ಐದನೇ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಶೀಲ್ ಜಿ. ನಮೋಶಿ ಅವರಿಗೆ ಸನ್ಮಾನ

ಐದನೇ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಶೀಲ್ ಜಿ. ನಮೋಶಿ ಅವರಿಗೆ ಸನ್ಮಾನ

ಐದನೇ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಶಶೀಲ್ ಜಿ. ನಮೋಶಿ ಅವರಿಗೆ ಸನ್ಮಾನ

ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಐದನೇ ಬಾರಿ ಆಯ್ಕೆಯಾಗಿರುವ ಸದಸ್ಯ ಶಶೀಲ್ ಜಿ. ನಮೋಶಿ ಅವರನ್ನು ನಗರದ ಋಬಾ ಪ್ಲಾಟ್‌ನ ಈಶ್ವರ ಮಂದಿರದಲ್ಲಿ ಬಿಜೆಪಿ ಕಲಬುರಗಿ ಜಿಲ್ಲಾ ರೈತ ಮೋರ್ಚಾದ ಕೋಶಾಧ್ಯಕ್ಷ ಮಲ್ಲಿನಾಥ ಪಾಟೀಲ ಕಾಳಗಿ ಅವರು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಂದಿರದ ಅರ್ಚಕರಾದ ಸಿದ್ದರಾಮಯ್ಯ, ನಂದಿಕೋಲ್, ವಿನಯ ಶಹಾ, ಮಲ್ಲಣ್ಣಗೌಡ ಗೌವರ್, ಮಹೇಶ, ದೀಪಕ್, ಕೈಲಾಸ ಆಸ್ಪಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.