಿ ಕಲಬುರಗಿ ಅಧ್ಯಕ್ಷ ಅನಂತ ಗುಡಿ ಅವರು ಮನವಿ ಸಲ್ಲಿಸಿದ್ದು ,ಅಲ್ಲದೇ ಕಲಬುರಗಿಯ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ.

