ಕಮಲನಗರ ಕರ್ನಾಟಕ ಪಬ್ಲಿಕ್ ಶಾಲೆಯ ಮಿಂಚಿನ ಸಾಧನೆ: 93.30%

ಕಮಲನಗರ ಕರ್ನಾಟಕ ಪಬ್ಲಿಕ್ ಶಾಲೆಯ ಮಿಂಚಿನ ಸಾಧನೆ: 93.30%

ಕಮಲನಗರ ಕರ್ನಾಟಕ ಪಬ್ಲಿಕ್ ಶಾಲೆಯ ಮಿಂಚಿನ ಸಾಧನೆ: 93.30%

ಕಮಲನಗರ, ಏ.26-ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಕಮಲನಗರದ ಉರ್ದು ಮಾಧ್ಯಮ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ 93.30% ಫಲಿತಾಂಶ ದಾಖಲಿಸಿದ್ದಾರೆ ಎಂದು ಮುಖ್ಯಗುರು ಸಂಜೀವಕುಮಾರ ತಿಳಿಸಿದ್ದಾರೆ.

ಒಟ್ಟು 30 ವಿದ್ಯಾರ್ಥಿಗಳಲ್ಲಿ 28 ಮಂದಿ ಉತ್ತೀರ್ಣರಾಗಿದ್ದು, ಶಾಲಿ ಯ೦ = ಸಾಧನೆ ಗಮನ ಸೌ೪ ದಿ .

ವಿಶೇಷವಾಗಿ ಉರ್ದು, ಕನ್ನಡ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿ.

ವಿದ್ಯಾರ್ಥಿನಿ ಫಿರದೋಷ ನಯುಮ್ - 95.20% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣಳಾಗಿದ್ದಾಳೆ. ಅವಳು ಉರ್ದು ವಿಷಯದಲ್ಲಿ 119, ಕನ್ನಡದಲ್ಲಿ 96, ಇಂಗ್ಲಿಷ್‌ನಲ್ಲಿ 98, ಗಣಿತದಲ್ಲಿ 88, ವಿಜ್ಞಾನದಲ್ಲಿ 99 ಹಾಗೂ ಸಮಾಜ ವಿಜ್ಞಾನದಲ್ಲಿ 95 ಅಂಕಗಳನ್ನು ಪಡೆದು ಒಟ್ಟು 595 ಅಂಕಗಳನ್ನು ಗಳಿಸಿದ್ದಾಳೆ.

ಇನ್ನಿತರ ವಿದ್ಯಾರ್ಥಿಗಳಾದ ಜವೇರಿಯಾ (83.52%), (84%), 2 (81.76%), , (78.08%), ಆಸಿಯಾ (77.12%) ಹಾಗೂ ಅನಿಷಾ (76.12%) ಉತ್ತಮ ಸಾಧನೆ ತೋರಿದ್ದಾರೆ.

ಒಟ್ಟು ಫಲಿತಾಂಶದಲ್ಲಿ 1 ಡಿಸ್ಟಿಂಕ್ಷನ್, 14 ಪ್ರಥಮ ದರ್ಜೆ, 9 ದ್ವಿತೀಯ ದರ್ಜೆ ಮತ್ತು 4 ಪಾಸ್ ಕ್ಲಾಸ್ ದಾಖಲಾಗಿವೆ.

ಕಮಲನಗರದಲ್ಲಿ ಸರ್ಕಾರಿ ಪ್ರೌಢ ಶಾಲೆ ಸ್ಥಾಪನೆಗೆ ಜನರ ಬಹುಕಾಲದ ಬೇಡಿಕೆ ಇತ್ತು. 2025-26ನೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಮೂಲಕ ಆರಂಭವಾದ ಈ ಸಂಸ್ಥೆ, ಮೊದಲನೇ ವರ್ಷದಲ್ಲೇ ಉರ್ದು ಮಾಧ್ಯಮ ವಿದ್ಯಾರ್ಥಿಗಳಿಂದ ಉತ್ತಮ ಫಲಿತಾಂಶ ತಂದುಕೊಟ್ಟಿರುವುದು ವಿಶೇಷವಾಗಿದೆ.

ಈ ಸಾಧನೆಗೆ ಶಾಲೆಯ ಮುಖ್ಯಗುರು ಸಂಜೀವಕುಮಾರ ಡೋಂಗ್ರೆ ಹಾಗೂ ಶಿಕ್ಷಕರಾದ ಮಹ್ಮದ್ ಫಯುಮ್ (ಗಣಿತ), ಮಹಾದೇವ ಮಡಿವಾಳ (ಕನ್ನಡ), ಆನಂದ್ (ಇಂಗ್ಲಿಷ್), ಅತಿಥಿ ಶಿಕ್ಷಕರಾದ ಶೇಖ್ ಶಕೀಲ್, ಸೋಭಿಯಾ ಮತ್ತು ಐಷಾ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ.