ಸಂಗೀತ ಮನಸ್ಸಿಗೆ ಮುದ ನೀಡುತ್ತದೆ - ಸುಜ್ಞಾನಿ ಎಸ್, ಆಧೋನಿ.
ಸಂಗೀತ ಮನಸ್ಸಿಗೆ ಮುದ ನೀಡುತ್ತದೆ - ಸುಜ್ಞಾನಿ ಎಸ್, ಆಧೋನಿ.
ಶಹಾಪುರ : ಮಧುರವಾದ ಸಂಗೀತವನ್ನು ಆಲಿಸುವುದರಿಂದ ದಿನವಿಡೀ ಕಾಡುವ ಮಾನಸಿಕ ಒತ್ತಡ ಮತ್ತು ಆತಂಕ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಲಿಟಲ್ ಫ್ಲವರ್ ಪಬ್ಲಿಕ್ ಶಾಲೆಯ ಮುಖ್ಯ ಗುರುಗಳಾದ ಸುಜ್ಞಾನಿ ಎಸ್. ಆದೋನಿ ಹೇಳಿದರು.
ನಗರದ ಲಿಟಲ್ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ಯಾದಗಿರಿ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವುಗಳ ಸಹಯೋಗದಲ್ಲಿ ಆಯೋಜಿಸಿದ ಸಂಗೀತ ಕಲಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಸಂಗೀತ ಇಂಪಾಗಿ ಕೇಳುವುದರ ಬದಲಿಗೆ ಮನುಷ್ಯನ ಭಾವನೆಗಳನ್ನು ನಿಯಂತ್ರಿಸುವ ಒಂದು ಅದ್ಭುತ ಶಕ್ತಿ ಸಂಗೀತದಲ್ಲಿ ಅಡಗಿದೆ ಎಂದು ನುಡಿದರು.
ಮುಖ್ಯ ಅತಿಥಿಗಳು ಹಾಗೂ ಯುವ ಸಂಗೀತ ಕಲಾವಿದೆಯಾದ ಸ್ವಾತಿ ಪ್ರಹ್ಲಾದ್ ಕಲಬುರಗಿ ಮಾತನಾಡಿದ ಅವರು,ಕಲೆ ಮತ್ತು ಸಂಗೀತ ನಮ್ಮ ಪ್ರಾಚೀನ ಕಾಲದ ಪರಂಪರೆಯನ್ನು ಬಿಂಬಿಸುವುದರ ಜತೆಗೆ ಹಳೆಯ ಸಂಪ್ರದಾಯಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ಜರುಗಬೇಕೆಂದು ಹೇಳಿದರು.
ಈ ಸಮಾರಂಭದ ವೇದಿಕೆಯ ಮೇಲೆ ಯುವ ಮುಖಂಡರಾದ ಲಿಂಗನಗೌಡ ಮಾಲಿ ಪಾಟೀಲ್ ದೀಪಕ್ ಗಾಳಿ ಹಾಗೂ ಯಾದಗಿರಿ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಚೆನ್ನಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರಾಯೋಜಿತ ಖಂಡಗಳಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು,ರಾಯಚೂರಿನ ಸತ್ಯವತಿ ದೇಶಪಾಂಡೆ ಅವರಿಂದ ಶಾಸ್ತ್ರಿಯ ಸಂಗೀತ, ಮನೋಹರ್ ವಿಶ್ವಕರ್ಮ ಜಾನಪದ ಸಂಗೀತ,ಈಶ್ವರಪ್ಪ ಜಿನಕೇರಿ ತತ್ವಪದ,ಭೀಮರಾಯ ಗುಳೇದ ತತ್ವಪದ,ವಿಶ್ವನಾಥ್ ಪತ್ತಾರ ಜಾನಪದ ಸಂಗೀತ,ಶೃತಿ ಮತ್ತು ತಂಡದವರಿಂದ ಭಾವಗೀತೆ,ಶಾಂತಾಬಾಯಿ ವಿಶ್ವಕರ್ಮ ಜಾನಪದ,ದಾನಪ್ಪ ಅಪ್ಪಾಗೋಳ ತತ್ವಪದ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ಕಾರ್ಯಕ್ರಮವನ್ನು ನಮೃತಾ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

