ಸಾತ್ವಿಕ ಸತ್ಯವನ್ನು ಎತ್ತಿಹಿಡಿದ ಕನಕದಾಸರು-ಡಾ. ಮರಿಯಪ್ಪ ನಾಟೇಕರ.

ಸಾತ್ವಿಕ ಸತ್ಯವನ್ನು ಎತ್ತಿಹಿಡಿದ ಕನಕದಾಸರು-ಡಾ. ಮರಿಯಪ್ಪ ನಾಟೇಕರ.

ಸಾತ್ವಿಕ ಸತ್ಯವನ್ನು ಎತ್ತಿಹಿಡಿದ ಕನಕದಾಸರು-ಡಾ. ಮರಿಯಪ್ಪ ನಾಟೇಕರ.

ಯಾದಗಿರಿ : ಮನುಷ್ಯನಿಗೆ ಈ ಜಗತ್ತಿನಲ್ಲಿರುವ ಭೋಗ ಭಾಗ್ಯಗಳು ಕ್ಷಣಿಕ,ದೇವರ ನಾಮಸ್ಮರಣೆಯೇ ಶಾಶ್ವತ ಎಂಬ ಸಾತ್ವಿಕ ಸತ್ಯವನ್ನು ಕನ್ನಡದ ಸಂತ ಕವಿ ತತ್ವಪದಕಾರ ಕನಕದಾಸರು ಎಂದು ಸಾಹಿತಿ ಡಾ: ಮರಿಯಪ್ಪ ನಾಟೇಕರ ಹೇಳಿದರು.

ನಗರದ ಮಲ್ಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಕುಲ ಕುಲವೆಂದು ಹೊಡೆದಾಡದಿರಿ ಎಂಬ ಅವರ ವಿಶ್ವವಿಖ್ಯಾತ ಕೀರ್ತನೆಯು ಮನುಷ್ಯರ ನಡುವಿನ ಜಾತಿ ಪದ್ಧತಿಯನ್ನು ಪ್ರಶ್ನಿಸುತ್ತದೆ. ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲ ಭಕ್ತಿಯಿಂದ ಮಾತ್ರ ಮುಕ್ತಿ ಪಡೆಯಲು ಸಾಧ್ಯ ಎಂಬ ಅವರ ಕೀರ್ತನೆಗಳಲ್ಲಿ ಒತ್ತಿ ಒತ್ತಿ ಹೇಳಿದ್ದಾರೆ ಎಂದು ನುಡಿದರು.

ಹಿರಿಯ ಸಾಹಿತಿ ವಿಶ್ವನಾಥರೆಡ್ಡಿ ಗೊಂದಡಗಿ ಮಾತನಾಡಿ, ತಪ್ಪುಗಳನ್ನು ಇತರರಲ್ಲಿ ಹುಡುಕದೆ ತಮ್ಮಲ್ಲಿ ತಾವು ಪ್ರಾಮಾಣಿಕವಾಗಿ ತಿದ್ದಿಕೊಳ್ಳುವುದರ ಜೊತೆಗೆ. ಮನುಷ್ಯ ಅಹಂಕಾರ ತೊರೆದಾಗ ಮಾತ್ರ ಮೋಕ್ಷ ಸಾಧ್ಯವೆಂದು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಯಥೇಚ್ಛವಾಗಿ ಪ್ರತಿಪಾದಿಸಿದ್ದಾರೆ ನುಡಿದರು.

ಶ್ರೀ ಮಲ್ಲಿಕಾ ಸಮೂಹ ಶಿಕ್ಷಣ ಸಂಸ್ಥಾಪಕ ಅಧ್ಯಕ್ಷರಾದ ರಾಯಪ್ಪ ಪೂಜಾರಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಇದೇ ಸಂದರ್ಭದಲ್ಲಿಸರಕಾರದ

ವತಿಯಿಂದ ಕೊಡ ಮಾಡುವ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರಾದ ಮೇಘನಾಥ ಬೆಳ್ಳಿಯವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಸತ್ಕರಿಸಲಾಯಿತು.

ಮಲ್ಲಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಪೂಜಾರಿ ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕುಮಾರಿ ಅಶ್ವಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ರಾಮು ರಾಠೋಡ ಸ್ವಾಗತಿಸಿದರು, ಗುರುಪ್ರಸಾದ್ ವೈದ್ಯ ನಿರೂಪಿಸಿ, ವಂದಿಸಿದರು.