ಪಂಚ ರಾಜ್ಯ ಚುನಾವಣಾ ಫಲಿತಾಂಶ ಮೋದಿ ಆಡಳಿತ - ಸಂವಿಧಾನಕ್ಕೆ ಸಿಕ್ಕ ಐತಿಹಾಸಿಕ ಜಯ : ಡಾ. ಉಮೇಶ್ ಜಾಧವ್
ಪಂಚ ರಾಜ್ಯ ಚುನಾವಣಾ ಫಲಿತಾಂಶ ಮೋದಿ ಆಡಳಿತ - ಸಂವಿಧಾನಕ್ಕೆ ಸಿಕ್ಕ ಐತಿಹಾಸಿಕ ಜಯ : ಡಾ. ಉಮೇಶ್ ಜಾಧವ್
ಕಲಬುರಗಿ : ಪಂಚ ರಾಜ್ಯಗಳ ಚುನಾವಣೆ ಭಾರತದಲ್ಲಿ ಇತಿಹಾಸದಲ್ಲಿ ಒಂದು ಐತಿಹಾಸಿಕ ದಿನವಾಗಿದ್ದು ಮೋದಿ ಆಡಳಿತಕ್ಕೆ ಹಾಗೂ ಸಂವಿಧಾನಕ್ಕೆ ಸಿಕ್ಕ ಜಯ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಹಾಗೂ ತಮಿಳುನಾಡು ಮತ್ತು ಕೇರಳಂ ರಾಜ್ಯಗಳಲ್ಲಿ ಬಿಜೆಪಿ ಗಣನೀಯವಾಗಿ ಶೇಕಡಾವಾರು ಮತ ಹೆಚ್ಚಿಸಿ ತನ್ನ ಪಾರಮ್ಯ ಮೆರೆದಿದೆ.ತಮಿಳು ನಾಡಿನಲ್ಲಿ ಸನಾತನ ವಿರೋಧಿ ನಿಲುವಿನ ಮುಖ್ಯಮಂತ್ರಿ ಪರಾಭಾವದ ಜೊತೆಗೆ ಡಿಎಂಕೆಯನ್ನು ಜನತೆ ತಿರಸ್ಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಮಿತ್ ಶಾ ,ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಎಲ್ಲ ನಾಯಕರ ಹಾಗೂ ತಳಮಟ್ಟದ ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮಕ್ಕೆ ಸಂದ ಜಯ ಇದಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸಂವಿಧಾನ ವಿರೋಧಿ ರಕ್ತ ತರ್ಪಣದ ರಾಜಕೀಯ ಅಂತ್ಯಗೊಂಡು ಶಾಂತಿ ವಿಶ್ವಾಸದ ಅಭಿವೃದ್ಧಿಯ ಹೊಸ ಇತಿಹಾಸ ಸೃಷ್ಟಿಯಾಗುವ ಶುಭ ದಿನ ಆರಂಭವಾಗಲಿದೆ.ಪಷಿಮಾ ಬಂಗಾಳದ ಗೆಲುವು ರಾಷ್ಟ್ರೀಯ ಸಮಗ್ರತೆಗೆ ಸಿಕ್ಕ ಜಯದೊಂದಿಗೆ ನವಮನ್ವಂತರ ಆರಂಭವಾಗಲಿದೆ.ಸಂವಿಧಾನ ವಿರೋಧಿ ಶಕ್ತಿಗಳಿಗೆ ಮತದಾರ ಈ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟ ಮತಾದೇಶವಾಗಿದೆ. ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳನ್ನು ಮೂಲೆಗುಂಪಾಗಿಸಿದೆ.ದೇಶದ ಮೂಲೆ ಮೂಲೆಗಳಲ್ಲಿ ಕಮಲ ಅರಳಿ ಜನತೆಯ ವಿಶ್ವಾಸ ಗಳಿಸಿ ಭಾರತ ಬಿಜೆಪಿಮಯವಾಗಿದೆ. ಎನ್ ಡಿ ಎ ಜನತೆಯ ವಿಶ್ವಾಸಗಳಿಸಿದೆ ಮೋದಿಯವರ ವಿಕಾಸದ ಸಂಕಲ್ಪ ಯಾತ್ರೆ ನಿರಂತರವಾಗಿ ಮುಂದುವರಿಯಲಿದೆ.ಬಿಜೆಪಿ ಎಲ್ಲೆಲ್ಲಿ ಇದೆಯೋ ಅಲ್ಲಿ ಅಭಿವೃದ್ಧಿ ನಿಶ್ಚಿತ ಎಂಬ ವಿಶ್ವಾಸ ಮೂಡಿದೆ ಎಂದರು.
ರಾಜ್ಯದ ಉಪ ಚುನಾವಣೆಯಲ್ಲಿ ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ವೀರೋಚಿತ ಸೋಲು ಕಂಡಿದೆ. ಆಡಳಿತಾರೂಢ ಕಾಂಗ್ರೆಸ್ ಸರಕಾರ ಹಣ ಮತ್ತು ಅಧಿಕಾರ ಬಳಸಿ ವಾಮಮಾರ್ಗದಲ್ಲಿ ಜಯ ಸಾಧಿಸಿದೆ ಎಂದು ಡಾ.ಜಾಧವ್ ದೂರಿದರು.
