ಖರ್ಚಿಲ್ಲದೆ ಸಂಪೂರ್ಣ ಕಾಳಜಿಯೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ
ಖರ್ಚಿಲ್ಲದೆ ಸಂಪೂರ್ಣ ಕಾಳಜಿಯೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ
(ಸರ್ಕಾರಿ ಶಾಲೆಗಳಿಗೆ ದಾಖಲಾತಿ ಆಂದೋಲನ)
ನಿಮ್ಮ ಮಗಳು ಮತ್ತು ಮಗ ಜವಾಬ್ದಾರಿಯುತ ನಾಗರಿಕರಾಗುವಂತೆ, ಗುಣವಂತರು, ಸಾಮಾಜಿಕ ಜವಾಬ್ದಾರಿಯುತ ವ್ಯಕ್ತಿಗಳಾಗಲು ಗುಣಾತ್ಮಕ ಶಿಕ್ಷಣವನ್ನು ಯಾವುದೇ ವೆಚ್ಚವಿಲ್ಲದೆ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪಡೆಯಿರಿ.
ಸರ್ಕಾರಿ ಶಾಲೆಗೆ ದಾಖಲಾದ ಮಗುವಿಗೆ ಸಿಗುವ ಸೌಲಭ್ಯಗಳು:
1. ಗುಣಮಟ್ಟದ ಶಿಕ್ಷಣ ಹಾಗೂ ಪ್ರಗತಿ
2. ಸಮಗ್ರ ಅಭಿವೃದ್ಧಿ
3. ವಿಶೇಷ ಸೌಲಭ್ಯಗಳು
4. ನಿಮ್ಮ ಮಕ್ಕಳಿಗೆ ರಾಜ್ಯದಲ್ಲಿರುವ ಎಲ್ಲಾ ಶಾಲೆಗಳಲ್ಲಿ, ಯಾವುದೇ ತರಗತಿಯಲ್ಲಿ ದಾಖಲಿಸುವ ಅವಕಾಶವಿದೆ.
5.ನೇ ತರಗತಿವರೆಗೆ ತರಗತಿಗೊಬ್ಬರು ಹಾಗೂ 6ನೇ ತರಗತಿಯಿಂದ ವಿಷಯಕ್ಕೊಬ್ಬರಂತೆ ಶಿಕ್ಷಕರಿಂದ ಬೋಧನೆ ಸೌಲಭ್ಯ .
6. ಪೋಷಕರು ಬಯಸುವ ಮಾಧ್ಯಮ: ಎಲ್ಲಾ ಶಾಲೆಗಳಲ್ಲೂ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಲಭ್ಯ; ಇಂಗ್ಲಿಷ್ ಬೋಧನೆಗಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ಸೌಲಭ್ಯ.
7. ಉಚಿತ ಸಾರಿಗೆ ಸೌಲಭ್ಯ: ಕೆ.ಪಿ.ಎಸ್ ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆಯ ಸೌಲಭ್ಯ .
8. ಡಿಜಿಟಲ್ ಶಿಕ್ಷಣ: 1ನೇ ತರಗತಿಯಿಂದ ಕಂಪ್ಯೂಟರ್ ಹಾಗೂ 3ನೇ ತರಗತಿಯಿಂದಲೇ AI ಕಲಿಕೆ. ಮತ್ತು ಎಲ್ಲಾ ಕೆ.ಪಿ.ಎಸ್ ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯ.
9. ಕಲೆ ಮತ್ತು ದೈಹಿಕ ಶಿಕ್ಷಣ: ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕೆ ಪ್ರಾಶಸ್ತ್ಯ.
10. ಶೈಕ್ಷಣಿಕೇತರ ಹೊರೆ ಮುಕ್ತಿ: ಬೋಧನೆಯ ಹೊರತಾದ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿಗಳಿಂದ ಕೆಲಸ ನಿರ್ವಹಣೆ ಮತ್ತು ಶಿಕ್ಷಕರಿಗೆ ಬೋಧನೆಗೆ ಮಾತ್ರ ಆದ್ಯತೆ.
11. ಮಗುವಿನ ಪ್ರಗತಿ ತಿಳಿಯಲು Lesson Based Assessment ಮತ್ತು ಪ್ರತಿ 2 ತಿಂಗಳಿಗೊಮ್ಮೆ ಕಡ್ಡಾಯ ಪೋಷಕರು-ಶಿಕ್ಷಕರ ಸಭೆಯ ಸೌಲಭ್ಯ.
12. ಕೌಶಲ್ಯ ಮತ್ತು ಸ್ಪರ್ಧಾತ್ಮಕ ತರಬೇತಿ: 6ನೇ ತರಗತಿಯಿಂದಲೇ ವೃತ್ತಿ ಕೌಶಲ್ಯ ಶಿಕ್ಷಣ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿಯ ಸೌಲಭ್ಯ.
