ಸಾಮನ್ಯ ಮನುಷ್ಯನೂ ಸಾಧನೆ ಮಾಡಬಹುದು : ಡಾ| ಸೋಮನಾಥ ಯರನಾಳ
ಡಾ| ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಅಭಿನಂದನಾ ಸಮಾರಂಭ,
ಜನತೆಯ ಜಂಗಮ ಗ್ರಂಥ ಲೋಕಾರ್ಪಣೆ, ಅಮೃತಧಾರೆ ಧ್ವನಿಸುರಳಿ ಬಿಡುಗಡೆ,
ಸಾಮನ್ಯ ಮನುಷ್ಯನೂ ಸಾಧನೆ ಮಾಡಬಹುದು : ಡಾ| ಸೋಮನಾಥ ಯರನಾಳ
ಕಮಲನಗರ: ಪ್ರತಿಯೊಬ್ಬ ಸಾಮನ್ಯ ಮನುಷ್ಯನು ಬದುಕಿನಲ್ಲಿ ಸಾಧನೆ ಮಾಡಿದರೆ ಅದನ್ನು ಪರಮಾತ್ಮನನ್ನು ಒಲಿಸಿಕೊಂಡು ಸಮಾಜದಲ್ಲಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹುಮನಾಬಾದ್‍ನ ಹಿರಿಯ ಸಾಹಿತಿ ಡಾ| ಸೋಮನಾಥ ಯರನಾಳ ಹೇಳಿದರು.
ತಾಲ್ಲೂಕಿನ ಸಂಗಮ ಗ್ರಾಮದಲ್ಲಿ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರ ಅಮೃತಮಹೋತ್ಸವದ ಅಭಿನಂದನಾ ಸಮಾರಂಭ ಹಾಗೂ ಜನತೆಯ ಜಂಗಮ ಗ್ರಂಥ ಲೋಕಾರ್ಪಣೆ ಮತ್ತು ಧ್ವನಿ ಸುರಳಿ ಬಿಡುಗಡೆ ಸಮಾರಂಭದಲ್ಲಿ ಧ್ವನಿ ಸುರಳಿ ಬಿಡುಗಡೆಗೊಳಿಸಿ ಮಾತನಾಡಿದರು.
ಜಗತ್ತಿನಲ್ಲಿ ಸ್ವಾಮೀಜಿಗಳು, ಸನ್ಯಾಸಿಗಳೇ ಸಾಧನೆ ಮಾಡಬೇಕೆಂದಿಲ್ಲ. ಸಾಮನ್ಯ ಮನುಷ್ಯನು ಸಾಧನೆ ಮಾಡಬಹುದಾಗಿದೆ. ಅದಕ್ಕೆ ತಾಳ್ಮೆಯನ್ನು ಹೊಂದಿದಂತವನ್ನು ಈ ಸಾಧನೆ ಮಾಡಬಹುದಾಗಿದೆ. ಜೀವನದಲ್ಲಿ ಎಲ್ಲರಿಗೂ ಕಷ್ಟಗಳು ಬರುವುದು ಸಹಜ. ಆಗ ಯಾವ ಮನುಷ್ಯ ತಾಳ್ಮೆಯಿಂದ ಇದ್ದು ಬದುಕನ್ನು ನಗು-ನಗುತ್ತಾ ನಿರಾಸೆಗೊಳ್ಳದೆ ಸಾಗಿಸುತ್ತಾನೆ. ಆತ ಸಾಧನೆ ಮಾಡಿದ್ದಂತೆಯೇ ಆತ ಬಸವಣ್ಣನಿಗೆ ಒಲಿಸಿಕೊಂಡತೆಯೇ ಎಂದರು.
ದಿವ್ಯ ಸಾನಿಧ್ಯ ವಹಿಸಿದ ನಾಡೋಜ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಮಾಜದಲ್ಲಿ ಯಾವುದೇ ವ್ಯಕ್ತಿ ನಿಸ್ವಾರ್ಥದಿಂದ ಧಾರ್ಮಿಕ, ಸಾಮಾಜಿಕ ಕೆಲಸ ಮಾಡಲು ಮುಂದಾಗುತ್ತಾನೆಯೇ ಆತನಿಗೆ ಸಮಾಜ ಅನೇಕರು ಅವನಿಗೆ ಬೆನ್ನೆಲುಬಾಗಿ ನಿಂತು ಎಲ್ಲ ರೀತಿಯ ಸಹಾಯ-ಸಹಕಾರ ಕೊಡಲು ಮುಂದಾಗುತ್ತಾರೆ. ಪ್ರತಿಯೊಬ್ಬರೂ ವ್ಯಕ್ತಿಯ್ವ ಬೆಳೆಸಿಕೊಂಡು ಮಾರ್ಗದರ್ಶನ ಮಾಡುವಂತಹ ಕೆಲಸ ಮಾಡಬೇಕು. ದೂರದೃಷ್ಟಿ ಬರಬೇಕಾದರೆ ಮನಸ್ಸಿನ ತಪ್ಪಸ್ಸು ಬೆಳೆಸಿಕೊಂಡಾಗ ಮಾತ್ರ ಸಾಧ್ಯ ಎಂದರು.
ಸಾನಿಧ್ಯ ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಮ್ಮುಖ ಖೇಡ್-ಸಂಗಮ ನೀಲಾಂಬಿಕಾಶ್ರಮ ಡಾ| ಮಹಾದೇವಮ್ಮ ತಾಯಿ, ಜೈಪ್ರಕಾಶ ಬಿರಾದಾರ, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕ ಗೀತಾ ಈಶ್ವರ ಖಂಡ್ರೆ, ಹುಮನಾಬಾದ್ ರಾಜ ರಾಜೇಶ್ವರಿ ಟ್ರಸ್ಟ್ ಅಧ್ಯಕ್ಷೆ ಪ್ರೇಮಾ ರಾಜಶೇಖರ ಪಾಟೀಲ, ಯಾದಗಿರಿ ಡಿಹೆಚ್‍ಒ ಡಾ| ಮಹೇಶ ಪಾಟೀಲ, ಡಾ| ಭೀಮಸೇನ ಸಿಂಧೆ, ರಘು ಶಂಕರ ಇದ್ದರು.
ಸಂಜೀವಕುಮಾರ ಜುಮ್ಮ ನಿರೂಪಿಸಿದರು. ನಾಗಯ್ಯ ಸ್ವಾಮಿ ಸ್ವಾಗತಿಸಿದರು. ಸುನೀತಾ ಶಂಭುಲಿಂಗ ಪಾಟೀಲ ವಂದಿಸಿದರು.
