ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಿ - ಕೆ.ಎಂ.ವಿಶ್ವನಾಥ ಮರತೂರ ಸಲಹೆ.

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಿ - ಕೆ.ಎಂ.ವಿಶ್ವನಾಥ ಮರತೂರ ಸಲಹೆ.

ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಿ - ಕೆ.ಎಂ.ವಿಶ್ವನಾಥ ಮರತೂರ ಸಲಹೆ.

ಗುರುಮಿಠಕಲ್:‌ ಹತ್ತನೇಯ ತರಗತಿ ಎಂಬುವುದು ಶೈಕ್ಷಣಿಕ ಜೀವನದಲ್ಲಿ ಪ್ರಮುಖವಾಗಿದ್ದು ನಮ್ಮ ಭವಿಷ್ಯದ ಶೈಕ್ಷಣಿಕ ಬದುಕಿಗೆ ಬುನಾದಿಯಾಗಿದೆ. ಪರೀಕ್ಷಾ ಸಮಯದಲ್ಲಿ ಒತ್ತಡದ ಮೂಲಕ ತಯಾರಿ ಮಾಡುವ ಬದಲಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ತಯಾರಿ ಮಾಡಿಕೊಂಡರೆ ಯಶಸ್ಸು ಸುಲಭದ ಜೊತೆಗೆ ಒತ್ತಡರಹಿತವಿರುತ್ತದೆ ಎಂದು ಖ್ಯಾತ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಅವರು ಗುರುಮಿಠಕಲ್‌ ನಗರದ ಜ್ಞಾನಧಾರೆ ಕೋಚಿಂಗ್‌ ಕೇಂದ್ರದ ಬೇಸಿಗೆ ಶಿಭಿರದಲ್ಲಿ ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗಾಗಿ ಸಮಯ ಪರಿಪಾಲನೆ, ಸಮಯ ನಿರ್ವಹಣೆ, ಓದುವ ಕೌಶಲ್ಯ, ಹತ್ತನೇಯ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ತಂತ್ರಗಳು, ಪರೀಕ್ಷಾ ಯೋಜನೆ, ಪರೀಕ್ಷೆ ಒಂದು ಹಬ್ಬ ಸಂಭ್ರಮಸಿ ಹೀಗೆ ಹತ್ತಾರು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಚಟುವಟಿಕೆ ಆಧಾರಿತವಾಗಿ ತಿಳಿಸಿದರು. ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು ಸರಕಾರ ಅಧಿಕೃತ ಆದೇಶಗಳು ಹೊರಬೀಳಿವೆ ಪ್ರಾರಂಭದಿಂದಲೇ ಉತ್ತಮವಾದ ತಯಾರಿ ಮಾಡಿದರೆ ಕೊನೆಯ ಹಂತದಲ್ಲಿ ಆಗುವ ಪರೀಕ್ಷಾ ಒತ್ತಡವನ್ನು ನಿವಾರಣೆ ಮಾಡಬಹುದು ಎಂಬುವುದನ್ನು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತಿಳಿಸಿದರು. 

ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಕ್ಷಣ ಪ್ರೇಮಿ ಶ್ರೇಷ್ಠ ದಾನಿಗಳಾದ ಅನಂತಪ್ಪ ಬೋಯಿನ್ ಇವರು ತಮ್ಮ ಮಾತುಗಳಲ್ಲಿ ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕು, ಇದೀಗ ಪ್ರೋತ್ಸಾಹ ನೀಡುವ ವ್ಯಕ್ತಿಗಳು, ಸಂಸ್ಥೆಗಳು, ಸರಕಾರ‌, ತುಂಬಾಯಿದ್ದಾರೆ ಅವರ ಲಾಭ ಪಡೆಯಬೇಕು, ಅದರಂತೆ ಶ್ರದ್ಧೆಯಿಂದ ಓದಿದರೆ ಉತ್ತಮ ಫಲಿತಾಂಶ ಸಾಧಿಸಬಹುದೆಂದು ಹೇಳಿದರು. 

ಸಂಸ್ಥೆಯ ಪ್ರತಿನಿಧಿ ಶಿಕ್ಷಣ ಪ್ರೇಮಿ ಭೀಮಾಶಂಕರ ಯದ್ಲಾಪೂರ ಮಾತನಾಡಿ ನಮ್ಮ ಯಾದಗಿರಿ ಜಿಲ್ಲೆ ಈಗಾಗಲೇ ಫಲಿತಾಂಶದಲ್ಲಿ ಗಣನೀಯವಾದ ಸಾಧನೆಯತ್ತ ಹೆಜ್ಜೆಯಿಟ್ಟಿದೆ, ಇನ್ನೂ ಸಾಧಿಸುವುದು ಹೆಚ್ಚಿದೆ ಹೀಗಾಗಿ ಜ್ಞಾನಧಾರೆ ವಿದ್ಯಾಕೇಂದ್ರವು ಗುರುಮಿಠಕಲ್‌ ನ ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗೆ ಬೇಕಾಗುವ ಅವಕಾಶಗಳನ್ನು ಒದಗಿಸಲಾಗುವುದು ಅದನ್ನು ವಿದ್ಯಾರ್ಥಿಗಳು ಲಾಭ ಪಡೆದು ಉತ್ತಮ ಫಲಿತಾಂಶ ತರಬೇಕು ಎಂದು ಕಿವಿಮಾತು ಹೇಳಿದರು. 

ಕಾರ್ಯಾಗಾರದಲ್ಲಿ ಒಟ್ಟು 50 ಹತ್ತನೇಯ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಲಾಭ ಪಡೆದರು. ಕಾರ್ಯಾಗಾರದಲ್ಲಿ ಶಿಕ್ಷಕರಾದ ಅಶೋಕಕುಮಾರ, ಮಲ್ಲಿಕಾರ್ಜುನ, ಅರವಿಂದ, ವಿರೇಶ, ಮಹಿಬೂಬ್‌ ಅಲಿ, ಸಾಬಣ್ಣ, ರೂಪ ಉಪಸ್ಥಿತರಿದ್ದರು.