13. ಅತ್ಯುತ್ತಮ ಶಿಕ್ಷಣ, ಶಿಕ್ಷಕರು ಮತ್ತು ವಿದ್ಯಾರ್ಹತೆ ಹೊಂದಿದ ಹಾಗೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅನುಭವಿ ಶಿಕ್ಷಕರು ಮತ್ತು ಗುಣಮಟ್ಟದ ಬೋಧಕ ವರ್ಗದ ಮಾರ್ಗದರ್ಶನ,
14. ಆಕರ್ಷಕ ಬೋಧನೆ: ದೃಶ್ಯ ಮಾಧ್ಯಮ ಹಾಗೂ ಪರಿಕರಗಳ ಮೂಲಕ ಸುಲಭ ಕಲಿಕೆಯ ಸೌಲಭ್ಯ,
15. ಸುಸಜ್ಜಿತ ಲ್ಯಾಬ್‌ಗಳು: ವಿಜ್ಞಾನ ಮತ್ತು ಕಂಪ್ಯೂಟರ್ ವಿಷಯಗಳ ಪ್ರಾಯೋಗಿಕ ಜ್ಞಾನಕ್ಕಾಗಿ ಸುಸಜ್ಜಿತ ಪ್ರಯೋಗಾಲಯಗಳ ಸೌಲಭ್ಯ,
16. ನವೀನ ಶಾಲಾ ಉನ್ನತೀಕರಣ: ಪ್ರತಿವರ್ಷ ಆಯ್ದ ಶಾಲೆಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿ ಅವುಗಳನ್ನು ಪಿಎಂ ಶ್ರೀ (PM SHRI), ಕೆಪಿಎಸ್ (KPS) ಮತ್ತು ಬಿಪಿಎಸ್ (BPS) ಶಾಲೆಗಳಾಗಿ ಖರ್ಚಿಲ್ಲದೆ ಗುಣಾತ್ಮಕ ಮತ್ತು ಮೌಲ್ಯ ಯುತ ಶಿಕ್ಷಣದ ಸೌಲಭ್ಯ.
17. ಪ್ರತಿ ವರ್ಷ ಶಿಕ್ಷಕರಿಗೆ ವೃತ್ತಿಪರ ತರಬೇತಿಗಳ ಸೌಲಭ್ಯ.
ಸಮಗ್ರ ಶಿಕ್ಷಣದ ಅಭಿವೃದ್ಧಿ
ಕ್ರೀಡೆ ಮತ್ತು ಪ್ರತಿಭಾ ಕಾರಂಜಿ: ಮಕ್ಕಳಲ್ಲಿರುವ ಕ್ರೀಡಾ ಶಕ್ತಿ ಮತ್ತು ಸುಪ್ತ ಪ್ರತಿಭೆಗಳನ್ನು ಹೊರತರಲು ವೇದಿಕೆಗಳು.
ಸಾಂಸ್ಕೃತಿಕ ಚಟುವಟಿಕೆಗಳು: ಕಲೆ, ಸಂಗೀತ, ಮತ್ತು ನೃತ್ಯದ ಮೂಲಕ ಸಾಂಸ್ಕೃತಿಕ ಬೆಳವಣಿಗೆ.
ಪ್ರಾಯೋಗಿಕ ಕಲಿಕೆ: ಚಟುವಟಿಕೆಗಳ ಮೂಲಕ ಪಠ್ಯದ ಪ್ರಾಯೋಗಿಕ ಜ್ಞಾನಕ್ಕೆ ಒತ್ತು.
ವಿಶೇಷ ಸೌಲಭ್ಯಗಳು
CWSN ಬೆಂಬಲ: ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ (Children with Special Needs) ಪ್ರತ್ಯೇಕ ಕಾಳಜಿ ಮತ್ತು ಪೂರಕ ವ್ಯವಸ್ಥೆ.
ಪ್ರೋತ್ಸಾಹಕ ಯೋಜನೆಗಳು: ವಿದ್ಯಾರ್ಥಿ ವೇತನ, ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಬಿಸಿಯೂಟದಂತಹ ಸೌಲಭ್ಯಗಳು.
ಸಮುದಾಯದೊಂದಿಗೆ ಸಹಭಾಗಿತ್ವ: ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಸ್ಥಳೀಯ ಸಮಾಜದ ಸಕ್ರಿಯ ಪಾಲ್ಗೊಳ್ಳುವಿಕೆ.
ಕಂಪ್ಯೂಟರ್ ಶಿಕ್ಷಣದ ಮೂಲಕ Al ಕಲಿಕೆಯ ಸೌಲಭ್ಯ.
ಯೋಗದ ಮೂಲಕ ವ್ಯಕ್ತಿತ್ವ ವಿಕಸನದ ಸೌಲಭ್ಯ.
ಇಂಗ್ಲೀಷ್ ಭಾಷೆಯ ಸಂವಹನ ಕೌಶಲ್ಯದ ಕಲಿಕಾ ಸೌಲಭ್ಯ.
ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣದ ಹಕ್ಕು (Right to Education) ಮೂಲಕ ಕಲಿಯುವ ಅವಕಾಶವಿದೆ. ಮೊದಲು ಈಗಲೇ ನಿಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ಶಾಲೆಗಳಿಗೆ, ಶ್ರೀ (PM SHRI), ಕೆಪಿಎಸ್ (KPS) ಮತ್ತು ಬಿಪಿಎಸ್ (BPS) ಶಾಲೆಗಳಿಗೆ ದಾಖಲಿಸಿ ಪ್ರಯೋಜನ ಪಡೆದುಕೊಳ್ಳುವುದು . ಅನ್ನ ದಾಸೋಹದ ಮೂಲಕ ಜ್ಞಾನ ದಾಸೋಹದ ದಾಹವನ್ನು ತಣಿಸುವ ಸರ್ಕಾರಿ ಶಾಲೆಗಳು ಶೈಕ್ಷಣಿಕ ಕ್ರಾಂತಿಯನ್ನು ಮೂಡಿಸುವ ಕೇಂದ್ರಗಳಾಗಿವೆ.
“ಉತ್ತಮ ಕಲಿಕೆ ಉಜ್ವಲ ಭವಿಷ್ಯ
ಡಾ.ಸತೀಶ್ ಕುಮಾರ್ ಎಸ್. ಹೊಸಮನಿ
ನಿರ್ದೇಶಕರು
ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು.
