ಬಿಜೆಪಿ ಶೂನ್ಯದಿಂದ ಶಿಖರಕ್ಕೆ : ಪಕ್ಷದಿಂದ ವಿಜಯೋತ್ಸವ
ಬಿಜೆಪಿ ಶೂನ್ಯದಿಂದ ಶಿಖರಕ್ಕೆ : ಪಕ್ಷದಿಂದ ವಿಜಯೋತ್ಸವ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲದ ವತಿಯಿಂದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದಲ್ಲಿ ಅದ್ಭುತವಾಗಿ ಬಹುಮತ ಸಾಧಿಸುವದರ ಜೊತೆಗೆ ಎನಡಿಎ ಯಿಂದ ಪುದುಚೇರಿಯ ಗೆಲುವನ್ನು ಸಾಧಿಸಿದ್ದರಿಂದ ನಗರದ ಶ್ರೀ ರಾಮ ಚೌಕನಲ್ಲಿ ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು.
ಚಂದ್ರಕಾಂತ ಗೊಬ್ಬೂರ, ಅರುಣ ಪಟ್ಟಣಕರ, ಭೀಮರಾವ ಸಾಳೂಂಕೆ, ಜ್ಯೋತಿ ಶರ್ಮ ಮತ್ತು ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವವನ್ನೇ ಹೊಂದಿರದ ಬಿಜೆಪಿ, ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತಿದೆ ಎಂದು ಹೇಳಿದರು.
ದೇವದಾಸ ಜಾಧವ ಸ್ವಾಗತಿಸಿ, ನಿರೂಪಿಸಿದರು, ದಿನೇಶ ಗೌಳಿ ವಂದಿಸಿದರು.
ಮಂಡಲ ಪದಾಧಿಕಾರಿಗಳು, ಪ್ರಮುಖರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು, ಮೊರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಕೊಷ್ಠಗಳ ಸಂಚಾಲಕರು, ಬೂತಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.
