ಸುರಪುರ ದಲಿತ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ, ಅಂಬೇಡ್ಕರ್ ಚಿಂತಕರ ವೇದಿಕೆ ಪ್ರತಿಭಟನೆ
ಸುರಪುರ ದಲಿತ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ, ಅಂಬೇಡ್ಕರ್ ಚಿಂತಕರ ವೇದಿಕೆ ಪ್ರತಿಭಟನೆ
ಚಿಂಚೋಳಿ : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಖಾಪುರ ಗ್ರಾಮದ ದಲಿತ ಕುಟುಂಬದ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯನ್ನು ಖಂಡಿಸಿ ತಾಲೂಕ ಡಾ. ಬಿ. ಆರ್ .ಅಂಬೇಡ್ಕರ್ ರವರ ವಿಚಾರವಾದಿಗಳ ಹಾಗೂ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಚಿಂಚೋಳಿ ಆಡಳಿತ ಸೌಧ ತಹಸೀಲ್ ಕಾರ್ಯಾಲದ ಎದುರು ಪ್ರತಿಭಟನೆ ನಡೆಸಿದರು.
ಮೃತರ ಅಂತ್ಯಕ್ರಿಯೆಗೆ ಸಮಾಧಿ ಅಗೆಯಲು ನಿರಾಕರಿಸಿದನ್ನು ಕಾರಣ ಒಡ್ಡಿ ದಲಿತ ಕುಟುಂಬದವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಲಾಗಿರುವುದು ಸಂವಿಧಾನ ವಿರೋಧಿ ಹಾಗೂ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದೆ ಎಂದು ಪ್ರತಿಭಟನೆಕಾರರು ತಿಳಿಸಿದರು.
ಪ್ರತಿಭಟನೆ ಉದ್ದೇಶಿಸಿ ಬಹುಜನ ಪಕ್ಷದ ಹಿರಿಯ ಮುಖಂಡ ಗೌತಮ್ ಬೊಮ್ಮನಳ್ಳಿ, ಅಬ್ದುಲ್ ಬಾಷಿದ್, ಕೆ.ಎಂ.ಬಾರಿ ಹಾಗೂ ಚೇತನ ನಿರಾಳಕರ್ ಅವರು ಮಾತನಾಡಿ,
ದಲಿತ ಕುಟುಂಬದ ಮೇಲಿನ ಹಲ್ಲೆಯನ್ನು ಯಾದಗಿರಿ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆಗಾ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧನ ಪಡಿಸುವಂತಾಗಬೇಕು. 17 ಜನರ ಮೇಲೆ ಸುರಪುರ ಪೊಲೀಸ್ ಠಾಣೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಆರೋಪಿಗಳನ್ನು ತಕ್ಷಣಕ್ಕೆ ಬಂಧನಗೊಳಿಸಿ ಕಠಿಣ ಶಿಕ್ಷೆಗೆ ಗುರಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಅಲ್ಲದೇ ದೌರ್ಜನ್ಯದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರ ನೆರವಿಗೆ ಸರಕಾರ ಬಂದು ಅವರ ಸಂಪೂರ್ಣ ವೈದ್ಯಕಿಯ ವೆಚ್ಚ ಸರಕಾರವೇ ಭರಿಸಬೇಕು. ದೌರ್ಜನ್ಯ ಕಾಯ್ದೆಯಡಿ ಸಂತ್ರಸ್ಥ ಕುಟುಂಬಕ್ಕೆ ಆರ್ಥಿಕ ನರೆವು ಕೂಡ ಸರಕಾರ ಕಲ್ಪಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ಚಿಂಚೋಳಿ ತಹಸೀಲ್ದಾರರ ಮೂಲಕ ಯಾದಗಿರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟಕ ಚೇತನ ನಿರಾಳಕರ್, ಗೋಪಾಲ ರಾಂಪೂರೆ, ಸುನೀಲ್ ತ್ರಿಪಾಟಿ, ವಿಠಲ್ ಕುಸಾಳೆ, ರೇವಣಸಿದ್ದ ಹೊಡೆಬೀರನಳ್ಳಿ, ಭಾಗ್ಯವಂತ ಶಾರದಾ, ಹಣಮಂತ ಪೂಜಾರಿ ಅವರು ಉಪಸ್ಥಿತರಿರದ್ದರು.

