ಸದೃಢ ಆರೋಗ್ಯದಿಂದ ಸಮೃದ್ಧಿ ಜೀವನ ಸಾಧ್ಯ : ಶಾಸಕ ಅಲ್ಲಮ ಪ್ರಭು
ಸದೃಢ ಆರೋಗ್ಯದಿಂದ ಸಮೃದ್ಧಿ ಜೀವನ ಸಾಧ್ಯ : ಶಾಸಕ ಅಲ್ಲಮ ಪ್ರಭು
ಕಲಬುರಗಿ: ಒತ್ತಡದ ಜೀವನದಿಂದ ಇಂದು ಜನರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿಲ್ಲ. ಇದರ ಪರಿಣಾಮವಾಗಿಯೇ ಭಾರತ ದೇಶದಲ್ಲಿ ಅನೇಕರು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಸದೃಢ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ ಹೇಳಿದರು ಹೇಳಿದರು.
ನಗರದ ಹೊರವಲಯದಲ್ಲಿರುವ ಕೋಟನೂರು ಮಠದ ಸಿದ್ಧಶ್ರೀ ಡಿವೈನ ಪ್ಯಾಲೇಸ್ ನಲ್ಲಿ ಷಡಕ್ಷರಿ ಶಿವಯೋಗಿ ಸಿದ್ದರಾಮೇಶ್ವರವರ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮಕ್ಕೆ ವಿಶೇಷ ಆವನಿತರಾಗಿ ಆಗಮಿಸಿದ ಜಿಲ್ಲಾ ಅಂದತ್ವ ನಿವಾರಣ ಕೇಂದ್ರದ ಅಧಿಕಾರಿಗಳಾದ ಡಾ. ರವಿಕಾಂತಿ ಕ್ಯಾತನಾಳ ಮಾತನಾಡಿ, ತಮ್ಮ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರಗಳಿಗೆ ಹೆಚ್ಚಿನ ಆರೋಗ್ಯದ ನೆರವು ನೀಡುವ ಬಗ್ಗೆ ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರವಿ ವಿಭೂತಿಯವರು ಬಡವರಿಗೆ ಉಚಿತ ಆರೋಗ್ಯ ಶಿಬಿರಗಳು ಹೆಚ್ಚಿಗೆ ಲಾಭವಾಗುತ್ತದೆ ಇಂತಹ ಆರೋಗ್ಯದ ಶಿಬಿರಗಳ ಸದುಪಯೋಗಗಳನ್ನು ಗ್ರಾಮೀಣ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಪವನಕುಮಾರ ಬಿ.ವಳಕೇರಿ ಮಾತನಾಡಿ, ಬಡವರ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಅಧ್ಯ ಕರ್ತವ್ಯವಾಗಿದೆ. ಇಂದಿನ ಯುವಕರು ಗ್ರಾಮೀಣ ಪ್ರದೇಶದಲ್ಲಿನ ಜನರ ಆರೋಗ್ಯವನ್ನು ತಿಂಗಳಿಗೊಮ್ಮೆ ಪರೀಕ್ಷಿಸಲು ನೆರವಾಗಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಮನೆಯ ಅಂಗಳದಲ್ಲಿ ಹೆಚ್ಚಿನ ಔಷಧೀಯ ಸಸ್ಯಗಳನ್ನು ಬೆಳೆಸಬೇಕು. ಭಾರತೀಯರಾದ ನಾವುಗಳು ಆಯುರ್ವೇದದ ಕಡೆ ಹೆಚ್ಚಿನ ಗಮನ ಕೊಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ನಾಲ್ಕು ಚಕ್ರಾ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಮಾಲಾ ಕಣ್ಣಿ, ಮಲ್ಲಣ್ಣ ಗೌಡ ನಂದಿಕುರ, ಶಿವರಾಜ ಡಿಗ್ಗಾವಿ ರವಿಕಿರಣ್ ವಳಕೇರಿ ಸುಶೀಲ ಕುಮಾರ ಬಿ ವಳಕೇರಿ ವೈಭವ ಬಬಲಾತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಯುನೈಟೆಡ್ ಆಸ್ಪತ್ರೆ, ಅಲ್ ಬದರ ಡೆಂಟಲ್ ಕಾಲೇಜ್ ಸೇರಿದಂತೆ ಅನೇಕ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು

