ವಾಡಿ ಯಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಭರ್ಜರಿ ಗೆಲುವಿನ ಸಂಭ್ರಮ

ವಾಡಿ ಯಲ್ಲಿ  ಮೂರು ರಾಜ್ಯಗಳಲ್ಲಿನ ಬಿಜೆಪಿಯ ಭರ್ಜರಿ ಗೆಲುವಿನ ಸಂಭ್ರಮ

ವಾಡಿ ಯಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿಯ ಭರ್ಜರಿ ಗೆಲುವಿನ ಸಂಭ್ರಮ

ವಾಡಿ: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ,ಜಿಲ್ಲಾ ‌ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಹಾಗೂ ಜಿಲ್ಲಾ ಎಸ್ ಸಿ ಮೂರ್ಚಾ ಉಪಾಧ್ಯಕ್ಷ ರಾಜು ಮುಕ್ಕಣ್ಣ ಅವರು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಪರಿಶ್ರಮದ ಫಲವಾಗಿ ಇಂದು ಮೂರು ರಾಜ್ಯಗಳಲ್ಲಿ ಈ ಭರ್ಜರಿ ಜಯ ಸಾಧಿಸಲು ಸಾಧ್ಯವಾಗಿದೆ ಎಂದರು.

ದೇಶದ್ರೋಹಿ ಹಾಗೂ ಸಮಾಜಘಾತುಕ ಚಟುವಟಿಕೆಗಳ ಕಾರಣ ಪಶ್ಚಿಮ ಬಂಗಾಳ ಸರ್ಕಾರ ದೇಶಕ್ಕೆ ಆಘಾತಕಾರಿಯಾಗಿ ಪರಿಣಮಿಸಿತ್ತು.

ಭ್ರಷ್ಟಾಚಾರ, ದಬ್ಬಾಳಿಕೆ ಸೇರಿ ಜನ ವಿರೋಧಿ ಆಡಳಿತದಿಂದ ಅಲ್ಲಿಯ ಜನ ಬೇಸತ್ತಿದ್ದರು. ಟಿಎಂಸಿಯನ್ನು ಕಿತ್ತೊಗೆದಿದ್ದರಿಂದ ಈಗ ಅವರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ದೇಶದ ಜನ ಬಿಜೆಪಿ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಿದರ್ಶನವಾಗಿದೆ.

ಈ ಗೆಲುವು ಕೇವಲ ರಾಜಕೀಯ ಜಯವಲ್ಲ, ಇದು ಜನರ ವಿಶ್ವಾಸದ ಪ್ರತಿಫಲ. ಜನರು ಅಭಿವೃದ್ಧಿ, ಸುವ್ಯವಸ್ಥೆ ಮತ್ತು ಉತ್ತಮ ಆಡಳಿತವನ್ನು ಬೆಂಬಲಿಸಿದ್ದಾರೆ.ಮುಂದೆ ನಮ್ಮ ರಾಜ್ಯದಲ್ಲೂ ಇದೇ ವಾತಾವರಣ ಮೂಡಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ,ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಇಂಗಳಗಿ ಅಧ್ಯಕ್ಷ ಸೋಮು ಚವ್ಹಾಣ, ಮುಖಂಡರಾದ ಭಗವತ ಸುಳೆ,ರಾಮು ರಾಠೋಡ, ಅಶೋಕ ಪವಾರ,ಭೀಮರಾವ ದೊರೆ,ಗಿರಿಮಲ್ಲಪ್ಪ ಕಟ್ಟಿಮನಿ,ಅಶೋಕ ಹರನಾಳ, ಪೊಮಾ ರಾಠೋಡ,ಹರಿ ಗಲಾಂಡೆ,ಶಿವಶಂಕರ ಕಾಶೆಟ್ಟಿ,ಅಯ್ಯಣ್ಣ ದಂಡೋತಿ,ಮಲ್ಲಿಕಾರ್ಜುನ ಸಾತಖೇಡ,ರಿಚರ್ಡ್ ಮಾರೆಡ್ಡಿ,ಆನಂದ ಇಂಗಳಗಿ‌,ಅಯ್ಯಣ್ಣ ಅಳ್ಳೊಳ್ಳಿ,

ಯಂಕಮ್ಮ ಗೌಡಗಾಂವ,ನಿರ್ಮಲ ಇಂಡಿ,ಉಮಾಭಾಯಿ ಗೌಳಿ,ಶಿವಕುಮಾರ ಹೂಗಾರ,ಚಂದ್ರಶೇಖರ ಬೆಣ್ಣೂರ,ಚಂದ್ರು ಹೂಗಾರ ಸೇರಿದಂತೆ ಇತರರು ಇದ್ದರು.